»   » ಟೆಕ್ಕಿಗಳ ಹೊಸ ಪ್ರಯತ್ನಕ್ಕೆ 'ಸಲಾಂ' ಎನ್ನಲೇಬೇಕು.!

ಟೆಕ್ಕಿಗಳ ಹೊಸ ಪ್ರಯತ್ನಕ್ಕೆ 'ಸಲಾಂ' ಎನ್ನಲೇಬೇಕು.!

Posted By:
Subscribe to Filmibeat Kannada

ಸೋಮವಾರ ದಿಂದ ಶುಕ್ರವಾರ ದವರೆಗೆ ಕೆಲಸ ಮಾಡಿ, ತಮ್ಮ ಸೃಜನಶೀಲತೆಯನ್ನ ಹೊರತರಲು ಶನಿವಾರ ಮತ್ತು ಭಾನುವಾರ ದಿನಗಳಂದು 'ಬೆನಕ ವೀಕೆಂಡ್ ಟಾಕೀಸ್'ಗೆ ಹಾಜರ್ ಆಗುವ ಟೆಕ್ಕಿಗಳ ಸಾಹಸಗಾಥೆ ಇದು.

ಐಟಿ ಉದ್ಯಮದಲ್ಲಿದ್ದುಕೊಂಡು ದಿನ ಬೆಳಗಾದ್ರೆ ಕಂಪ್ಯೂಟರ್ ಮುಂದೆ ಕೂರಬೇಕಾಗಿರುವ ಟೆಕ್ಕಿಗಳು, ಬಣ್ಣದ ಲೋಕದ ಕಡೆ ಆಕರ್ಷಿತರಾಗಿ 'ಪಂಚಿ' ಎಂಬ ಕಿರುಚಿತ್ರ ತಯಾರು ಮಾಡಿದ್ದಾರೆ. ಅದು ತಮ್ಮ ಐಟಿ ವೃತ್ತಿ ಹಾಗೂ ಅದರಿಂದ ತಮ್ಮ ಕುಟುಂಬದ ಮೇಲೆ ಆಗುತ್ತಿರುವ 'ದುಷ್'ಪರಿಣಾಮಗಳ ಕುರಿತು.[ಎಲ್ಲಾ ತಂದೆ-ತಾಯಂದಿರು ತಪ್ಪದೇ ನೋಡಬೇಕಾದ ಕಿರುಚಿತ್ರ ಇದು.!]

ಕೆಲಸಕ್ಕೆ ಹೋಗುವ ಅಪ್ಪ-ಅಮ್ಮನ ಬಿಜಿ ಶೆಡ್ಯೂಲ್ ನಿಂದ ಪುಟಾಣಿ ಕಂದಮ್ಮಗಳ ಮನಸ್ಸಿನ ಮೇಲೆ ಬೀರುವ ಪ್ರಭಾವವೇ 'ಪಂಚಿ' ಕಿರುಚಿತ್ರದ ಕಥಾಹಂದರ. ಮುಂದೆ ಓದಿ.....

'ಪಂಚಿ' ಆಡಿಯೋ ಬಿಡುಗಡೆ ಸಮಾರಂಭ

'ಪಂಚಿ' ಶಾರ್ಟ್ ಮೂವಿ ಆಗಿದ್ದರೂ, ಆರು ಹಾಡುಗಳಿವೆ. ಸಂದೀಪ್.ಪಿ.ಆರ್ ಸಂಗೀತ ಸಂಯೋಜಿಸಿರುವ 'ಪಂಚಿ' ಆಡಿಯೋ ಆಲ್ಬಂ ಸ್ವಾತಂತ್ರ್ಯ ದಿನೋತ್ಸವದಂದು ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಬಿಡುಗಡೆ ಆಯ್ತು.

ಅತಿಥಿಗಳು ಯಾರ್ಯಾರು.?

ಖ್ಯಾತ ನಾಟಕಕಾರ-ನಟ ಕಪ್ಪಣ್ಣ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್, ಎಂ.ಕೆ.ಭಾಸ್ಕರ್ ರಾವ್, ನಿರ್ಮಾಪಕ ಪ್ರಸನ್ನ ಸೇರಿದಂತೆ ಹಲವು ಗಣ್ಯರು 'ಪಂಚಿ' ಕಿರುಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ರು.

ಸ್ವಾತಂತ್ರ್ಯ ದಿನದಂದೇ ಆಡಿಯೋ ಬಿಡುಗಡೆ ಯಾಕೆ.?

ಪಂಚಿ ಅಂದ್ರೆ ಹಕ್ಕಿ ಅಂತರ್ಥ. ಹಾರುವ ಹಕ್ಕಿ ಸ್ವಾತಂತ್ರ್ಯದ ಪ್ರತೀಕ. ಹೀಗಾಗಿ 'ಪಂಚಿ' ಕಿರುಚಿತ್ರದ ಆಡಿಯೋ ರಿಲೀಸ್ ಆಗಸ್ಟ್ 15 ರಂದೇ ನೆರವೇರಿತು.

ಶುಭ ಹಾರೈಸಿದ ಕಪ್ಪಣ್ಣ

ಐಟಿ ಉದ್ಯಮದ ಬಿಜಿ ಶೆಡ್ಯೂಲ್ ನಡುವೆಯೂ ಉತ್ಸಾಹದಿಂದ 'ಪಂಚಿ' ತಯಾರು ಮಾಡಿರುವುದಕ್ಕೆ, ಕಿರುಚಿತ್ರತಂಡಕ್ಕೆ ಕಪ್ಪಣ್ಣ ಶುಭ ಕೋರಿದರು.

'ನೀರ್ ದೋಸೆ' ನಿರ್ಮಾಪಕ ಪ್ರಸನ್ನ

'ಪಂಚಿ' ಕಿರುಚಿತ್ರ ತಂಡಕ್ಕೆ 'ನೀರ್ ದೋಸೆ' ನಿರ್ಮಾಪಕ ಪ್ರಸನ್ನ ಕೂಡ ಶುಭಾಶಯ ತಿಳಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ನೆನಪಿನ ಕಾಣಿಕೆ ಕೂಡ ನೀಡಲಾಯ್ತು.

ಸಂಚಾರಿ ವಿಜಯ್ ಏನಂದ್ರು?

ಟೆಕ್ಕಿಗಳ 'ಪಂಚಿ' ಪ್ರಯತ್ನಕ್ಕೆ ನಟ ಸಂಚಾರಿ ವಿಜಯ್ ಅಭಿನಂದನೆ ಸಲ್ಲಿಸಿದರು.

ಸಾಮಾಜಿಕ ಸಂದೇಶ ಸಾರುವ 'ಪಂಚಿ'

ಮಕ್ಕಳಿಗೆ ದುಬಾರಿ ಉಡುಗೊರೆಗಳು ಬೇಕಾ? ಅಥವಾ ಅಪ್ಪ-ಅಮ್ಮನ ಪ್ರೀತಿ ಸಾಕಾ? ಎಂಬ ಪ್ರಶ್ನೆಗಳಿಗೆ ಉತ್ತರವೇ 'ಪಂಚಿ' ಕಿರುಚಿತ್ರ.

ಯೂಟ್ಯೂಬ್ ಗೆ ಮಾತ್ರ ಸೀಮಿತವಾಗಲ್ಲ!

ಇತ್ತೀಚೆಗೆ ತಯಾರಾಗುತ್ತಿರುವ ಕಿರುಚಿತ್ರಗಳು ಯೂಟ್ಯೂಬ್ ಗೆ ಸೀಮಿತವಾಗುತ್ತಿವೆ. ಆದ್ರೆ, 'ಪಂಚಿ' ಶಾರ್ಟ್ ಮೂವಿಯನ್ನ ಎಲ್ಲಾ ಶಾಲೆಗಳಲ್ಲೂ ಪ್ರದರ್ಶನ ಮಾಡುವ ಬಗ್ಗೆ ನಿರ್ದೇಶಕ ನಾಗರಾಜ್ ಶಂಕರ್ ಪ್ಲಾನ್ ಮಾಡಿದ್ದಾರೆ.

'ಪಂಚಿ' ಟ್ರೈಲರ್ ಇಲ್ಲಿದೆ ನೋಡಿ....

ಸಸ್ಪೆನ್ಸ್-ಥ್ರಿಲ್ಲರ್ ಫೀಲ್ ಕೊಡುವ 'ಪಂಚಿ' ಕಿರುಚಿತ್ರದ ಟ್ರೈಲರ್ ಇಲ್ಲಿದೆ ನೋಡಿ....

ವೀಕೆಂಡ್ ಕಾಣಿಕೆ

ವೀಕೆಂಡ್ ನಲ್ಲಿ ಬಿಡುವು ಮಾಡಿಕೊಂಡು, 'ಬೆನಕ ವೀಕೆಂಡ್ ಟಾಕೀಸ್' ಮೂಲಕ ಟೆಕ್ಕಿಗಳೆಲ್ಲಾ ಸೇರಿ ಹೊರತರುತ್ತಿರುವ ಮೊದಲ ಕಾಣಿಕೆ 'ಪಂಚಿ'. ಇವರ ಪ್ರಯತ್ನಕ್ಕೆ ಸಲಾಂ ಎನ್ನುವ ಜವಾಬ್ದಾರಿ ನಿಮ್ಮದು.

'ಪಂಚಿ' ಟೀಮ್ ಪರಿಚಯ

ಉಮೇಶ್.ಕೆ, ದೇಶಪಾಂಡೆ.ಜಿ, ನವೀನ್.ಆರ್.ಓ, ಪ್ರದೀಪ್.ಎಸ್, ಮಹೇಶ್.ಎಂ.ಬಿ ನಿರ್ಮಿಸಿರುವ 'ಪಂಚಿ' ಕಿರುಚಿತ್ರದಲ್ಲಿ ಪುಟಾಣಿ ಋತ್ವ, ಹರ್ಷ, ರಾಜೇಶ್ವರಿ, ಗುರುಪ್ರಸಾದ್, ನವೀನ್.ಆರ್.ಓ, ಪದ್ಮಜಾ, ಪ್ರಗತಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. ರಚನೆ-ನಿರ್ದೇಶನ ಮಾಡಿರುವವರು ನಾಗರಾಜ್ ಶಂಕರ್.

English summary
Nagaraj Shankar directorial Ruthwa, Harsha, Rajeshwari, Guruprasad, Naveen R O starrer 'Panchi' short movie audio album was released on August 15th, 2016 at Kappanna Angala, Bengaluru. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada