For Quick Alerts
  ALLOW NOTIFICATIONS  
  For Daily Alerts

  ಮರಾಠಿ ಶೈಲಿಯಲ್ಲಿ ಮದುವೆಯಾದ ಕನ್ನಡ ಚಿತ್ರದಲ್ಲೂ ಮಿಂಚಿದ್ದ ನಟಿ ನೇಹಾ

  |

  ವರ್ಷಾರಂಭದಲ್ಲೇ ನಟಿ ನೇಹಾ ಪೇಂಡ್ಸೆ ಹೊಸ ಜೀವನ ಆರಂಭಿಸಿದ್ದಾರೆ. ಇಷ್ಟದ ಹುಡುಗ ಶಾರ್ದೂಲ್ ಸಿಂಗ್ ಜೊತೆಗೆ ನಟಿ ನೇಹಾ ಪೇಂಡ್ಸೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.

  ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಶಾರ್ದೂಲ್ ಸಿಂಗ್ ಜೊತೆಗೆ ಎಂಗೇಜ್ ಆಗಿದ್ದ ನೇಹಾ ಪೇಂಡ್ಸೆ ಜನವರಿ 5 ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಪುಣೆಯ ಖಾಸಗಿ ಹೋಟೆಲ್ ನಲ್ಲಿ ನೇಹಾ ಪೇಂಡ್ಸೆ-ಶಾರ್ದೂಲ್ ಸಿಂಗ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ...

  ಹ್ಯಾಪಿ ಮ್ಯಾರೀಡ್ ಲೈಫ್ ನೇಹಾ-ಶಾರ್ದೂಲ್

  ಹ್ಯಾಪಿ ಮ್ಯಾರೀಡ್ ಲೈಫ್ ನೇಹಾ-ಶಾರ್ದೂಲ್

  ನಿನ್ನೆ (ಜನವರಿ 5) ಪುಣೆಯಲ್ಲಿ ನಟಿ ನೇಹಾ ಪೇಂಡ್ಸೆ ಮತ್ತು ಶಾರ್ದೂಲ್ ಸಿಂಗ್ ಮದುವೆ ಮರಾಠಿ ಸಂಪ್ರದಾಯದಂತೆ ಅದ್ಧೂರಿಯಾಗಿ ನೆರವೇರಿದೆ. ಹೊಸ ಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  ವಿವಾಹ ಸಂಭ್ರಮದಲ್ಲಿ ಕನ್ನಡದ 'ಇನ್ಸ್ ಪೆಕ್ಟರ್ ಝಾನ್ಸಿ' ನಟಿ ನೇಹಾ.!ವಿವಾಹ ಸಂಭ್ರಮದಲ್ಲಿ ಕನ್ನಡದ 'ಇನ್ಸ್ ಪೆಕ್ಟರ್ ಝಾನ್ಸಿ' ನಟಿ ನೇಹಾ.!

  ಪ್ರೀತಿಸಿ-ವಿವಾಹವಾದ ಜೋಡಿ

  ಪ್ರೀತಿಸಿ-ವಿವಾಹವಾದ ಜೋಡಿ

  ನಟಿ ನೇಹಾ ಪೇಂಡ್ಸೆ ಮತ್ತು ಶಾರ್ದೂಲ್ ಸಿಂಗ್ ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷದ ಹಿಂದೆಯಷ್ಟೇ ಪಾರ್ಟಿಯೊಂದರಲ್ಲಿ ನೇಹಾ-ಶಾರ್ದೂಲ್ ಮೀಟ್ ಆಗಿದ್ದರು. ಅಲ್ಲಿಂದಲೇ ಸ್ನೇಹಿತರಾದ ಇವರಿಬ್ಬರ ಮಧ್ಯೆ ಪ್ರೀತಿ ಮೂಡಿತು. ಇಬ್ಬರ ಪ್ರೀತಿಗೆ ಕುಟುಂಬ ಸಮ್ಮತಿ ನೀಡಿ, ಮದುವೆ ನೆರವೇರಿಸಿಕೊಟ್ಟಿದ್ದಾರೆ.

  ವಿವಾಹ ಪೂರ್ವ ಶಾಸ್ತ್ರಗಳು

  ವಿವಾಹ ಪೂರ್ವ ಶಾಸ್ತ್ರಗಳು

  ಮದುವೆಗೂ ಮುನ್ನ ಪುಣೆಯ ಖಾಸಗಿ ಹೋಟೆಲ್ ನಲ್ಲಿ ವಿವಾಹ ಪೂರ್ವ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿತ್ತು. ಮೆಹಂದಿ ಮತ್ತು ಸಂಗೀತ ಸಮಾರಂಭಗಳಲ್ಲಿ ನೇಹಾ ಪೇಂಡ್ಸೆ ಮತ್ತು ಶಾರ್ದೂಲ್ ಸಿಂಗ್ ಖುಷಿಯಿಂದ ಪಾಲ್ಗೊಂಡರು.

  ಯಾರೀ ನೇಹಾ ಪೇಂಡ್ಸೆ.?

  ಯಾರೀ ನೇಹಾ ಪೇಂಡ್ಸೆ.?

  ಮರಾಠಿ ಕುಟುಂಬದ ಹುಡುಗಿ ನೇಹಾ ಪೇಂಡ್ಸೆ ಹಿಂದಿಯ 'ದೀವಾನೆ', 'ಡ್ರೀಮ್ಸ್', 'ಸ್ವಾಮಿ', ಕನ್ನಡದ 'ಇನ್ಸ್ ಪೆಕ್ಟರ್ ಝಾನ್ಸಿ', ತೆಲುಗಿನ 'ವೀಧಿ ರೌಡಿ', ತಮಿಳಿನ 'ಮೌನಂ ಪೇಸಾದೆ', ಮರಾಠಿಯ 'ಟೂರಿಂಗ್ ಟಾಕೀಸ್', 'ಬೋಲ್ ಬೇಬಿ ಬೋಲ್', 'ನಟ್ ಸಾಮ್ರಾಟ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಪಡೋಸನ್', 'ಮೀಟಿ ಮೀಟಿ ಬಾತೇ', 'ಮೇ ಐ ಕಮ್ ಇನ್ ಮೇಡಮ್', 'ಕಾಮಿಡಿ ದಂಗಲ್' ಮುಂತಾದ ಜನಪ್ರಿಯ ಶೋಗಳಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲೂ ನೇಹಾ ಖ್ಯಾತಿ ಪಡೆದಿದ್ದಾರೆ. ಹಿಂದಿಯ 'ಬಿಗ್ ಬಾಸ್-12' ನಲ್ಲಿ ನೇಹಾ ಪೇಂಡ್ಸೆ ಸ್ಪರ್ಧಿಯಾಗಿದ್ದರು.

  English summary
  In pics: Neha Pendse got hitched to Shardul Singh Bayas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X