ಹೈದರಾಬಾದಿನಲ್ಲಿ ತಾರೆ ಅಕ್ಕಿನೇನಿ ಅಮಲಾ ಬಂಧನ

"Stop Coal Mining Save Indian Forests" ಎಂಬ ಬ್ಯಾನರ್‌ನ್ನು ಚಾರ್ಮಿನಾರ್ ಮೇಲೆ ಕಟ್ಟಿದ್ದು. ಗ್ರೀನ್‌ಪೀಸ್ ಸಂಘಟನೆಯ ಕಾರ್ಯಕರ್ತೆಯೂ ಆಗಿರುವ ಅಮಲಾ ಈ ಬ್ಯಾನರ್‌ಗಳನ್ನು ಕಟ್ಟಿಸಿದ್ದರು. ಇದಕ್ಕಾಗಿ ಈಕೆ ಹಾಗೂ ಇತರೆ ಗ್ರೀನ್ ಪೀಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಕಲ್ಲಿದ್ದಲು ಗಣಿಗಾರಿಕೆಯಿಂದ ಪರಿಸರ ಹಾಳಾಗುವುದಷ್ಟೇ ಅಲ್ಲ, ಲಕ್ಷಾಂತರ ಮಂದಿ ಗಿರಿಜನರ ಬದುಕು ನಾಶವಾಗುತ್ತದೆ. ಲಕ್ಷಾಂತರ ಪ್ರಾಣಿ ಸಂಕುಲ ನಶಿಸುತ್ತದೆ. ಬಂಗಾಳದ ಹುಲಿ ಸಂತತಿಯೂ ಈಗಾಗಲೆ ನಿರ್ನಾಮದ ಹಾದಿಯಲ್ಲಿದ್ದು ಅವು ಉಳಿಯುವುದಿಲ್ಲ ಎಂದಿದ್ದಾರೆ ಅಮಲಾ.
ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಇತ್ತೀಚೆಗೆ 13 ಕಲ್ಲಿದ್ದಲು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇದಕ್ಕೆ ದೇಶದಾದ್ಯಂತೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದ 10 ಲಕ್ಷ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅಪಾರ ವನ್ಯ ಸಂಪತ್ತಿಗೆ ಕೊಡಲಿ ಏಟು ಬೀಳಲಿದೆ ಎಂದು ಪ್ರತಿಭಟಿಸಲಾಗಿತ್ತು.
ಅಮಲಾ ಅವರನ್ನು ಚಾರ್ಮಿನಾರ್ ಪೊಲೀಸರು ಬಂಧಿಸಿದ ಬಳಿಕ ಅವರನ್ನು ಠಾಣೆಗೆ ಕರೆದೊಯ್ದು ಬಳಿಕ ಬಾಂಡ್ ಪತ್ರಕ್ಕೆ ಸಹಿ ಮಾಡಿಸಿಕೊಂಡು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











