»   » ಮತ್ತೆ ಬಣ್ಣ ಹಚ್ಚಿದ ಕನ್ನಡದ ಗೊಂಬೆ ಪೂಜಾ

ಮತ್ತೆ ಬಣ್ಣ ಹಚ್ಚಿದ ಕನ್ನಡದ ಗೊಂಬೆ ಪೂಜಾ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮಿಳು, ಸಿಂಹಳ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ಕರ್ನಾಟಕದ ಶೃಂಗೇರಿ ಮೂಲದ ಪೂಜಾ ಉಮಾಶಂಕರ್ ಕೆಲ ಕಾಲ ವಿರಾಮದ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬಂದಿದ್ದ ಒಂದು ವರದಿಯಿಂದ ನೊಂದು ತಮ್ಮ ಅಳಲು ತೋಡಿಕೊಂಡಿದ್ದ ಪೂಜಾ ಈಗ ಮತ್ತೊಮ್ಮೆ ತಮ್ಮ ವೃತ್ತಿ ಬದುಕಿನತ್ತ ಚಿತ್ತ ಹರಿಸಿದ್ದಾರೆ.

ಬೆಂಗಳೂರಿನ ಹೆಣ್ಣೂರಿನ ನಿವಾಸಿಯಾಗಿರುವ ಪೂಜಾ ಅವರು ಕಳೆದ ವರ್ಷ ಕುಸಾ ಪಭಾ ಎಂಬ ಸಿಂಹಳ ಚಿತ್ರದಲ್ಲಿ ನಟಿಸಿ ಪ್ರಶಸ್ತಿಯನ್ನು ಗಳಿಸಿದ್ದಾರೆ. ಈ ನಡುವೆ mirage ಎಂಬ ಇಂಗ್ಲೀಷ್ ಕಿರುಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಪೂಜಾ ಅವರು ನಟಿಸಿರುವ ವಿಡಿಯುಂ ಮುನ್ನ್ ಎಂಬ ತಮಿಳು ಚಿತ್ರ ನವೆಂಬರ್ 29ರಂದು ಬಿಡುಗಡೆಯಾಗಲಿದೆ.

ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪೂಜಾ ಅವರ ನಟನೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡಾ ಮಾರುಹೋಗಿದ್ದರು. ನಾನ್ ಕಡವುಳ್ ಚಿತ್ರದಲ್ಲಿ ಕುರುಡಿ ಪಾತ್ರದಲ್ಲಿ ನಟಿಸಿದ ಪೂಜಾ ಅವರಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಚಿತ್ರ ನೀಡಿ ರಜನಿ ಹರಸಿದ್ದರು.

ಹೀಗೆ ಕುರುಡಿ, ಬಿರಿಯಾನಿ ಅಂಗಡಿ ಹುಡುಗಿ, ಹಳ್ಳಿ ಹೆಂಗಸು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪೂಜಾ ಡಿಗ್ಲಾಮರಸ್ ಆಗುತ್ತಿದ್ದಾರೆಯೇ? ಗ್ಲಾಮರ್ ಪಾತ್ರದಿಂದ ಪೂಜಾ ದೂರವುಳಿಯುತ್ತಿದ್ದಾರೆಯೇ? ಎಂಬ ಪ್ರಶ್ನೆ ಇಟ್ಟುಕೊಂಡು ಐಎಎನ್ ಎಸ್ ತಂಡ ನಡೆಸಿದ ಸಂದರ್ಶನದ ವೇಳೆ ಮಾತನಾಡಿದ ಪೂಜಾ' ಯಾವ ನಟಿಯೂ ಸುಮ್ಮನೆ ಕೆಟ್ಟದಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಪಾತ್ರಕ್ಕೆ ತಕ್ಕಂತೆ ಮೇಕಪ್ ಇರುತ್ತದೆ. ಇದು ಬಣ್ಣದ ಲೋಕ. ನಾನು ಗ್ಲಾಮರ್ ಪಾತ್ರದಿಂದ ದೂರವಾಗಿಲ್ಲ ಎಂದಿದ್ದಾರೆ. ಪೂರ್ಣ ವರದಿ ಇಲ್ಲಿದೆ ತಪ್ಪದೇ ಓದಿ...

ಪಾತ್ರಗಳು ಮುಖ್ಯ

ನಾನು ನನ್ನ ಪಾತ್ರಗಳಿಂದ ಗುರುತಿಸಿಕೊಳ್ಳಬೇಕು ಹೀಗಾಗಿ ನಾನು ಮೇಕಪ್ ರಹಿತ ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಿದೆ. ಗ್ಲಾಮರ್ ಚಿತ್ರದ ಒಂದು ಭಾಗವಾಗೇ ವಿನಹ ಅದೇ ಎಲ್ಲಾ ಆಗಬಾರದು. ಬಿಡುವಿನ ವೇಳೆಯಲ್ಲಿ ಸಿಂಹಳ ಚಿತ್ರಗಳಲ್ಲಿ ನಟಿಸಿದೆ ಎಲ್ಲವೂ ಯಶಸ್ವಿಯಾದವು, ಪ್ರಶಸ್ತಿ ತಂದುಕೊಟ್ಟಿತು.

ಜೇ ಜೇ ಚಿತ್ರದಲ್ಲಿ ನಗರದ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ ನಂತರ ಆಫ್ ಬೀಟ್ ಪಾತ್ರಗಳನ್ನು ಆಯ್ಕೆ ಮಾಡಲು ಮುಂದಾದೆ. ರಜನಿ ಅವರ ಸಲಹೆ ಮೇರೆಗೆ ಉತ್ತಮ ಪಾತ್ರಗಳತ್ತ ಗಮನಹರಿಸತೊಡಗಿದೆ. ಕುರುಡಿ, ಭಿಕ್ಷುಕಿ, ಶ್ರೀಲಂಕಾ ಚಿತ್ರದಲ್ಲಿ ರಾಣಿಯಾಗಿ ನಟಿಸಿದೆ ಪಾತ್ರಕ್ಕೆ ತಕ್ಕ ತಯಾರಿ ಇದ್ದೆ ಇರುತ್ತೆ

ಒಂದೇ ಥರಾ ಪಾತ್ರ ಇಷ್ಟವಿಲ್ಲ

ನಾಯಕಿ ಪಾತ್ರಕ್ಕೆ ಯಾವುದೇ ಸ್ಕೋಪ್ ಇಲ್ಲದೆ ಇರುವ ಚಿತ್ರಗಳ ಆಫರ್ ಅನ್ನು ರಿಜೆಕ್ಟ್ ಮಾಡಿದೆ. ಒಂದೇ ರೀತಿ ಪಾತ್ರಗಳಲ್ಲಿ ಕಾಣಿಸಿಕೊಂಡು ಜನರಿಗೆ ಬೋರ್ ಹೊಡೆಸುವುದು ನನಗಿಷ್ಟವಿಲ್ಲ. ಉತ್ತಮ ಅವಕಾಶ ಸಿಗದ ಕಾರಣ ಪೋಷಕರ ಸಲಹೆ ಮೇರೆಗೆ ಕೆಲ ಕಾಲ ವಿಶ್ರಾಂತಿ ಪಡೆದೆ. ಈಗ ಮತ್ತೆ ತಮಿಳು ಚಿತ್ರರಂಗ ಕರೆಸಿಕೊಂಡಿದೆ.

ಕನ್ನಡ ಚಿತ್ರಗಳಲ್ಲೂ ನಟಿಸುವ ಬಯಕೆ ಇದೆ. ನನ್ನ ಅಪ್ಪ ಕರ್ನಾಟಕದವರು ನಮ್ಮ ಊರು ಶೃಂಗೇರಿ. ತಾಯಿ ಶ್ರೀಲಂಕಾ ಮೂಲದವರು ಎರಡು ಕಡೆ ಸಂಸ್ಕೃತಿಯ ಪರಿಚಯ ನನಗೆ ಸಿಕ್ಕಿದ್ದು ನನ್ನ ಪುಣ್ಯ.

ವಿಡಿಯುಮ್ ಮುನ್ನ್ ಬಗ್ಗೆ

ಬಾಲಾಜಿ ಕೆ ಕುಮಾರ್ ಅವರ ಥ್ರಿಲ್ಲರ್ ಚಿತ್ರ ವಿಡಿಯುಂ ಮುನ್ನ್ ಚಿತ್ರವನ್ನು ನನ್ನ ಮುಂದಿನ ಪೀಳಿಗೆಗೂ ತೋರಿಸುವಂಥ ಕಥೆ ಹೊಂದಿದೆ. ಚಿತ್ರದ ಕಥೆ ಇಷ್ಟವಾಗಿದ್ದರಿಂದ ತಕ್ಷಣವೇ ಒಪ್ಪಿಗೆ ನೀಡಿದೆ. ಈ ವಾರ ಚಿತ್ರ ಬಿಡುಗಡೆಯಾಗುತ್ತಿದ್ದು, ಜನರಿಗೆ ಮೆಚ್ಚುಗೆಯಾಗುತ್ತೆ ಎಂಬ ನಿರೀಕ್ಷೆಯಿದೆ. ವೇಶ್ಯಾವಾಟಿಕೆ ಕೂಪದಲ್ಲಿ ಸಿಲುಕಿರುವ 12 ವರ್ಷದ ಬಾಲೆಯನ್ನು ರಕ್ಷಿಸುವ ವೇಶ್ಯೆ ಪಾತ್ರ(ರೇಖಾ)ದಲ್ಲಿ ಪೂಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಲಾ ಚಿತ್ರದ ಬಗ್ಗೆ

ತಮಿಳಿನ ವಿಶಿಷ್ಟ ನಿರ್ದೇಶಕ ಬಾಲಾ ಅವರ ನಾನ್ ಕಡವುಳ್ ನಂತರ ಪರದೇಶಿ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಯಾಕೋ ಸದ್ಯವಾಗಲಿಲ್ಲ. ಈಗ ವಿಡಿಯುಮ್ ಮುನ್ನ್ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕ ತೃಪ್ತಿ ಇದೆ ಎಂದು ಪೂಜಾ ಹೇಳಿದ್ದಾರೆ.

2009ರಲ್ಲಿ ತೆರೆ ಕಂಡ ನಾನ್ ಕಡವುಳ್ ಚಿತ್ರದ ಕುರುಡಿ ಪಾತ್ರಕ್ಕೆ ಉಮಾ ಅವರಿಗೆ ಎಲ್ಲರ ಮೆಚ್ಚುಗೆ ಜತೆಗೆ ಫಿಲಂಫೇರ್ ಪ್ರಶಸ್ತಿ ಕೂಡಾ ಲಭಿಸಿತ್ತು

ಪೂಜಾ ಎರಡನೆ ಇನ್ನಿಂಗ್ಸ್

ನಾನು ಮಾಡುವ ಚಿತ್ರ ನನಗೆ ಉತ್ಸಾಹ ನೀಡಬೇಕು. ಹಣ ಗಳಿಕೆಗಾಗಿ ಚಿತ್ರ ಮಾಡುವ ಪೈಕಿ ನಾನಲ್ಲ. ಚಿತ್ರ, ಪಾತ್ರಗಳು ಜನರನ್ನು ಕಾಡುವಂತಿರಬೇಕು. ಮನರಂಜನೆ ಜತೆಗೆ ಚಿತ್ರ ಎಲ್ಲಾ ಕಾಲದಲ್ಲೂ ಮೆಚ್ಚುವಂತಿರಬೇಕು ಎಂದು ಪೂಜಾ ಹೇಳುತ್ತಾರೆ.

2003ರಲ್ಲಿ ಮಾಧವನ್ ಜತೆ ಜೇ ಜೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪೂಜಾ 12 ತಮಿಳು ಐದಾರು ಸಿಂಹಳ ಚಿತ್ರ, ಒಂದೆರಡು ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಆಫರ್ ಗಾಗಿ ಕಾದಿದ್ದಾರೆ.

English summary
Pooja Umashankar, who has played roles as diverse as a blind beggar and a biryani shopworker in her career, doesn't mind looking ugly on screen for the sake of a character. But she says not many actresses are comfortable facing the camera without makeup.
Please Wait while comments are loading...