»   » ಮದುವೆ ಆಲ್ಬಂ: ನಾಗ ಚೈತನ್ಯ-ಸಮಂತಾ ಕ್ರಿಶ್ಚಿಯನ್ ವೆಡ್ಡಿಂಗ್

ಮದುವೆ ಆಲ್ಬಂ: ನಾಗ ಚೈತನ್ಯ-ಸಮಂತಾ ಕ್ರಿಶ್ಚಿಯನ್ ವೆಡ್ಡಿಂಗ್

Posted By:
Subscribe to Filmibeat Kannada

ನಟ ನಾಗಚೈತನ್ಯ ಹಾಗೂ ಸಮಂತಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ ಈ ಜೋಡಿಯ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ಗೋವಾದ ಕಡಲತೀರದಲ್ಲಿ ಅಕ್ಟೋಬರ್ 6 ರಂದು ನಾಗಚೈತನ್ಯ ಹಾಗೂ ಸಮಂತಾ ವಿವಾಹ ಮಹೋತ್ಸವ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು. ಬಳಿಕ ಅಕ್ಟೋಬರ್ 7 ರಂದು ಶನಿವಾರ ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.

ಚಿತ್ರಗಳು: ನೂತನ ಬಾಳಿಗೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ

ನಾಗಚೈತನ್ಯ-ಸಮಂತಾ ಕ್ರಿಶ್ಚಿಯನ್ ವೆಡ್ಡಿಂಗ್ ಫೋಟೋ ಆಲ್ಬಂ ಇಲ್ಲಿದೆ ನೋಡಿರಿ...

ಅದ್ಧೂರಿಯಾಗಿ ನಡೆದ ನಾಗ ಚೈತನ್ಯ-ಸಮಂತಾ ವಿವಾಹ

ಗೋವಾದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ನಾಗ ಚೈತನ್ಯ-ಸಮಂತಾ ಕ್ರಿಶ್ಚಿಯನ್ ವೆಡ್ಡಿಂಗ್ ಅದ್ಧೂರಿಯಾಗಿ ನಡೆಯಿತು.

ಉಂಗುರ ಬದಲಾಯಿಸಿಕೊಂಡ ಜೋಡಿ

ಮನದ ಒಡತಿ ಸಮಂತಾ ಬೆರಳಿಗೆ ನಾಗಚೈತನ್ಯ ಉಂಗುರ ತೊಡಿಸಿದ ಸುಂದರ ಕ್ಷಣ...

ಬಿಳಿ ಬಣ್ಣದ ವೆಡ್ಡಿಂಗ್ ಗೌನ್ ನಲ್ಲಿ ಸಮಂತಾ

ಬಿಳಿ ಬಣ್ಣದ ವೆಡ್ಡಿಂಗ್ ಗೌನ್ ಧರಿಸಿದ ಸಮಂತಾ ಮಿರಿ ಮಿರಿ ಮಿಂಚುತ್ತಿದ್ದರು.

ಅಮ್ಮನೊಂದಿಗೆ ಬಂದ ನಾಗಚೈತನ್ಯ

ಬಿಳಿ ಶರ್ಟ್, ಕಪ್ಪು ಬಣ್ಣದ ಸೂಟ್ ಧರಿಸಿ ತಾಯಿ ಲಕ್ಷ್ಮಿ ದಗ್ಗುಬಾಟಿಯೊಂದಿಗೆ ನಾಗಚೈತನ್ಯ ಕಾಣಿಸಿಕೊಂಡಿದ್ದು ಹೀಗೆ...

ಸದ್ಯದಲ್ಲಿ ಆರತಕ್ಷತೆ

ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ನಡೆದ ನಾಗ ಚೈತನ್ಯ-ಸಮಂತಾ ಮದುವೆಗೆ ಬಂಧು-ಮಿತ್ರರಿಗಷ್ಟೇ ಆಹ್ವಾನ ನೀಡಲಾಗಿತ್ತು. ಅಕ್ಟೋಬರ್ 15 ರಂದು ಹೈದರಾಬಾದ್ ನಲ್ಲಿ ನಡೆಯುವ ಅದ್ಧೂರಿ ಆರತಕ್ಷತೆಯಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

English summary
Check out the Christian Wedding pictures of Samantha Ruth Prabhu-Naga Chaitanya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada