»   » ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದಾ ಶಿವರಾಜ್ ವಜ್ರಕಾಯ?

ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದಾ ಶಿವರಾಜ್ ವಜ್ರಕಾಯ?

Posted By:
Subscribe to Filmibeat Kannada

ಸುದೀಪ್ ಅವರ ರೀಮೇಕ್ ಚಿತ್ರ 'ರನ್ನ' ಭರ್ಜರಿ ಯಶಸ್ಸು ಕಾಣುತ್ತಿರುವುದರಿಂದ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸ್ವಮೇಕ್ ಚಿತ್ರ 'ವಜ್ರಕಾಯ'ದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಾಗಿದೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇದಕ್ಕೆ ಸುದೀಪ್ ಮತ್ತು ಶಿವರಾಜ್ ನಡುವಿನ ಸ್ಟಾರ್ ವಾರ್ ಅಂತೂ ಖಂಡಿತ ಅಲ್ಲವೇ ಅಲ್ಲ. ನೃತ್ಯ ನಿರ್ದೇಶಕ ಹರ್ಷ ಅವರೇ ನಿರ್ದೇಶಿಸಿದ್ದ 'ಭಜರಂಗಿ' ಹಿಟ್ ಆದ ನಂತರ ಸಹಜವಾಗಿ ಇವರಿಬ್ಬರ ಕಾಂಬಿನೇಷನ್ ಇರುವ 'ವಜ್ರಕಾಯ' ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. [ಶಿವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ : ಕಿಚ್ಚ ಸುದೀಪ್]


ಭಜರಂಗಿ ನಂತರ ಶಿವಣ್ಣ ಅಭಿನಯಿಸಿದ್ದ ಆರ್ಯನ್ ಮತ್ತು ಬೆಳ್ಳಿ ಚಿತ್ರಗಳು ನೆಲಕಚ್ಚಿದ್ದರಿಂದ ವಜ್ರಕಾಯದ ಮೇಲಿನ ನಿರೀಕ್ಷೆಗಳು ಹನುಮಂತನ ಬಾಲದಷ್ಟೇ ಉದ್ದವಾಗಿದೆ. ಶಿವರಾಜ್ ಜೊತೆ ಮೂವರು ನಾಯಕಿಯರಾದ ಕಾರುಣ್ಯ ರಾಮ್, ನಭಾ ನಟೇಶ್, ಶುಭ್ರಾ ಅಯ್ಯಪ್ಪ ಮತ್ತು ಹಿರಿಯ ನಟಿ ಜಯಸುಧಾ ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ.


ಭಜರಂಗಿಯಂತೆ ವಜ್ರಕಾಯದಲ್ಲೂ ಹನುಮಾನ್ ಶಕ್ತಿ ಮೇಳೈಸಲಿದೆಯಾದರೂ, ಹಿಂದಿನ ಚಿತ್ರಕ್ಕೂ ಇಂದಿನ ಚಿತ್ರಕ್ಕೂ ಸಂಬಂಧವಿಲ್ಲ ಎಂದು ನಿರ್ದೇಶಕ ಹರ್ಷ ಸ್ಪಷ್ಟಪಡಿಸಿದ್ದಾರೆ. ಅಪಾರ ನಿರೀಕ್ಷೆಗಳನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ವಜ್ರಕಾಯ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುವುದಾ? [ಮತ್ತೊಮ್ಮೆ ಹನುಮಂತನ ಮೊರೆಹೋದ ಭಜರಂಗಿ ಹರ್ಷ]


ಶಿವಣ್ಣನಿಗೆ ಮೂವರು ನಾಯಕಿಯರು

ಕಣ್ಣು ಕುಕ್ಕುವಂಥ ಮೂವರು ಸುರಸುಂದರಿಯರು ಈ ಚಿತ್ರದಲ್ಲಿ ಶಿವರಾಜ್ ಅವರಿಗೆ ಜೊತೆಯಾಗಿದ್ದಾರೆ. ಕಾರುಣ್ಯಾ ರಾಮ್, ಶುಭ್ರಾ ಅಯ್ಯಪ್ಪ ಮತ್ತು ನಭಾ ನಟೇಶ್. ಅಭಿಮಾನಿಗಳ ಕಣ್ಣಿಗೆ ಹಬ್ಬವೋ ಹಬ್ಬ.


ಮತ್ತೆ ಹನುಮನ ಮೊರೆ ಹೋದ ಹರ್ಷ

ಭಜರಂಗಿಯಲ್ಲೂ ಹನುಮಾನ್ ಗೆ ಶರಣಾಗಿದ್ದ ಹರ್ಷ, ವಜ್ರಕಾಯದಲ್ಲೂ ಆಂಜನೇಯನಿಗೆ ಅಡ್ಡಬಿದ್ದಿದ್ದಾರೆ. ಭಜರಂಗಿ ಅಂದ್ರೂ ಹನುಮನೆ, ವಜ್ರಕಾಯ ಅಂದ್ರೂ ಹನುಮನೆ.


ಪ್ರಥಮ ಬಾರಿಗೆ ಕನ್ನಡದಲ್ಲಿ ಧನುಷ್

ಕೋಲಾವೆರಿ ಡಿ ಹಾಡಿನಿಂದ ಸಿಕ್ಕಾಪಟ್ಟೆ ಫೇಮಸ್ ಆಗಿರುವ ತಮಿಳು ನಟ ಧನುಷ್ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದಾರೆ. ನೋ ಪ್ರಾಬ್ಲಂ ಎಂಬ ಹಾಡಿಗೆ ದನಿಯಾಗಿದ್ದಾರೆ. ಶರಣ್ ಕೂಡ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.


ದಕ್ಷಿಣದ ಸ್ಟಾರುಗಳ ಸ್ಟೆಪ್ಸು

ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟರುಗಳನೇಕರು ಸ್ಟೆಪ್ಸ್ ಹಾಕಿರುವುದು ವಿಶೇಷ.


ಶಿವಣ್ಣನ ಜೊತೆ ರವಿತೇಜಾ ಟಪ್ಪಾಂಗುಚ್ಚಿ

ತೆಲುಗಿನ ಸೂಪರ್ ಸ್ಟಾರ್ ರವಿತೇಜಾ ಅವರು ಶಿವರಾಜ್ ಕುಮಾರ್ ಜೊತೆ ಭರ್ಜರಿಯಾಗಿ ನರ್ತಿಸಿರುವುದು ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ.


ಪಡ್ಡೆಗಳಿಗೆ ನಭಾ ನಟೇಶ್ ರಸದೌತಣ

53ರ ಹರೆಯದ ಶಿವರಾಜ್ ಕುಮಾರ್ ಅವರಿಗೆ ಟೀನೇಜ್ ಬ್ಯೂಟಿ ನಭಾ ನಟೇಶ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಯಕಿಯರು ಮಾತ್ರವಲ್ಲ ಇತರ ಪಾತ್ರವರ್ಗದಲ್ಲೂ ಹೊಸಮಿಂಚುಗಳು ತುಂಬಿಕೊಂಡಿವೆ.


ಕನ್ನಡಕ್ಕೆ ಮರಳಿದ ಜಯಸುಧಾ

ನೀ ತಂದ ಕಾಣಿಕೆ, ತಾಯಿಯ ಮಡಿಲು ಚಿತ್ರಗಳಲ್ಲಿ ಅಭಿನಯಿಸಿದ್ದ ದಕ್ಷಿಣದ ಖ್ಯಾತ ಅಭಿನೇತ್ರಿ ಜಯಸುಧಾ ಬಹುವರ್ಷಗಳ ನಂತರ ಮತ್ತೆ ಮರಳಿದ್ದಾರೆ. ಅವರು ಶಿವಣ್ಣನ ತಾಯಿಯಾಗಿ ಅಭಿನಯಿಸುತ್ತಿದ್ದಾರೆ.


ಇಟಲಿಯಲ್ಲಿ ಚಿತ್ರೀಕರಣ

ಹಾಡಿನ ಕೆಲ ದೃಶ್ಯಗಳನ್ನು ಇಟಲಿಯಲ್ಲಿ ಚಿತ್ರೀಕರಿಸಲಾಗಿದ್ದು, ಭಾರೀ ಶ್ರೀಮಂತವಾಗಿ ಮೂಡಿಬಂದಿದೆ ಎನ್ನುತ್ತಾರೆ ಹರ್ಷ. ಅಲ್ಲದೆ, ರವಿಚಂದ್ರನ್, ಸಿವಕಾರ್ತಿಕೇಯನ್, ದಿಲೀಪ್ ಮುಂತಾದವರು ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ.


English summary
Vajrakaya is the most expected movie of Shiva Rajkumar, directed by Harsha. The movie stars Shivanna, Karunya Ram, Nabha Natesh, Shubra Aiyappa and Jayasudha in vital roles. Actors Avinash, Sadhu Kokila, Padmaja Rao and others in the supporting roles. Will this original movie break box office records?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X