»   » 'ಬೆತ್ತಲೆ' ವಿಡಿಯೋ: ನಿರ್ದೇಶಕರಿಗೆ 'ಕೀಳು' ಭಾಷೆಯಲ್ಲಿ 'ಉಗಿದ' ಹುಚ್ಚ ವೆಂಕಟ್

'ಬೆತ್ತಲೆ' ವಿಡಿಯೋ: ನಿರ್ದೇಶಕರಿಗೆ 'ಕೀಳು' ಭಾಷೆಯಲ್ಲಿ 'ಉಗಿದ' ಹುಚ್ಚ ವೆಂಕಟ್

Posted By:
Subscribe to Filmibeat Kannada

ಇಷ್ಟು ದಿನ ಸೈಲೆಂಟ್ ಆಗಿದ್ದ ಹುಚ್ಚ ವೆಂಕಟ್ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ವೈಲೆಂಟ್ ಆಗ್ಬಿಟ್ಟಿದ್ರು. ಅದಕ್ಕೆ ಕಾರಣ, ನಟಿ ಸಂಜನಾ ರವರ 'ಬೆತ್ತಲೆ' ವಿಡಿಯೋ.!

ಕಳೆದ ಎರಡು ದಿನಗಳಿಂದ ಕನ್ನಡದ ಯಾವ ನ್ಯೂಸ್ ಚಾನೆಲ್ ಹಾಕಿದರೂ, '2' (ದಂಡುಪಾಳ್ಯ 2) ಚಿತ್ರದಲ್ಲಿ ಸೆನ್ಸಾರ್ ಆಗಿರುವ ಸಂಜನಾ ರವರ 'ಬೆತ್ತಲೆ?' ವಿಡಿಯೋನೇ ಕಣ್ಣಿಗೆ ರಾಚುತ್ತಿದೆ. ಅದನ್ನ ನೋಡಿದ ಮೇಲೆ ''ಐಟಂ ಸಾಂಗ್ ವಿರೋಧಿ'' ಹುಚ್ಚ ವೆಂಕಟ್ ಪಿತ್ತ ನೆತ್ತಿಗೇರಿದೆ.


ಟೆಂಪರ್ ರೈಸ್ ಮಾಡಿಕೊಂಡ ವೆಂಕಟ್, ತಮ್ಮ ಹಳೇ ಸ್ಟೈಲ್ ನಲ್ಲಿ ಕ್ಯಾಮರಾ ಮುಂದೆ ಬಂದು '2' (ದಂಡುಪಾಳ್ಯ 2) ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜುಗೆ ಯರ್ರಾಬಿರ್ರಿ ಉಗಿದಿದ್ದಾರೆ. ತೀರಾ ಕೆಟ್ಟ, ಕೊಳಕು, ಕೀಳು ಭಾಷೆಯಲ್ಲಿ ನಿಂದಿಸಿದ್ದಾರೆ. ಮುಂದೆ ಓದಿರಿ....


ಏಕವಚನ ಪ್ರಯೋಗ

''ಶ್ರೀನಿವಾಸ್ ರಾಜು... ನೀನೊಬ್ಬ ನಿರ್ದೇಶಕನೇನೋ... ಹೆಣ್ಮಕ್ಳು ಅಂದ್ರೆ ಗೊತ್ತೇನೋ...'' ಎಂದು ಏಕವಚನದಲ್ಲಿ 'ಕೊಳಕು ಭಾಷೆ'ಯಲ್ಲಿ ಹುಚ್ಚ ವೆಂಕಟ್ ಆವಾಝ್ ಹಾಕಿದ್ದಾರೆ.


ಹೆಂಗೋ ಇದ್ಯಾ.?

''ಈಗ ಬಿಟ್ಟಿರುವ ವಿಡಿಯೋ ಗ್ರಾಫಿಕ್ಸ್ ಅಥವಾ ನಿಜವೋ ಗೊತ್ತಿಲ್ಲ. ಆದರೆ ಹೆಂಗೋ ಇದ್ಯಾ ನೀನು ಕರ್ನಾಟಕದಲ್ಲಿ.?'' - ಹುಚ್ಚ ವೆಂಕಟ್


ಸಿನಿಮಾ ನೋಡಿದವರಿಗೂ ಉಗಿದ ಹುಚ್ಚ ವೆಂಕಟ್

''ಈಗ ಹೇಳ್ತಾಯಿದ್ದೀನಿ ಕೇಳಿ... ಯಾರ್ಯಾರು ಈ ಸಿನಿಮಾ ನೋಡಿದ್ದಾರೋ... ಥೂ...ನಿಮಗೆಲ್ಲ ಹೆಂಡ್ತಿ, ಮಕ್ಳು ಇಲ್ವಾ.? ಈ ತರಹ ಸಿನಿಮಾ ನೋಡೋದಾ ನೀವು.? ನಾಳೆ ದಿನ ನಿಮ್ಮ ಮನೆ ಹೆಣ್ಮಕ್ಕಳು ಇದೇ ತರಹ ಕೆಟ್ಟದಾಗಿ ನೋಡುತ್ತಾರೆ. ಆಗ ಚಪ್ಪಾಳೆ ಹೊಡೆಯಿರಿ...'' - ಹುಚ್ಚ ವೆಂಕಟ್


ನನ್ ಎಕ್ಕಡ...

''ಈ ಸಿನಿಮಾನ ಗೆಲ್ಲಿಸ್ತೀರಾ.? ನನ್ ಎಕ್ಕಡ... ಒಳ್ಳೊಳ್ಳೆ ಸಿನಿಮಾ ಸೋಲಿಸ್ತೀರಾ.? ನಿಮ್ಮದೂ ಒಂದು ಜನ್ಮನಾ.?'' - ಹುಚ್ಚ ವೆಂಕಟ್


ನೆಮ್ಮದಿ ಆಗಿ ಇರೋಕ್ ಬಿಡ್ಬೇಕ್

''ನಾನು ನೆಮ್ಮದಿ ಆಗಿರೋಕೆ ಬಿಡ್ಬೇಕ್... ನೀವು ಒಳ್ಳೆ ಕೆಲಸ ಮಾಡ್ಕೊಂಡ್ ಇರ್ಬೇಕ್'' ಎಂದು ಎಲ್ಲರಿಗೂ ಹುಚ್ಚ ವೆಂಕಟ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...


English summary
Huccha Venkat uses abusive language on 'Dandupalya' Director Srinivas Raju in connection with Kannada Actress Sanjana's leaked video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada