»   » ಮದುವೆ ಬಳಿಕ ನಟಿ ಪ್ರಿಯಾಮಣಿ ಸಿನಿಮಾ ಮಾಡೇ ಮಾಡ್ತಾರೆ.!

ಮದುವೆ ಬಳಿಕ ನಟಿ ಪ್ರಿಯಾಮಣಿ ಸಿನಿಮಾ ಮಾಡೇ ಮಾಡ್ತಾರೆ.!

Posted By:
Subscribe to Filmibeat Kannada

ಮದುವೆ, ಗಂಡ, ಮನೆ, ಮಕ್ಕಳು ಅಂತ ಆದ್ಮೇಲೆ ಹೆಣ್ಮಕ್ಕಳು ಮನೆಯಲ್ಲಿಯೇ ಬಿಜಿ ಇರ್ತಾರೆ. ಮದುವೆ-ಮಕ್ಕಳಾದ್ಮೇಲೆ ಕೆಲ ಸ್ಟಾರ್ ಹೀರೋಯಿನ್ ಗಳೂ ಕೂಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಉದಾಹರಣೆಗಳಿವೆ. ಹೀಗಿರುವಾಗ, ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಬೆಂಗಳೂರಿನ ಬೆಡಗಿ ನಟಿ ಪ್ರಿಯಾಮಣಿ 'ಮದುವೆ' ಬಳಿಕ ಬಣ್ಣ ಹಚ್ಚುತ್ತಾರಾ ಎಂಬ ಡೌಟ್ ಅನೇಕರಿಗೆ ಕಾಡುತ್ತಿದೆ.

ಅಂಥವರಿಗೆಲ್ಲಾ, ''ಮದುವೆ ಬಳಿಕ ಬ್ರೇಕ್ ತೆಗೆದುಕೊಳ್ಳುವುದಿಲ್ಲ'' ಎನ್ನುವ ಮೂಲಕ ಎಲ್ಲರ ಡೌಟ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ನಟಿ ಪ್ರಿಯಾಮಣಿ.

'I will act even after marriage' says Actress Priyamani

''ವಿವಾಹವಾದ ಎರಡನೇ ದಿನದ ನಂತರ ನನ್ನ ಕೆಲಸಕ್ಕೆ ಮರಳು ಪ್ಲಾನ್ ಇದೆ. ಎರಡು ಸಿನಿಮಾಗಳ ಶೂಟಿಂಗ್ ಬಾಕಿಯಿರುವ ಕಾರಣ ನಾನು ಬ್ರೇಕ್ ತೆಗೆದುಕೊಳ್ಳುತ್ತಿಲ್ಲ'' ಎಂದು ಪ್ರಿಯಾಮಣಿ ಕೊಟ್ಟಿರುವ ಹೇಳಿಕೆಯ ಕುರಿತು ನಿಮ್ಮ 'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ವರದಿಯೊಂದನ್ನ 'ಮದುವೆ ಬಳಿಕ ಪ್ರಿಯಾಮಣಿ ಸಿನಿಮಾ ಮಾಡ್ತಾರಾ?' ಎಂಬ ಶೀರ್ಷಿಕೆ ಅಡಿ ಪ್ರಕಟ ಮಾಡಿತ್ತು.

ಮದುವೆ ಬಳಿಕ ಪ್ರಿಯಾಮಣಿ ಸಿನಿಮಾ ಮಾಡ್ತಾರ?

ಇದೇ ವರದಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾಮಣಿ, ''ಮದುವೆ ಬಳಿಕ ಸಿನಿಮಾ ಮಾಡುತ್ತೇನೆ'' ಎಂದು ಸ್ಪಷ್ಟ ಪಡಿಸಿದ್ದಾರೆ.

ಇನ್ನೂ ಇದೇ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಕೂಡ ಹೊಸ ಬಾಳಿಗೆ ಅಡಿ ಇಡುತ್ತಿರುವ ನಟಿ ಪ್ರಿಯಾಮಣಿಗೆ ಶುಭ ಕೋರಿದ್ದಾರೆ.

ಅಂದ್ಹಾಗೆ, ಆಗಸ್ಟ್ 23 ರಂದು ಬೆಂಗಳೂರಿನ ರಿಜಿಸ್ಟಾರ್ ಆಫೀಸ್ ನಲ್ಲಿ ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾದ ಸರಳವಾಗಿ ನಡೆಯಲಿದೆ. ಬಳಿಕ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

English summary
Actress Priyamani has taken her twitter account to respond to Oneindia/Filmibeat Kannada's Article that She will continue to act even after marriage.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada