»   » ಚಿತ್ರಗಳು: ಪ್ರಿಯಾ ಹಾಸನ್-ರಾಮು ಮದುವೆಯ ಕಲರ್ ಫುಲ್ ಫೋಟೋ

ಚಿತ್ರಗಳು: ಪ್ರಿಯಾ ಹಾಸನ್-ರಾಮು ಮದುವೆಯ ಕಲರ್ ಫುಲ್ ಫೋಟೋ

Posted By:
Subscribe to Filmibeat Kannada

'ಜಂಬದ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಂತರ, 'ಜೂನಿಯರ್ ಮಾಲಾಶ್ರೀ' ಅಂತಾನೇ ಫೇಮಸ್ ಆದ, ನಟಿ ಪ್ರಿಯಾ ಹಾಸನ್ ಅವರು ಕೊನೆಗೂ ಸಪ್ತಪದಿ ತುಳಿದಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಎಸ್.ರಾಮು ಎಂಬುವವರ ಕೈ ಹಿಡಿದಿರುವ 'ಸ್ಮಗ್ಲರ್' ನಟಿ ಪ್ರಿಯಾ ಹಾಸನ್ ಅವರು, ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸದ್ದಿಲ್ಲದೇ ಇಂದು (ಸೆಪ್ಟೆಂಬರ್ 8) ವಿವಾಹ ಆಗಿದ್ದಾರೆ.[ಮದುವೆ ಬಂಧನಕ್ಕೊಳಗಾದ 'ಬಿಂದಾಸ್ ಹುಡುಗಿ' ನಟಿ ಪ್ರಿಯಾ ಹಾಸನ್]

ಕೆಲವು ತಿಂಗಳುಗಳ ಹಿಂದೆ ಉದ್ಯಮಿ ಎಸ್ ರಾಮು ಮತ್ತು ನಟಿ ಪ್ರಿಯಾ ಹಾಸನ್ ಅವರ ನಡುವೆ ಸ್ನೇಹ ಬೆಳೆದು, ಪ್ರೀತಿಯಾಗಿತ್ತು. ನಂತರ ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಜಂಟಿಯಾಗಲು ನಿರ್ಧರಿಸಿದ್ದರು.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಇದೀಗ ನಟಿ ಪ್ರಿಯಾ ಹಾಸನ್ ಮತ್ತು ಎಸ್ ರಾಮು ಅವರ ಮದುವೆ ಫೋಟೋಗಳು ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದ್ದು, ನೋಡಲು ಮುಂದೆ ಓದಿ......

ಮದುವೆ ಶಾಸ್ತ್ರ

ಪಕ್ಕಾ ಹಿಂದು ಸಂಪ್ರದಾಯದಂತೆ ಮದುವೆಯಾದ ನಟಿ ಪ್ರಿಯಾ ಹಾಸನ್ ಅವರು ಬಿಳಿ ಬಣ್ಣದ ಧಾರೆ ಸೀರೆ ಉಟ್ಟು ಕಂಗೊಳಿಸುತ್ತಿದ್ದರು. ವರ ರಾಮು ಅವರು ಕೂಡ ಬಿಳಿ ಬಣ್ಣದ ಶರ್ಟು, ಪಂಚೆ, ಶಲ್ಯ ತೊಟ್ಟು ಕಂಗೊಳಿಸಿದ ಪರಿ.

ಕಂಕಣ ಕಟ್ಟಿಸಿಕೊಳ್ಳುತ್ತಿರುವ ಪ್ರಿಯಾ

ಸಂಪ್ರದಾಯಬದ್ಧವಾಗಿ ಮದುವೆ ಶಾಸ್ತ್ರಗಳನ್ನು ಮಾಡುತ್ತಿರುವ ವಧು ಪ್ರಿಯಾ ಹಾಸನ್ ಮತ್ತು ವರ ಎಸ್ ರಾಮು ಅವರು. ರಾಮು ಅವರು ಪ್ರಿಯಾ ಅವರ ಕೈಗೆ ಕಂಕಣ ಕಟ್ಟಿದ ಅಪರೂಪದ ಕ್ಷಣ.

ಕಂಕಣ ಪೂಜೆ

ಕಂಕಣ ಕಟ್ಟುವ ಶಾಸ್ತ್ರ ಮುಗಿದ ನಂತರ, ವಧು-ವರರ ಕಂಕಣ ಪೂಜೆ ನೆರವೇರಿಸಿದ ಶಾಸ್ತ್ರಿಗಳು.

ನಿರ್ಮಾಪಕಿ ಕಮ್ ನಟಿ

'ಜಂಬದ ಹುಡುಗಿ' ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಪ್ರಿಯಾ ಹಾಸನ್ ಅವರು, ನಂತರ ನಿರ್ಮಾಪಕಿಯಾಗಿ ಕೆಲಕಾಲ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ಸಿನಿ ಪಯಣದಲ್ಲಿ ಅಷ್ಟಾಗಿ ಯಶಸ್ಸು ಕಾಣದ ಪ್ರಿಯಾ ಅವರ 'ಸ್ಮಗ್ಲರ್' ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.

ನಟಿ ತಾರಾ

'ಜಂಭದ ಹುಡುಗಿ' ಪ್ರಿಯಾ ಮತ್ತು ಉದ್ಯಮಿ ಎಸ್ ರಾಮು ಅವರ ವಿವಾಹ ಮಹೋತ್ಸವದಲ್ಲಿ ನಟಿ ತಾರಾ ಅವರು ಭಾಗವಹಿಸಿ, ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ನಿರ್ದೇಶಕ 'ದೊರೆ' ಭಗವಾನ್

ಪ್ರಿಯಾ ಹಾಸನ್-ಎಸ್ ರಾಮು ಅವರ ಮದುವೆಗೆ ಹಿರಿಯ ನಿರ್ದೇಶಕ 'ದೊರೆ' ಭಗವಾನ್ ಅವರು ಭಾಗವಹಿಸಿದ್ದರು.

English summary
'Jambada Hudugi' fame Kannada Actress-Producer Priya Hassan is getting married to S Ramu Today (8th September). Here is Pics, Check It once.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada