»   » ಚಿತ್ರಗಳು - ಅದ್ಧೂರಿಯಾಗಿ ಬಿಡುಗಡೆ ಆದ 'ಚಕ್ರವ್ಯೂಹ' ಆಡಿಯೋ

ಚಿತ್ರಗಳು - ಅದ್ಧೂರಿಯಾಗಿ ಬಿಡುಗಡೆ ಆದ 'ಚಕ್ರವ್ಯೂಹ' ಆಡಿಯೋ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 41ನೇ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ (ಮಾರ್ಚ್ 17) 'ಚಕ್ರವ್ಯೂಹ' ಚಿತ್ರದ ಆಡಿಯೋ ಬಿಡುಗಡೆ ಆಯ್ತು.

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ ನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ರಚಿತಾ ರಾಮ್ ಮೊದಲ ಬಾರಿಗೆ ಜೋಡಿಯಾಗಿ ಅಭಿನಯದ 'ಚಕ್ರವ್ಯೂಹ' ಸಿನಿಮಾದ ಆಡಿಯೋ ಅದ್ಧೂರಿಯಾಗಿ ಬಿಡುಗಡೆ ಆಯ್ತು.


ಟಾಲಿವುಡ್ ನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಎಸ್.ಎಸ್.ಥಮನ್ ಸಂಗೀತ ನೀಡಿರುವ 'ಚಕ್ರವ್ಯೂಹ' ಚಿತ್ರದ ಹಾಡುಗಳು ಇದೀಗ ಬಿಸಿ ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ. ['ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು]


ರಾಜಕೀಯ ಹಾಗೂ ಚಲನಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಜರುಗಿದ 'ಚಕ್ರವ್ಯೂಹ' ಆಡಿಯೋ ಲಾಂಚ್ ನ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....


'ಚಕ್ರವ್ಯೂಹ' ಆಡಿಯೋ ಲಾಂಚ್

ನಿನ್ನೆ (ಮಾರ್ಚ್ 17) ಸಂಜೆ 7 ಗಂಟೆ ಸುಮಾರಿಗೆ 'ಚಕ್ರವ್ಯೂಹ' ಚಿತ್ರದ ಆಡಿಯೋ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು.


ಆಡಿಯೋ ರಿಲೀಸ್ ನಲ್ಲಿ ಗಣ್ಯರ ಸಮಾಗಮ

'ಚಕ್ರವ್ಯೂಹ' ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದವರು ವಸತಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್, ದಿನೇಶ್ ಗುಂಡೂರಾವ್ ಮತ್ತು ನಿರ್ಮಾಪಕ ಮುನಿರತ್ನ.


ಮಾಜಿ ಸಚಿವ ಎಂ.ರಘುಪತಿ

ವಸತಿ ಸಚಿವ ಅಂಬರೀಶ್ ಜೊತೆ ಮಾಜಿ ಸಚಿವ ಎಂ.ರಘುಪತಿ ಅವರನ್ನೂ ನೀವು ಚಿತ್ರದಲ್ಲಿ ಕಾಣಬಹುದು.


ಡಿ.ಕೆ.ಶಿ ಕೂಡ ಬಂದಿದ್ದರು!

ಚಲನಚಿತ್ರರಂಗದಿಂದ ಕೊಂಚ ದೂರ ಇರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೂಡ 'ಚಕ್ರವ್ಯೂಹ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.


ನೃತ್ಯ ಕಾರ್ಯಕ್ರಮ

ಗಣಪತಿಗೆ ವಂದನೆ ಸಲ್ಲಿಸುವ ಮೂಲಕ 'ಚಕ್ರವ್ಯೂಹ' ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.


ಸಚಿವರನ್ನ ಬರಮಾಡಿಕೊಂಡ ಅಪ್ಪು!

ಹೂ ಗುಚ್ಛ ನೀಡುವ ಮೂಲಕ ಎಲ್ಲಾ ಅತಿಥಿಗಳನ್ನ ಖುದ್ದು ಬರಮಾಡಿಕೊಂಡರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.


ಡಿ.ಕೆ.ಶಿ ಜೊತೆ ಪುನೀತ್

ಆಡಿಯೋ ರಿಲೀಸ್ ಗ್ಯಾಪ್ ನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಪುನೀತ್ ರಾಜ್ ಕುಮಾರ್ ಹರಟಿದರು.


ರಾಕ್ ಲೈನ್ ವೆಂಕಟೇಶ್ ಬಂದಿದ್ರು

ಡಾ.ರಾಜ್ ಕುಟುಂಬಕ್ಕೆ ಅತ್ಯಾಪ್ತರಾಗಿರುವ ರಾಕ್ ಲೈನ್ ವೆಂಕಟೇಶ್ ಕೂಡ 'ಚಕ್ರವ್ಯೂಹ' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಪವರ್ ಸ್ಟಾರ್ ಕುಟುಂಬ

'ಚಕ್ರವ್ಯೂಹ' ಆಡಿಯೋ ಲಾಂಚ್ ನಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಕೂಡ ಪಾಲ್ಗೊಂಡರು.
ನಟಿ ರಚಿತಾ ರಾಮ್

ಕೆಂಪು ಬಣ್ಣದ ಡಿಸೈನರ್ ಉಡುಪಿನಲ್ಲಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಮಿರಿ ಮಿರಿ ಮಿಂಚುತ್ತಿದ್ದರು.


ಮೊದಲ ಬಾರಿ ಅಪ್ಪು ಜೊತೆ ಜೋಡಿ

'ಚಕ್ರವ್ಯೂಹ' ಚಿತ್ರದ ಮೂಲಕ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದಾರೆ ನಟಿ ರಚಿತಾ ರಾಮ್.


ರಾಜಕೀಯ ಮುಖಂಡರು ಆಡಿಯೋ ರಿಲೀಸ್ ಮಾಡಿದ್ರು

ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮುನಿರತ್ನ, ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ 'ಚಕ್ರವ್ಯೂಹ' ಆಡಿಯೋ ಬಿಡುಗಡೆ ಆಯ್ತು.


ಎಸ್.ಎಸ್.ಥಮನ್ ಸಂಗೀತ

'ದೂಕುಡು', 'ಬಿಜಿನೆಸ್ ಮೆನ್', 'ಬಾದ್ ಶಾ', 'ಬಲುಪು', 'ರೇಸ್ ಗುರ್ರಂ' ಸೇರಿದಂತೆ ಟಾಲಿವುಡ್ ನಲ್ಲಿ ಅನೇಕ ಚಿತ್ರಗಳಿಗೆ ಹಿಟ್ ಮ್ಯೂಸಿಕ್ ನೀಡಿರುವ ಎಸ್.ಎಸ್.ಥಮನ್ 'ಚಕ್ರವ್ಯೂಹ' ಚಿತ್ರಕ್ಕೂ ಸಂಗೀತ ನೀಡಿದ್ದಾರೆ.


ಪುನೀತ್ ಗಾಗಿ 'ಪವರ್ ***'

ಈಗಾಗಲೇ ಪುನೀತ್ ರಾಜ್ ಕುಮಾರ್ ಅಭಿನಯದ 'ಪವರ್ ***' ಚಿತ್ರಕ್ಕೆ ಎಸ್.ಎಸ್.ಥಮನ್ ಸಂಗೀತ ನೀಡಿದ್ದರು.


ನಿರ್ದೇಶಕ ಸರವಣನ್

ತಮಿಳಿನಲ್ಲಿ 'ಎಂಗೆಯುಮ್ ಎಪ್ಪೋದಮ್', 'ಇವನ್ ವೀರಮಾದಿರಿ', 'ವಾಲಿಯವನ್' ಚಿತ್ರಗಳನ್ನ ನಿರ್ದೇಶಿಸಿದ ಎಂ.ಸರವಣನ್ ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಗೆ ಮುಖ ಮಾಡಿರುವ ಚಿತ್ರ 'ಚಕ್ರವ್ಯೂಹ'.


ವಿಲನ್ ಅರುಣ್ ವಿಜಯ್

ಕಾಲಿವುಡ್ ನಲ್ಲಿ ಬಹುಬೇಡಿಕೆಯಲ್ಲಿರುವ ನಟ ಅರುಣ್ ವಿಜಯ್ 'ಚಕ್ರವ್ಯೂಹ' ಚಿತ್ರದಲ್ಲಿ ವಿಲನ್ ಆಗಿ ಮಿಂಚಿದ್ದಾರೆ.


ಜೂ.ಎನ್.ಟಿ.ಆರ್ ಹಾಡಿರುವ ಮೇಕಿಂಗ್ ವಿಡಿಯೋ ನೋಡಿ

ಪುನೀತ್ - ಕಾಜಲ್ ಜುಗಲ್ಬಂದಿ

'ಚಕ್ರವ್ಯೂಹ' ಟ್ರೈಲರ್ ಲಾಂಚ್

ಇದೇ ವೇಳೆ 'ಚಕ್ರವ್ಯೂಹ' ಟ್ರೈಲರ್ ಕೂಡ ಲಾಂಚ್ ಆಯ್ತು. ಅದನ್ನ ನೀವೇ ಕಣ್ತುಂಬಿಕೊಳ್ಳಿ...


'ಚಕ್ರವ್ಯೂಹ' ರಿಲೀಸ್ ಯಾವಾಗ?

ಮೂಲಗಳ ಪ್ರಕಾರ, ಮಾರ್ಚ್ ಕೊನೆ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ 'ಚಕ್ರವ್ಯೂಹ' ಚಿತ್ರ ತೆರೆಗೆ ಬರಲಿದೆ.


English summary
On the ocassion of Puneeth Rajkumar's 41st Birthday, 'Chakravyuha' audio was launched in Jnanajyothi Auditorium, Central College, Bengaluru. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada