»   » ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ

ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ನಿನ್ನೆ (ಡಿಸೆಂಬರ್ 9) ಅದ್ಧೂರಿಯಾಗಿ ಅಷ್ಟೇ ವಿಶಿಷ್ಟವಾಗಿ ನೆರವೇರಿತು.

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ದಿ ತಾಜ್ ವೆಸ್ಟ್ ಎಂಡ್ ಹೊರಾಂಗಣದಲ್ಲಿ ಯಶ್-ರಾಧಿಕಾ ಪಂಡಿತ್ ಮದುವೆ ನಡೆಯಿತು. ನಿನ್ನೆ ಮಧ್ಯಾಹ್ನ 11.30 ರಿಂದ 12.30 ರವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದರು. 12.30 ರ ಸುಮಾರಿಗೆ ರಾಧಿಕಾ ಪಂಡಿತ್ ರವರ ಕೊರಳಿಗೆ ಯಶ್ ಮಾಂಗಲ್ಯಧಾರಣೆ ಮಾಡಿದರು.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್]

ಧಾರೆ ಮುಹೂರ್ತದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು, ರಾಜಕಾರಣಿಗಳು ಭಾಗವಹಿಸಿ, ನವ ವಧು ವರರಿಗೆ ಶುಭ ಹಾರೈಸಿದರು. ಯಶ್-ರಾಧಿಕಾ ಪಂಡಿತ್ ಧಾರೆ ಮುಹೂರ್ತದ ಆಲ್ಬಂನ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೋಡಿ....

'ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್

ಹತ್ತು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿ, ಐದು ವರ್ಷಗಳಿಂದ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಿದ್ದ ಯಶ್-ರಾಧಿಕಾ ಪಂಡಿತ್ ನಿನ್ನೆ ಸತಿ-ಪತಿಗಳಾದರು.[ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]

ಧಾರೆ ಎರೆದ ಯಶ್ ತಂದೆ-ತಾಯಿ

ಮಗ ಯಶ್ ಹಾಗೂ ಸೊಸೆ ರಾಧಿಕಾ ಪಂಡಿತ್ ಗೆ ಅರುಣ್ ಕುಮಾರ್ ಹಾಗೂ ಪುಷ್ಪ ಧಾರೆ ಎರೆದ ಕ್ಷಣ. [ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ]

ಸಹೋದರಿ ನಂದಿನಿ

ನವ ವಧು-ವರರ ಧಾರೆ ಸಮಯದಲ್ಲಿ ಯಶ್ ಸಹೋದರಿ ನಂದಿನಿ.[ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ]

ರಾಧಿಕಾ ಸಹೋದರ

ಧಾರೆ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಸಹೋದರ ಗೌರಂಗ್ ದಂಪತಿ [ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ರಾಧಿಕಾ-ಯಶ್]

ಆಶೀರ್ವಾದ ಮಾಡಿದ ನಿರ್ಮಲಾನಂದ ಸ್ವಾಮೀಜಿ

ನವ ಜೋಡಿಗೆ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಮಾಡಿದರು. ['ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!]

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಯಶ್-ರಾಧಿಕಾ ಪಂಡಿತ್ ವಿವಾಹ ಮಹೋತ್ಸವಕ್ಕೆ ಆಗಮಿಸಿ ನವ ವಧು-ವರರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಭ ಹಾರೈಸಿದರು.

ಕ್ರೇಜಿ ಸ್ಟಾರ್ ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್ ದಂಪತಿ ಕೂಡ ಯಶ್-ರಾಧಿಕಾ ಪಂಡಿತ್ ಮದುವೆಗೆ ಸಾಕ್ಷಿಯಾಗಿದ್ದರು.

ರಾಜಕಾರಣಿ ಎಸ್.ಎಂ.ಕೃಷ್ಣ ದಂಪತಿ

ರಾಜಕಾರಣಿ ಎಸ್.ಎಂ.ಕೃಷ್ಣ ದಂಪತಿ ನವ ಜೋಡಿಗೆ ಆಶೀರ್ವಾದ ಮಾಡಿದರು.

ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಕೂಡ ದಿ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಆಗಮಿಸಿ, ಯಶ್-ರಾಧಿಕಾ ಪಂಡಿತ್ ಗೆ ಶುಭಾಶಯ ತಿಳಿಸಿದರು.

ಪುನೀತ್ ರಾಜ್ ಕುಮಾರ್ ದಂಪತಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿ ಕೂಡ ಯಶ್-ರಾಧಿಕಾಗೆ ಶುಭಾಶಯ ತಿಳಿಸಿದರು.

ಭಾರತಿ ವಿಷ್ಣುವರ್ಧನ್

ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅನಿರುದ್ಧ ಕೂಡ ಆಗಮಿಸಿ ನವ ಜೋಡಿಗೆ ಆಶೀರ್ವದಿಸಿದರು.

ರಾಘವೇಂದ್ರ ರಾಜ್ ಕುಮಾರ್

ನವ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ರಾಘವೇಂದ್ರ ರಾಜ್ ಕುಮಾರ್ ದಂಪತಿ ಶುಭ ಹಾರೈಸಿದರು.

ವಿನಯ್ ರಾಜ್ ಕುಮಾರ್

ನಟ ವಿನಯ್ ರಾಜ್ ಕುಮಾರ್ ಕೂಡ ಯಶ್-ರಾಧಿಕಾ ಪಂಡಿತ್ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದ್ದರು.

ಅವಳಿ ಸಹೋದರಿಯರು

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ತಮ್ಮ ಜೊತೆ ನಟಿಸಿದ್ದ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಜೊತೆ ಯಶ್-ರಾಧಿಕಾ ಪಂಡಿತ್.

ಮಾಸ್ಟರ್ ಆನಂದ್

ನವ ಜೋಡಿಗೆ ಮಾಸ್ಟರ್ ಆನಂದ್ ಕೂಡ ಶುಭ ಹಾರೈಸಿದರು.

English summary
Kannada Actor Yash has tied knot with his long-time girl friend Kannada Actress Radhika Pandit on December 9th in Taj West End Hotel Bengaluru. Check out the wedding album of this cute couple.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada