For Quick Alerts
  ALLOW NOTIFICATIONS  
  For Daily Alerts

  'ಹ್ಯಾಪಿ ಬರ್ತ್ ಡೇ' ಆಡಿಯೋ ರಿಲೀಸ್ ನಲ್ಲಿ ಅಂಬಿ-ಯಶ್ ಕಮಾಲ್

  By Suneetha
  |

  ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜುಲೈ 23, ಶನಿವಾರದಂದು ಭಾರಿ ಜನಜಂಗುಳಿ ಏರ್ಪಟ್ಟಿತ್ತು. ಯಶ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಅಂದು ತಮ್ಮ ನೆಚ್ಚಿನ ನಟರ ಬರುವಿಕೆಗಾಗಿ ಬಕ ಪಕ್ಷಿಯಂತೆ ಕಾದು ಕುಳಿತಿದ್ದರು.

  ರಾಕಿಂಗ್ ಸ್ಟಾರ್ ಯಶ್, ರೆಬೆಲ್ ಸ್ಟಾರ್ ಅಂಬರೀಶ್ ಅವರು ವೇದಿಕೆ ಬಳಿ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಹೋ ಎಂದು ಕಿರುಚುತ್ತಾ, ಸಂಭ್ರಮದಿಂದ ಕೇಕೆ ಹಾಕಿದರು.

  ಅಂದಹಾಗೆ ಈ ಎಲ್ಲಾ ಸಂಭ್ರಮದ ಘಟನೆ ನಡೆದಿದ್ದು, 'ಹ್ಯಾಪಿ ಬರ್ತ್ ಡೇ' ಎಂಬ ಕನ್ನಡ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. 'ಅಂಬರೀಶ' ಖ್ಯಾತಿಯ ನಿರ್ದೇಶಕ ಮಹೇಶ್ ಸುಖಧರೆ ನಿರ್ದೇಶನ ಮಾಡಿರುವ ಅಪ್ಪಟ ದೇಸಿ ಜಾನಪದ ಶೈಲಿಯ 'ಹ್ಯಾಪಿ ಬರ್ತ್ ಡೇ' ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ತಯಾರಾಗಿದೆ.[ಚಿತ್ರ ವಿಮರ್ಶೆ: 'ಅಂಬರೀಶ' ಅಭಿಮಾನಿಗಳಿಗೆ ವಿಶೇಷ]

  ಅಂದಿನ ಸಂಭ್ರಮದ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ತಾರೆಯರ ಸಮಾಗಮವಾಗಿದ್ದು, ವಿ.ಹರಿಕೃಷ್ಣ ಮತ್ತು ತಂಡದವರ ಸಂಗೀತ ರಸಸಂಜೆ ನೆರೆದಿದ್ದವರಿಗೆ ಸಖತ್ ಮನರಂಜನೆ ನೀಡಿತ್ತು. ಈ ಕಾರ್ಯಕ್ರಮ ಒಂದು ಸಣ್ಣ ಝಲಕ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

  ಹೊಸ ಪ್ರತಿಭೆಗಳ 'ಹ್ಯಾಪಿ ಬರ್ತ್ ಡೇ'

  ಹೊಸ ಪ್ರತಿಭೆಗಳ 'ಹ್ಯಾಪಿ ಬರ್ತ್ ಡೇ'

  ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಅವರ ಮಗ ಸಚಿನ್ ಮೊಟ್ಟ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು, ನಟಿ ಸಂಸ್ಕೃತಿ ಶೆಣೈ ಅವರು 'ಹ್ಯಾಪಿ ಬರ್ತ್ ಡೇ' ಚಿತ್ರದಲ್ಲಿ ಸಚಿನ್ ಅವರಿಗೆ ಸಾಥ್ ಕೊಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

  ಮಂಡ್ಯದಲ್ಲೇ ಏಕೆ?

  ಮಂಡ್ಯದಲ್ಲೇ ಏಕೆ?

  ಅಂದಹಾಗೆ 'ಹ್ಯಾಪಿ ಬರ್ತ್ ಡೇ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬಹಳ ವಿಶೇಷವಾಗಿ ಮಂಡ್ಯದಲ್ಲಿ ನಡೆಯಲು ಪ್ರಮುಖ ಕಾರಣ ಏನಪ್ಪಾ ಅಂದ್ರೆ, ಈ ಚಿತ್ರದ ಬಹುತೇಕ ಶೂಟಿಂಗ್ ಮಂಡ್ಯದಲ್ಲಿ ನಡೆದಿದೆ. ಜೊತೆಗೆ ಈ ಚಿತ್ರದ ನಿರ್ದೇಶಕರು, ನಿರ್ಮಾಪಕರು, ನಾಯಕ, ಸಾಹಸ ನಿರ್ದೇಶಕರು, ಕ್ಯಾಮರಾಮೆನ್, ಸಂಭಾಷಣೆಗಾರ ಹೀಗೆ ಎಲ್ಲರೂ ಮಂಡ್ಯ ಜಿಲ್ಲೆಯವರೇ. ಹಾಗಾಗಿ ಮಂಡ್ಯದಲ್ಲೇ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಬೇಕೆಂಬುದು ಚಿತ್ರತಂಡದವರ ಆಸೆ.

  ನಾಯಕ ಸಚಿನ್ ಗೆ ಅಂಬರೀಶ್ ರೋಲ್ ಮಾಡೆಲ್

  ನಾಯಕ ಸಚಿನ್ ಗೆ ಅಂಬರೀಶ್ ರೋಲ್ ಮಾಡೆಲ್

  ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡುವ ಭರವಸೆ ತೋರುವ ನಾಯಕ ನಟ ಸಚಿನ್ ಅವರು ತಮಗೆ ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರ ಮಾರ್ಗದರ್ಶನ ಇದೆ ಎಂದಿದ್ದಾರೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ ಎಂದು ಅವರ ಬಳಿ ಹೋಗಿದ್ದಾಗ, ಅವರು 'ನೀನು ನನ್ನ ಮಗನಿದ್ದಂತೆ, ನಾನು ಸದಾ ನಿನ್ನ ಬೆಂಬಲಕ್ಕಿರುತ್ತೇನೆ ಎಂದಿದ್ದರು, ಎನ್ನುತ್ತಾರೆ ನಟ ಸಚಿನ್.

  ಸ್ಯಾಂಡಲ್ ವುಡ್ ದಿಗ್ಗಜರಿಂದ ಆಡಿಯೋ ರಿಲೀಸ್

  ಸ್ಯಾಂಡಲ್ ವುಡ್ ದಿಗ್ಗಜರಿಂದ ಆಡಿಯೋ ರಿಲೀಸ್

  ಕನ್ನಡ ಚಿತ್ರರಂಗದ ಘಟಾನುಘಟಿಗಳಾದ ರೆಬೆಲ್ ಸ್ಟಾರ್ ಅಂಬರೀಶ್, ರಾಕಿಂಗ್ ಸ್ಟಾರ್ ಯಶ್, ಶ್ರೀನಗರ ಕಿಟ್ಟಿ, ದೊಡ್ಡಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಂಬರೀಶ್ ಅವರು ಚಿತ್ರದ ಟ್ರೈಲರ್ ಮತ್ತು ಮೊದಲ ಹಾಡು ಬಿಡುಗಡೆ ಮಾಡಿದರೆ, ಯಶ್ ಮತ್ತು ಶ್ರೀನಗರ ಕಿಟ್ಟಿ ತಲಾ ಒಂದೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ.

  ಸಂಗೀತ ರಸಮಂಜರಿ

  ಸಂಗೀತ ರಸಮಂಜರಿ

  ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ತಮ್ಮ ಸಂಗಡಿಗರ ಜೊತೆ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

  ರಾಕಿಂಗ್ ಯಶ್

  ರಾಕಿಂಗ್ ಯಶ್

  ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿರುವ ಹೊಸ ಪ್ರತಿಭೆಗಳಿಗೆ ಯಶ್ ಶುಭ ಹಾರೈಸಿದರು.

  ಕಿಟ್ಟಿ-ಯಶ್

  ಕಿಟ್ಟಿ-ಯಶ್

  ಒಂದೇ ವೇದಿಕೆಯಲ್ಲಿ ಶ್ರೀನಗರ ಕಿಟ್ಟಿ ಮತ್ತು ಯಶ್ ಸಮಾಗಮ.

  ನಟಿ ರೂಪಿಕಾ-ಅಂಬಿ

  ನಟಿ ರೂಪಿಕಾ-ಅಂಬಿ

  ನಟಿ ರೂಪಿಕಾ ಜೊತೆ ರೆಬೆಲ್ ಸ್ಟಾರ್ ಅಂಬರೀಶ್ ಪೋಸ್ ಕೊಟ್ಟ ಪರಿ.

  ಅಭಿಮಾನಿಗಳ ಸಂಭ್ರಮ

  ಅಭಿಮಾನಿಗಳ ಸಂಭ್ರಮ

  ನಟ ಯಶ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ವೇದಿಕೆಗೆ ಆಗಮಿಸುತ್ತಿದ್ದಂತೆ, ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮ ಪಟ್ಟರು. ಜನಜಂಗುಳಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

  English summary
  Kannada Movie 'Happy Birthday' Trailer and Audio released (July 23rd). Rebel Star Ambareesh, Actor Yash and Actor Srinagara Kitty Launched Trailer and Audio. Kannada Actor Sachin, Actress Samskruthy Shenoy in the lead role. The movie is directed by Mahesh Sukhashare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X