For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ: 'Zooಮ್' ಚಿತ್ರದ ಅದ್ಧೂರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

  By Harshitha
  |

  ಮೊನ್ನೆ ಭಾನುವಾರ (ಜೂನ್ 12) ಸಂಜೆ ಐದು ಗಂಟೆ ಸುಮಾರಿಗೆ ಬೆಂಗಳೂರಿನ ಊರ್ವಶಿ ಚಿತ್ರಮಂದಿರ ತುಂಬಿ ತುಳುಕುತ್ತಿತ್ತು. ಅದಕ್ಕೆ ಕಾರಣ ಕನ್ನಡ ಸಿನಿಮಾ ಅಂದ್ರೆ ನೀವು ನಂಬಲೇಬೇಕು.!

  ಅರೇ...ಸದಾ ತಮಿಳು, ತೆಲುಗು, ಹಿಂದಿ ಚಿತ್ರಗಳನ್ನ ಪ್ರದರ್ಶನ ಮಾಡುವ ಊರ್ವಶಿ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ಹೌಸ್ ಫುಲ್ ಆಗಿತ್ತಾ? ಅಂತ ಆಶ್ಚರ್ಯ ಪಡಬೇಡಿ. ಅಂದು ಕನ್ನಡ ಚಿತ್ರ 'Zooಮ್' ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಅಭಿನಯದ 'Zooಮ್' ಚಿತ್ರದ ಥಿಯೇಟ್ರಿಕಲ್ ಟ್ರೈಲರ್ ನೋಡಲು ನೂರಾರು ಮಂದಿ ಊರ್ವಶಿ ಥಿಯೇಟರ್ ಗೆ ಮುಗಿಬಿದ್ದದ್ದು ಮಾತ್ರ ವಿಶೇಷ.

  ಕುಟುಂಬದ ಸಮೇತ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನಟಿ ರಾಧಿಕಾ ಪಂಡಿತ್ ಆಗಮಿಸಿದ್ರೆ, ಸ್ಟೈಲಿಶ್ ಆಗಿ ಗಣೇಶ್ ಪ್ರತ್ಯಕ್ಷವಾದರು. ಇಬ್ಬರನ್ನು ಸೆರೆಹಿಡಿಯಲು ಮಾಧ್ಯಮ ಮಿತ್ರರ ಕ್ಯಾಮರಾಗಳು 'Zooಮ್' ಹಾಕುವಲ್ಲಿ ಬಿಜಿಯಾಗಿದ್ದವು.

  ಕನ್ನಡ ಸಿನಿ ಪ್ರಿಯರ ಸಮ್ಮುಖದಲ್ಲಿ, ಗಣೇಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳ ಜೈಕಾರದೊಂದಿಗೆ 'Zooಮ್' ಟ್ರೈಲರ್ ಬಿಡುಗಡೆ ಆಯ್ತು. [ಟ್ರೈಲರ್ ಹೇಗಿದೆ.? ಒಮ್ಮೆ 'Zooಮ್' ಮಾಡಿ ನೋಡಿ ಹೇಳಿ...]

  ತಮ್ಮ ಪಾತ್ರಗಳ ಬಗ್ಗೆ ಗಣೇಶ್ ಹಾಗೂ ರಾಧಿಕಾ ಪಂಡಿತ್ ಹರ್ಷ ವ್ಯಕ್ತ ಪಡಿಸಿದ್ರೆ, 'Zooಮ್' ಉತ್ತಮ ಪ್ರಯತ್ನ ಅಂತ ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದರು.

  ಒಂದೇ ದಿನದಲ್ಲಿ ಯೂಟ್ಯೂಬ್ ನಲ್ಲಿ 60,000ಕ್ಕೂ ಹೆಚ್ಚು ಮಂದಿ 'Zooಮ್' ಟ್ರೈಲರ್ ವೀಕ್ಷಿಸಿದ್ದಾರೆ. ಜುಲೈ ಒಂದರಂದು 'Zooಮ್' ತೆರೆಕಾಣಲಿದೆ.

  ಫೋಟೋ ಆಲ್ಬಂ: 'Zooಮ್' ಚಿತ್ರದ ಅದ್ಧೂರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

  ಫೋಟೋ ಆಲ್ಬಂ: 'Zooಮ್' ಚಿತ್ರದ ಅದ್ಧೂರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ

  English summary
  Golden Star Ganesh and Radhika Pandit starrer Kannada Movie 'Zoom' theatrical trailer was launched amidst much fan fare in Urvashi Theater, Bengaluru on June 12th. Check out the Photo Gallery of the Grand Event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X