»   » 'ದೊಡ್ಮನೆ ಅಳಿಯ' ದಿಲೀಪ್ ಗೆ ವೈಭವದ ವರಪೂಜೆ

'ದೊಡ್ಮನೆ ಅಳಿಯ' ದಿಲೀಪ್ ಗೆ ವೈಭವದ ವರಪೂಜೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸುಪುತ್ರಿ ಡಾ.ನಿರುಪಮ ಅವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರುತ್ತಿದೆ. ಇಂದು (ಆಗಸ್ಟ್ 31) ಡಾ.ನಿರುಪಮ ಅವರನ್ನ ಬಾಳಸಂಗಾತಿಯಾಗಿ ಡಾ.ದಿಲೀಪ್ ಕೈಹಿಡಿಯಲಿದ್ದಾರೆ. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

ಅಳಿಯ ದಿಲೀಪ್ ಗೆ ಮಾವ ಶಿವರಾಜ್ ಕುಮಾರ್ ಅರ್ಧ ಕೋಟಿ ಮೌಲ್ಯದ BMW ಕಾರ್ ನ ಉಡುಗೊರೆಯಾಗಿ ನೀಡುತ್ತಿದ್ದಾರೆ. ನಿನ್ನೆ ತಮ್ಮ ಮನೆಯಲ್ಲಿ ಪೂಜಾ ಕಾರ್ಯಗಳನ್ನ ನೆರವೇರಿಸಿ, ಅದೇ ಕಾರ್ ನಲ್ಲಿ ಅರಮನೆ ಮೈದಾನಕ್ಕೆ ಬಂದಿಳಿದ ಶಿವರಾಜ್ ಕುಮಾರ್ ದಂಪತಿ ವರನ ಕುಟುಂಬದವರನ್ನ ಆತ್ಮೀಯವಾಗಿ ಸ್ವಾಗತಿಸಿದರು. ['ದೊಡ್ಮನೆ ಅಳಿಯ'ನಿಗೆ ಶಿವಣ್ಣ ಬಂಪರ್ ಉಡುಗೊರೆ]

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಿನ್ನೆ ವರಪೂಜೆ ಕಾರ್ಯಕ್ರಮ ವೈಭವದಿಂದ ನೆರವೇರಿತು. ವರಪೂಜೆಯ ವೈಭವ ಹೇಗಿತ್ತು ಅನ್ನೋದನ್ನ ತಿಳಿದುಕೊಳ್ಳಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಸೂಟ್ ನಲ್ಲಿ ಕಂಗೊಳಿಸಿದ ಡಾ.ದಿಲೀಪ್

ಡಾ.ದಿಲೀಪ್ ಟಿಪ್ ಟಾಪ್ ಆಗಿ ಸೂಟ್ ತೊಟ್ಟು ಅರಮನೆ ಮೈದಾನಕ್ಕೆ ಬಂದಿಳಿದರು.

ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಶಿವಣ್ಣ

ತಲೆಗೆ ಪೇಟ ತೊಟ್ಟು ವರನ ಕುಟುಂಬದವರನ್ನ ಶಿವಣ್ಣ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ['ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಮಂಡ್ಯ ಮೂಲದ ಡಾ.ದಿಲೀಪ್

ಬೆಂಗಳೂರಿನ ಎಚ್.ಎಸ್.ಆರ್.ಲೇಔಟ್ ನಲ್ಲಿ ವಾಸವಾಗಿರುವ ಡಾ.ದಿಲೀಪ್ ಮೂಲತಃ ಮಂಡ್ಯದವರು.

ಎಂಟು ವರ್ಷದ ನಂಟು

ಅಂಡರ್ ಗ್ರ್ಯಾಡ್ಜುಯೇಷನ್ ಓದುವಾಗಿನಿಂದಲೂ ಡಾ.ದಿಲೀಪ್ ಗೆ ಡಾ.ನಿರುಪಮ ಪರಿಚಯ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ಇಂದು ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗುತ್ತಿದೆ. ಇಬ್ಬರದ್ದು ಎಂಟು ವರ್ಷಗಳ ನಂಟು. [ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು]

ವರಪೂಜೆಗೆ ಜನಜಂಗುಳಿ

ನಿನ್ನೆ (ಆಗಸ್ಟ್ 30) ನಡೆದ ವರಪೂಜೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಶಿವರಾಜ್ ಕುಮಾರ್ ಅವರ ಕುಟುಂಬದಿಂದಲೇ ಸಾವಿರಾರು ಮಂದಿ ಆಗಮಿಸಿದ್ದಾರೆ. ಸಿಂಗಾನಲ್ಲೂರಿನಿಂದ 5 ಬಸ್ ಗಳಲ್ಲಿ 500ಕ್ಕೂ ಹೆಚ್ಚು ಜನ ಹಾಜರಾಗಿದ್ದಾರೆ.

'ದೊಡ್ಮನೆ ಅಳಿಯನಾಗುವುದಕ್ಕೆ ಲಕ್ಕಿ'

'ದೊಡ್ಮನೆ ಅಳಿಯನಾಗುತ್ತಿರುವುದಕ್ಕೆ ನಾನು ಲಕ್ಕಿ' ಅಂತಾರೆ ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್.

ಲಘು ಲಾಠಿ ಪ್ರಹಾರ

ಶಿವರಾಜ್ ಕುಮಾರ್ ಮಗಳು ಡಾ.ನಿರುಪಮ ವಿವಾಹ ಮಹೋತ್ಸವಕ್ಕೆ ಜನಸಾಮಾನ್ಯರಿಗೂ ಪ್ರವೇಶ ಇರುವ ಕಾರಣ, ವರಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಚ್ಚು ಮಂದಿ ಆಗಮಿಸಿದರು. ತಳ್ಳಾಟ-ನೂಕಾಟವನ್ನ ತಪ್ಪಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಬಿಳಿ ಪಂಚೆ-ಶಲ್ಯ ತೊಟ್ಟ ದಿಲೀಪ್

ವರಪೂಜೆಗಾಗಿ ಬಿಳಿ ಪಂಚೆ-ಶಲ್ಯ ತೊಟ್ಟು ಡಾ.ದಿಲೀಪ್ ಆಗಮಿಸುತ್ತಿರುವುದು.

ಎಣ್ಣೆ ಶಾಸ್ತ್ರ

ಸಂಪ್ರದಾಯದಂತೆ ವರನಿಗೆ ಎಣ್ಣೆ ಶಾಸ್ತ್ರ ನೆರವೇರಿಸಲಾಯ್ತು.

ನಗುಮೊಗದಲ್ಲಿ ಡಾ.ದಿಲೀಪ್

ಶಾಸ್ತ್ರ ಸಂಪ್ರದಾಯಗಳು ನೆರವೇರುತ್ತಿದ್ದ ಸಂದರ್ಭದಲ್ಲಿ ಡಾ.ದಿಲೀಪ್ ಹಸನ್ಮುಖರಾಗಿದ್ದರು.

    English summary
    Kannada Actor Shivarajkumar Daughter Dr.Nirupama is getting married to Dr.Dileep today (August 31st) in Palace Grounds, Bengaluru. Check out the pictures of Shivarajkumar's son-in-law Dr.Dileep's Varapooja.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada