Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನನ್ನ ಮಗ ಭಾರತದಲ್ಲಿ ಗಾಯಕನಾಗುವುದು ಬೇಡ: ಸೋನು ನಿಗಮ್ ಹೀಗೆನ್ನಲು ಕಾರಣವೇನು?
ಮಗ ನನ್ನ ವೃತ್ತಿ ಮುಂದುವರೆಸಲಿ, ನಾನು ಏರಲಾಗದಿದ್ದ ಎತ್ತರವನ್ನು ಮಗ ಏರಲಿ ಎಂಬುದು ತಂದೆಯ ಆಸೆ. ಸ್ಟಾರ್ ನಟರ, ರಾಜಕಾರಣಿಗಳ ಆಸೆಯೂ ಬಹುತೇಕ ಇದೆ. ಹಾಗಾಗಿಯೇ ಇಂದು ನೆಪೊಟಿಸಂ ಚರ್ಚೆ ಎದ್ದಿರುವುದು.
ಆದರೆ ಖ್ಯಾತ ಗಾಯಕ ಸೋನು ನಿಗಮ್ ಆಸೆ ಬೇರೆ, ಹಿಂದಿ, ಕನ್ನಡ, ತೆಲುಗು, ತಮಿಳು, ಮರಾಠಿ, ಇಂಗ್ಲಿಷ್, ಬೆಂಗಾಲಿ ಹೀಗೆ ಹಲವು ಭಾಷೆಗಳಲ್ಲಿ ಹಾಡಿರುವ ಸೋನು ನಿಗಮ್‌ಗೆ ತಮ್ಮ ಮಗ ನಿವಾನ್ ನಿಗಮ್ ಹಾಡುಗಾರನಾಗುವುದು ಇಷ್ಟವಿಲ್ಲ. ಅದರಲ್ಲಿಯೂ ಭಾರತದಲ್ಲಿ ಮಗ ಹಾಡುಗಾರನಾಗುವುದು ಸುತಾರಾಂ ಇಷ್ಟವಿಲ್ಲ.
ನನ್ನ ಮಗ ಗಾಯಕನಾಗುವುದು ನನಗೆ ಇಷ್ಟವಿಲ್ಲ, ಅದರಲ್ಲಿಯೂ ಭಾರತದಂಥಹಾ ದೇಶದಲ್ಲಿ ನನ್ನ ಮಗ ಗಾಯಕನಾಗುವುದಂತೂ ಬೇಡವೇ ಬೇಡ ಎಂದಿದ್ದಾರೆ ಸೋನು ನಿಗಮ್. ಗಾಯಕನಾಗಿ ಸೋನು ನಿಗಮ್ ಅನ್ನು ಪ್ರೀತಿಸಿದ, ಗೌರವಿಸಿದ, ಹಣ, ಹೆಸರು ಕೊಟ್ಟ ಭಾರತದಲ್ಲಿ ಮಗನೇಕೆ ಗಾಯಕನಾಗಬಾರದು ಎನ್ನುತ್ತಿದ್ದಾರೆ ಸೋನು ನಿಗಮ್?

ಈ ದೇಶದಲ್ಲಿ ಅವನು ಗಾಯಕನಾಗುವುದು ಬೇಡ: ಸೋನು
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು ನಿಗಮ್, 'ನಿಜ ಹೇಳಬೇಕೆಂದರೆ ನನ್ನ ಮಗ ಗಾಯಕನಾಗುವುದು ನನಗೆ ಇಷ್ಟವಿಲ್ಲ. ಈ ದೇಶಲ್ಲಂತೂ ಅವನು ಗಾಯಕನಾಗುವುದು ಬೇಡವೇ ಬೇಡ' ಎಂದಿದ್ದಾರೆ ಸೋನು ನಿಗಮ್.

ಅನನ್ನು ದೇಶದಿಂದ ಹೊರಗೆ ಕರೆದುಕೊಂಡುಹೋಗಿದ್ದೀನಿ: ಸೋನು ನಿಗಮ್
ಮುಂದುವರೆದು, 'ಅವನು ಹುಟ್ಟುತ್ತಲೇ ಹಾಡುಗಾರ, ಆದರೆ ಅವನು ಈ ದೇಶದಲ್ಲಿ ಇರುವುದಿಲ್ಲ, ಈ ದೇಶದಿಂದ ಅವನನ್ನು ಹೊರಕ್ಕೆ ಕರೆದುಕೊಂಡು ಹೋಗಿಬಿಟ್ಟಿದ್ದೇನೆ. ಅವರು ದುಬೈ ನಲ್ಲಿ ವಾಸಿಸುತ್ತಾನೆ. ಅವನು ಅಲ್ಲಿಯೇ ಇರಲಿದ್ದಾನೆ' ಎಂದಿದ್ದಾರೆ ಸೋನು ನಿಗಮ್.

ದುಬೈನಲ್ಲಿ ಟಾಪ್ ಗೇಮರ್‌ಗಳಲ್ಲಿ ಒಬ್ಬನಾತ: ಸೋನು
ದುಬೈನಲ್ಲಿ ಅವನು ಟಾಪ್ ಗೇಮರ್‌ಗಳಲ್ಲಿ ಒಬ್ಬ. ಅಲ್ಲಿ ಫೋರ್ಟ್‌ನೈಟ್ ಎಂಬ ಗೇಮ್ ಇದೆ, ಅದರಲ್ಲಿ ಟಾಪ್ ಎರಡನೇ ಆಟಗಾರ ನನ್ನ ಮಗ. ಅವನಿಗೆ ಸಾಕಷ್ಟು ಪ್ರತಿಭೆಗಳಿವೆ. ಅವನು ಬಹಳ ಬುದ್ಧಿವಂತ, ಅವನು ಜೀವನದಲ್ಲಿ ಏನಾಗಬೇಕು ಎಂಬುದನ್ನು ನಾನು ಹೇಳಿಕೊಡಬೇಕಾಗಿಲ್ಲ' ಎಂದಿದ್ದಾರೆ ಸೋನು ನಿಗಮ್.
Recommended Video

ಲೈಕ್ಸ್, ವೀವ್ಸ್‌ಗಳ ಮೇಲೆ ನನಗೆ ನಂಬಿಕೆ ಇಲ್ಲ: ಸೋನು ನಿಗಮ್
ಸಾಮಾಜಿಕ ಜಾಲತಾಣದಲ್ಲಿ ಹಣ ಕೊಟ್ಟು ವೀವ್ಸ್ ಹೆಚ್ಚಿಸಿಕೊಳ್ಳುವ ಬಗ್ಗೆಯೂ ಅದೇ ಸಂದರ್ಶನದಲ್ಲಿ ಮಾತನಾಡಿರುವ ಸೋನು ನಿಗಮ್, 'ನನಗೆ ನನ್ನ ಕೆಲಸದ ಮೇಲೆ ವಿಶ್ವಾಸವಿದೆ. ಲೈಕ್ಸ್ ಮತ್ತು ವೀವ್ಸ್ ಮೇಲಲ್ಲ. ಎಷ್ಟೇ ವೀವ್ಸ್ ಬಂದರು ನೀನು ಅದನ್ನು ಹಣ ಕೊಂಡುಕೊಂಡಿದ್ದಾಗ ಅದರಿಂದ ಪ್ರಯೋಜನವಿಲ್ಲ. ನನ್ನ ಎಷ್ಟೋ ಹಾಡುಗಳನ್ನು ಸೋನಿ ಸರಿಯಾಗಿ ಪ್ರಚಾರ ಮಾಡಲಿಲ್ಲ, ಆದರೂ ಅವು ಬಹಳ ಹಿಟ್ ಆಗಿವೆ' ಎಂದಿದ್ದಾರೆ ಸೋನು ನಿಗಮ್.