For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರ್ 'ಜಾಗ್ವಾರ್' ಸ್ಪೆಷಾಲಿಟೀಸ್ ಏನು ಗೊತ್ತಾ?

  By Harshitha
  |

  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ 57ನೇ ಹುಟ್ಟುಹಬ್ಬದಂದೇ (ಡಿಸೆಂಬರ್ 16) ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಮೊಟ್ಟ ಮೊದಲ ಸಿನಿಮಾ 'ಜಾಗ್ವಾರ್' ಅದ್ದೂರಿ ಮುಹೂರ್ತ ನೆರವೇರಿತು.

  ಬೆಂಗಳೂರಿನ ಕಂಠೀರವ ಒಳಾಂಗಣದಲ್ಲಿ ಆಯೋಜಿಸಿದ್ದ ಕಲರ್ ಫುಲ್ ವೇದಿಕೆಯಲ್ಲಿ 'ಜಾಗ್ವಾರ್' ಸಿನಿಮಾಗೆ ಚಾಲನೆ ನೀಡಲಾಯ್ತು.

  ಹೇಳಿ ಕೇಳಿ 'ಜಾಗ್ವಾರ್' ಎಚ್.ಡಿ.ಕುಮಾರಸ್ವಾಮಿ ರವರ 'ಚೆನ್ನಾಂಬಿಕ ಫಿಲ್ಮ್ಸ್' ಬ್ಯಾನರ್ ನಡಿ ತಯಾರಾಗುತ್ತಿರುವ ಸಿನಿಮಾ. ಅದ್ರಲ್ಲೂ ಪುತ್ರ ನಿಖಿಲ್ ಕುಮಾರ್ ಚೊಚ್ಚಲ ಚಿತ್ರ. ಅಂದ್ಮೇಲೆ ಸಿನಿಮಾದಲ್ಲಿ ಸೂಪರ್ ಸ್ಪೆಷಾಲಿಟೀಸ್ ಇರಲೇಬೇಕು. ಆ ಎಲ್ಲಾ ಸ್ಪೆಷಾಲಿಟೀಸ್ ಬಗ್ಗೆ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

   'ಜಾಗ್ವಾರ್'ಗೆ ಸಿಕ್ತು ಅದ್ದೂರಿ ಚಾಲನೆ!

  'ಜಾಗ್ವಾರ್'ಗೆ ಸಿಕ್ತು ಅದ್ದೂರಿ ಚಾಲನೆ!

  ಗಣಪತಿ ಸ್ತುತಿ ಮಾಡುವುದರೊಂದಿಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 'ಜಾಗ್ವಾರ್' ಮುಹೂರ್ತಕ್ಕೆ ಚಾಲನೆ ನೀಡಲಾಯ್ತು.[ಸ್ಯಾಂಡಲ್ ವುಡ್ ನ ಭರವಸೆಯ 'ಸ್ಟಾರ್' ನಿಖಿಲ್ ಕುಮಾರ್!]

  ವಿಡಿಯೋ ನಂತರ ಪ್ರತ್ಯಕ್ಷವಾದ ನಿಖಿಲ್

  ವಿಡಿಯೋ ನಂತರ ಪ್ರತ್ಯಕ್ಷವಾದ ನಿಖಿಲ್

  MAKING OF NIKHIL KUMAR ವಿಡಿಯೋ ಬಿಡುಗಡೆ ಆದ ನಂತರ ವೇದಿಕೆ ಮೇಲೆ ನಿಖಿಲ್ ಕುಮಾರ್ ಹಾಜರಾದರು.[ಚಿತ್ರಗಳು ; ನಿಖಿಲ್ ಗ್ರ್ಯಾಂಡ್ ಎಂಟ್ರಿಗೆ ಸಾಕ್ಷಿಯಾದ ಗಣ್ಯರು]

  ಕ್ಲಾಪ್ ಮಾಡಿದ ದೇವೇಗೌಡರು

  ಕ್ಲಾಪ್ ಮಾಡಿದ ದೇವೇಗೌಡರು

  ಮೊಮ್ಮಗ ನಿಖಿಲ್ ಕುಮಾರ್ ಮೊದಲ ಸಿನಿಮಾ 'ಜಾಗ್ವಾರ್'ಗೆ ಎಚ್.ಡಿ.ದೇವೇಗೌಡರು ಕ್ಲಾಪ್ ಮಾಡಿದರು.[ವಿಡಿಯೋ ; 'ಜಾಗ್ವಾರ್' ನಿಖಿಲ್ ತಯಾರಿ ಸೂಪರ್ರೋ ಸೂಪರ್.!]

  ಅಜ್ಜಿ ಕ್ಯಾಮರಾ ಆನ್ ಮಾಡಿದರು.

  ಅಜ್ಜಿ ಕ್ಯಾಮರಾ ಆನ್ ಮಾಡಿದರು.

  ಅಜ್ಜಿ ಚೆನ್ನಮ್ಮ ದೇವೇಗೌಡ ಕ್ಯಾಮರಾ ಸ್ವಿಚ್ ಆನ್ ಮಾಡಿ ಮೊಮ್ಮಗನ ಸಿನಿಮಾಗೆ ಶುಭ ಹಾರೈಸಿದರು.[ಹೀರೋ ಆದ ನಿಖಿಲ್; ಗೌಡರ ಮನೆಯಲ್ಲಿ ಭಿನ್ನಮತ!?]

  ಗೌಡರು ಹೇಳಿದ್ದೇನು?

  ಗೌಡರು ಹೇಳಿದ್ದೇನು?

  ''ರಾಜಕೀಯ ಕುಟುಂಬ ಈಗ ಸಿನಿಮಾರಂಗಕ್ಕೂ ಬಂದಾಗಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ನನ್ನ ಮಗ ರಾಜಕಾರಣಿ ಹಾಗು ನಿರ್ಮಾಪಕ. ಮೊಮ್ಮಗ ಈಗ ಹೀರೋ. ನಿಖಿಲ್ ಮಾಡಿದ ಎಲ್ಲಾ ಕಸರತ್ತನ್ನೂ ಗಮನಿಸಿದೆ. ಇದು ನಮ್ಮ ಕುಟುಂಬದ ಹೊಸ ಅಧ್ಯಾಯ'' ಎಂದರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.[ಮಗನಿಗೆ ಮರುನಾಮಕರಣ ಮಾಡಿದ ಕುಮಾರಸ್ವಾಮಿ..!]

  ಮೊದಲ ಶಾಟ್ ಎದುರಿಸಿದ ನಿಖಿಲ್

  ಮೊದಲ ಶಾಟ್ ಎದುರಿಸಿದ ನಿಖಿಲ್

  ದೇವರಿಗೆ ಪೂಜೆ ಸಲ್ಲಿಸುವ ಮೂಲಕ ನಿಖಿಲ್ ಕುಮಾರ್ ಮೊದಲ ಶಾಟ್ ಎದುರಿಸಿದರು.['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

  'ಜಾಗ್ವಾರ್' ಸ್ಪೆಷಾಲಿಟಿ ಏನು?

  'ಜಾಗ್ವಾರ್' ಸ್ಪೆಷಾಲಿಟಿ ಏನು?

  ಮನರಂಜನೆಯ ಎಲ್ಲಾ ಸರಕು ಇರುವ ಕಂಪ್ಲೀಟ್ ಫ್ಯಾಮಿಲಿ ಕೂತು ನೋಡುವ 100% ಎಂಟರ್ ಟೇನಿಂಗ್ ಸಿನಿಮಾ 'ಜಾಗ್ವಾರ್'. ಆಕ್ಷನ್ ಜೊತೆಗೆ ಡ್ಯಾನ್ಸ್ ಮತ್ತು ಸೆಂಟಿಮೆಂಟ್ ಹದವಾಗಿ ಬೆರೆತಿರುವ ಸಿನಿಮಾ 'ಜಾಗ್ವಾರ್'.[ಯಾರ ಕೈಗೂ ಸಿಕ್ಕಲ್ಲವಂತೆ ಎಚ್.ಡಿ.ಕೆ ಪುತ್ರ ನಿಖಿಲ್!]

  'ಜಾಗ್ವಾರ್' ಟೈಟಲ್ ಯಾಕೆ?

  'ಜಾಗ್ವಾರ್' ಟೈಟಲ್ ಯಾಕೆ?

  'ಜಾಗ್ವಾರ್' ಟೈಟಲ್ ಗೂ ಕಾರ್ ಗೂ ಯಾವುದೇ ಸಂಬಂಧ ಇಲ್ಲ. 'ಜಾಗ್ವಾರ್' ಒಂದು ಪ್ರಾಣಿ. ಆ ಪ್ರಾಣಿಯ ಸ್ವಭಾವ ಹೇಗಿದೆಯೋ, ಅದೇ ತರಹದ ಪಾತ್ರ ನಿಖಿಲ್ ಕುಮಾರ್ ರದ್ದು.[ಡಾ.ರಾಜ್ ಕುಮಾರ್ ನನಗೆ ಸ್ಪೂರ್ತಿ - ನಿಖಿಲ್ ಗೌಡ]

  ದ್ವಿಭಾಷೆಯಲ್ಲಿ ರೆಡಿಯಾಗಲಿದೆ 'ಜಾಗ್ವಾರ್'

  ದ್ವಿಭಾಷೆಯಲ್ಲಿ ರೆಡಿಯಾಗಲಿದೆ 'ಜಾಗ್ವಾರ್'

  'ಜಾಗ್ವಾರ್' ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರೆಡಿಯಾಗಲಿದೆ. ಆ ಮೂಲಕ ಟಾಲಿವುಡ್ ಗೂ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ನಿಖಿಲ್ ಕುಮಾರ್.

  ರಾಜಮೌಳಿ ಶಿಷ್ಯ....

  ರಾಜಮೌಳಿ ಶಿಷ್ಯ....

  'ಜಾಗ್ವಾರ್' ನಿರ್ದೇಶಕ ಮಹದೇವ್, ಖ್ಯಾತ ನಿರ್ದೇಶಕ ರಾಜಮೌಳಿಯವರ ಶಿಷ್ಯ. ಮೊದಲ ಬಾರಿ ಕನ್ನಡ ಚಿತ್ರಕ್ಕೆ ಮಹದೇವ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

  ರಾಜಮೌಳಿ ತಂದೆ ಕಥೆ

  ರಾಜಮೌಳಿ ತಂದೆ ಕಥೆ

  'ಬಾಹುಬಲಿ', 'ಮಗಧೀರ', 'ಯಮದೊಂಗ', 'ಭಜರಂಗಿ ಭಾಯ್ ಜಾನ್' ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಕಥೆ ರಚಿಸಿರುವ ವಿಜಯೇಂದ್ರ ಪ್ರಸಾದ್ (ರಾಜಮೌಳಿ ತಂದೆ) 'ಜಾಗ್ವಾರ್' ಸಿನಿಮಾಗೆ ಕಥೆ ಬರೆದಿದ್ದಾರೆ.

  ತಾಯಿ ಸೆಂಟಿಮೆಂಟ್ ಇದೆ!

  ತಾಯಿ ಸೆಂಟಿಮೆಂಟ್ ಇದೆ!

  ಮೂಲಗಳ ಪ್ರಕಾರ, 'ಜಾಗ್ವಾರ್' ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಗೆ ಪ್ರಾಮುಖ್ಯತೆ ನೀಡಲಾಗಿದೆ. 'ಅಮ್ಮ'ನ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಹೀರೋಯಿನ್ ಯಾರು?

  ಹೀರೋಯಿನ್ ಯಾರು?

  'ಜಾಗ್ವಾರ್' ಸಿನಿಮಾದಲ್ಲಿ ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವವರು ಯಾರು ಅನ್ನೋದಿನ್ನೂ ಕನ್ಫರ್ಮ್ ಆಗಿಲ್ಲ.

  ತಮನ್ ಸಂಗೀತ

  ತಮನ್ ಸಂಗೀತ

  ಟಾಲಿವುಡ್ ಸಂಗೀತ ನಿರ್ದೇಶಕ ತಮನ್ 'ಜಾಗ್ವಾರ್' ಚಿತ್ರಕ್ಕೆ ಸ್ವರ ಸಂಯೋಜನೆ ಮಾಡುತ್ತಿದ್ದಾರೆ.

  ಶೂಟಿಂಗ್ ಶುರು ಯಾವಾಗ?

  ಶೂಟಿಂಗ್ ಶುರು ಯಾವಾಗ?

  ಜನವರಿ 4 ರಿಂದ 'ಜಾಗ್ವಾರ್' ಚಿತ್ರದ ಶೂಟಿಂಗ್ ಶುರುವಾಗಲಿದೆ.

  English summary
  Nikhil Kumar, son of EX CM H.D.Kumaraswamy is making his debut in Sandalwood through 'Jaguar'. Read the article to know the specialities of 'Jaguar'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X