»   » ಪೂಜಿಸುವ ನಟರ ಕರಾಳ ಮುಖದ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ನಟಿ

ಪೂಜಿಸುವ ನಟರ ಕರಾಳ ಮುಖದ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ನಟಿ

Posted By:
Subscribe to Filmibeat Kannada

ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಬಗ್ಗೆ ಒಬ್ಬೋಬ್ಬರೆ ಸ್ಟಾರ್ ನಟಿಯರು ಮಾತನಾಡುತ್ತಿದ್ದಾರೆ. ಕನ್ನಡದಲ್ಲಿ ಶ್ರುತಿ ಹರಿಹರನ್ ಈ ಕೆಟ್ಟ ಸಂಸ್ಕೃತಿ ಬಗ್ಗೆ ಬಹಿರಂಗವಾಗಿ ಗುಡುಗಿದ್ದರು. ಇದೀಗ, ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ದಕ್ಷಿಣ ಭಾರತದಲ್ಲಿ ಯಶಸ್ವಿ ನಟಿ ಎನಿಸಿಕೊಂಡಿದ್ದ ಇಲಿಯಾನ ಡಿಕ್ರೂಸ್ ಸಿನಿಲೋಕದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಓಪನ್ ಆಗಿ ಹೇಳಿದ್ದಾರೆ. ಇತ್ತೀಚಿಗಷ್ಟೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾಗವಹಿಸಿದ್ದ ಇಲಿಯಾನ ನಿರ್ದೇಶಕ ಮತ್ತು ನಿರ್ಮಾಪಕ ಕಾಮಪುರಾಣವನ್ನ ಬಿಚ್ಚಿಟ್ಟಿದ್ದಾರೆ.

ಇಲಿಯಾನ ಡಿಕ್ರೂಸ್ ಹೆಚ್ಚಿನ ಚಿತ್ರಗಳು ಇಲ್ಲಿದೆ ನೋಡಿ

ಸದ್ಯ, ಬಾಲಿವುಡ್ ಇಂಡಸ್ಟ್ರಿಯ ಕರಾಳ ಮುಖವನ್ನ ಹೊರಜಗತ್ತಿಗೆ ಪರಿಚಯಿಸಿದ್ದಾರೆ. ಅದರಲ್ಲೂ ಅಭಿಮಾನಿಗಳು ದೇವರೆಂದು ಪೂಜಿಸುವ ನಾಯಕರ ಇನ್ನೊಂದು ಮುಖದ ಬಗ್ಗೆ ಇಲಿಯಾನ ಕಾಮೆಂಟ್ ಮಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಹಾಗಿದ್ರೆ, ಇಲಿಯಾನ ಬಾಯ್ಬಿಟ್ಟ ಸತ್ಯ ಘಟನೆಗಳೇನು.? ಯಾವೆಲ್ಲ ಮಾಹಿತಿಗಳನ್ನ ಬಹಿರಂಗಪಡಿಸಿದರು.? ಮುಂದೆ ಓದಿ....

ಬಾಲಿವುಡ್ ಯಾಕೆ ಮಾತನಾಡಲ್ಲ ಗೊತ್ತಾ.?

ಕಾಸ್ಟಿಂಗ್ ಕೌಚ್ ಬಗ್ಗೆ ಇಡೀ ಚಿತ್ರರಂಗವೇ ಮಾತನಾಡುತ್ತಿದೆ. ಆದ್ರೆ, ಈ ವಿಷ್ಯದಲ್ಲಿ ಬಾಲಿವುಡ್ ಮೌನವಾಗಿದೆ ಯಾಕೆ ಎಂಬ ಪ್ರಶ್ನೆಯನ್ನ ಇಲಿಯಾನ ಇಟ್ಟಿದ್ದಾರೆ. ಇದಕ್ಕೆ ಉತ್ತರವನ್ನ ಕೊಟ್ಟಿರುವ ಇಲಿಯಾನ ''ಯಾಕಂದ್ರೆ, ಬಾಲಿವುಡ್ ನಲ್ಲಿ ಈ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಮಟ್ಟದಲ್ಲಿದೆ ಇದೆ. ಮಾತನಾಡಿದ್ರೆ ಅವ್ರ ವೃತ್ತಿಜೀವನ ಅಂತ್ಯವಾಗುತ್ತೆ ಎಂಬ ಆತಂಕ'' ಎಂದು ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಪೂಜಿಸುವ ನಾಯಕರಿಗೆ ಇನ್ನೊಂದು ಮುಖ ಇದೆ

ಭಾರತದಲ್ಲಿ ನಟರನ್ನ ಪೂಜಿಸುತ್ತಾರೆ. ಆದ್ರೆ, ಅಭಿಮಾನಿಗಳಿಂದ ಪೂಜಿಸುವ ನಟರಿಗೆ ಇನ್ನೊಂದು ಮುಖ ಇದೆ. ಅದು ತುಂಬ ಕೊಳಕಿನಿಂದ ತುಂಬಿದೆ. ತೆರೆಯ ಮೇಲೆ ನಟರು ತುಂಬಾ ಒಳ್ಳೆಯವರಾಗಿರುತ್ತಾರೆ. ಅದರ ಹಿಂದೆ ಒಂದು ಕರಾಳ ಮುಖವಿರುತ್ತದೆ. ನಟರೆಂದ್ರೆ ದೊಡ್ಡ ಸ್ಟಾರ್ ಗಳು ಎಂಬಂತೆ ಬಿಂಬಿತವಾಗುತ್ತಾರೆ. ನಿಜ ವ್ಯಕ್ತಿತ್ವನ್ನ ಹೊರಹಾಕಲು ಹೆಚ್ಚು ಧ್ವನಿ ಬೇಕು ಎಂದು ವಾಸ್ತವನ್ನ ಬಹಿರಂಗಪಡಿಸಿದ್ದಾರೆ.

ಕಾಮುಕ ನಿರ್ಮಾಪಕರ ಹುಟ್ಟಡಗಿಸಲು ಒಂದಾದ ಕನ್ನಡ ಸಿನಿಮಾರಂಗ

ನನ್ನನ್ನ ಬರಿ ಗ್ಲಾಮರ್ ಗೆ ಮಾತ್ರ ಉಪಯೋಗಿಸಿದ್ದಾರೆ

''ನಾನೊಬ್ಬ ನಟಿಯಾಗಿ ಗುರುತಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರು ನಿರ್ದೇಶರು ನನಗೆ ಅವಕಾಶ ನೀಡುತ್ತಿರಲಿಲ್ಲ. ನನ್ನಲ್ಲಿ ನಟಿಸುವ ಪ್ರತಿಭೆ ಇದ್ದರೂ, ನನ್ನ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡು ಬರೀ ಗ್ಲಾಮರ್ ಮಾತ್ರ ಮಾಡಿಸುತ್ತಿದ್ದರು. ಎಕ್ಸ್‌ಪೋಸ್ ಮಾಡುವಂತಹ ಸಿನಿಮಾಗಳಿಗೆ ಸೀಮಿತಗೊಳಿಸಿದರು ಎಂದು ದಕ್ಷಿಣ ಭಾರತದ ನಿರ್ದೇಶಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

'ಐಸ್ ಮಹಲ್' ಚಿತ್ರದ ನಾಯಕಿಗೆ ಟಾರ್ಚರ್ ಕೊಟ್ಟ ಪೋಷಕ ನಟ

ದಕ್ಷಿಣಕ್ಕೆ ಹೋಲಿಸಿದರೇ ಹಿಂದಿ ಉತ್ತಮ

ಹದಿನೆಂಟನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಇಲಿಯಾನ 'ದೇವದಾಸು' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪರಿಚಯವಾದರು. ಅಲ್ಲಿಂದಲೂ ಬರಿ ಗ್ಲಾಮರ್ ಪಾತ್ರಗಳಿಗೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು. ''ಈ ವಿಚಾರದಲ್ಲಿ ದಕ್ಷಿಣಕ್ಕೆ ಹೋಲಿಸಿದರೆ ಹಿಂದಿ ನಿರ್ದೇಶಕರು ಉತ್ತಮ. ಇಲ್ಲಿ ಗ್ಲಾಮರ್ ಜತೆಗೆ ನಟಿಸುವ ಅವಕಾಶವೂ ಇರುತ್ತದೆ'' ಎಂದು ಅವರು ಇಲಿಯಾನ ತಮ್ಮ ಮನದ ನೋವನ್ನ ಹೊರಹಾಕಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಬಾಯ್ಬಿಟ್ಟ ನಟಿ

English summary
Actress Ileana D'Cruz says that it may sound "cowardly" but talking about the casting couch can end an artiste's career.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada