»   » ಚಪ್ಪಲಿ ಅಂದ್ರೆ ಬಾಯಿ ಬಾಯಿ ಬಿಡುವ ಕುವರಿ ಈಕೆ.!

ಚಪ್ಪಲಿ ಅಂದ್ರೆ ಬಾಯಿ ಬಾಯಿ ಬಿಡುವ ಕುವರಿ ಈಕೆ.!

Posted By:
Subscribe to Filmibeat Kannada

ಸಿಂಗಾರ ಮಾಡಿಕೊಳ್ಳುವುದು ಯಾವ ಹುಡುಗಿಯರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಎಲ್ಲರಿಂದ 'ಸುಂದರಿ' ಅಂತ ಬಿರುದು ಪಡೆದುಕೊಳ್ಳಬೇಕು ಅಂದ್ರೆ ಚೆಂದದ ಬಟ್ಟೆ, ಅದಕ್ಕೆ ಹೊಂದುವಂತಹ ಆಭರಣ, ನಿಯಮಿತ ಮೇಕಪ್, ಮ್ಯಾಚಿಂಗ್ ಚಪ್ಪಲಿ...ಎಲ್ಲವೂ ಇರಲೇಬೇಕು.

ಇದೇ ಕಾರಣಕ್ಕೆ ಶಾಪಿಂಗ್ ಅಂತ ಕುವರಿಯರು ಹೊರಗೆ ಹೊರಟರೆ ಎಲ್ಲಾ ಮ್ಯಾಚಿಂಗ್ ಮಾಡಿಕೊಂಡು ಬರುವಷ್ಟರಲ್ಲಿ ಹೊತ್ತು ಮುಳುಗಿರುತ್ತೆ. [ಚಂದನವನ ರಾಜಕುಮಾರಿ ರಾಧಿಕಾ ಸ್ಟೈಲ್, ಸ್ಮೈಲ್]

ಟಾಪ್ ಟು ಬಾಟಂ ಮ್ಯಾಚಿಂಗ್ ಆಗಿರ್ಬೇಕು ಎಂಬುದು ಹಲವರ ಪಾಲಿಸಿ ಆಗಿದ್ರೆ, ಕೆಲವರಿಗೆ 'ಚಪ್ಪಲಿ ಹುಚ್ಚು.!'

ಯಾವಾಗ ಶಾಪಿಂಗ್ ಗೆ ಅಂತ ಹೊರಗೆ ಹೋದ್ರೂ, ಬೇರೇನು ಕೊಂಡುಕೊಳ್ಳಲಿಲ್ಲ ಅಂದ್ರೂ ಚಪ್ಪಲಿ ಮಾತ್ರ ಮಿಸ್ ಮಾಡದೆ ಖರೀದಿ ಮಾಡ್ತಾರೆ. [ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ತಾರೆಯರ ನಡಿಗೆ]

ಹಾಗೆ, ಚಪ್ಪಲಿ-ಶೂಗಳ ಬಗ್ಗೆ ಸಿಕ್ಕಾಪಟ್ಟೆ 'ಕ್ರೇಜ್' ಇರುವ ನಟಿಯೊಬ್ಬರನ್ನು ಇವತ್ತು ಪರಿಚಯ ಮಾಡಿಕೊಡ್ತಿದ್ದೀವಿ.....

ಆ ನಟಿ ಇವರೇ..!

ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಟಿ ಸೋನಲ್ ಚೌಹಾಣ್ ರವರಿಗೆ ಚಪ್ಪಲಿ-ಶೂಗಳಂದ್ರೆ ಪಂಚ ಪ್ರಾಣ.! [ಸೋನಂ ಕಪೂರ್ ಡ್ರೆಸ್ ಮೇಲೆ ಕತ್ರೀನಾ ಕಣ್ಣು]

ಇವರ ಬಳಿ ಇರುವ ಶೂಗಳ ಸಂಖ್ಯೆ ಎಷ್ಟು.?

ಒಮ್ಮೆ ಈ ಫೋಟೋ ನೋಡಿ....ಸೋನಲ್ ಚೌಹಾಣ್ ಬಳಿ ಇರುವ ಚಪ್ಪಲಿ-ಶೂಗಳ ರಾಶಿ ನೋಡಿದ್ರೆ ಒಂದು ಅಂಗಡಿನೇ ಇಡಬಹುದು.! [ಬಿಚ್ಚು ಮನಸಿನ ದಿಟ್ಟ ಚೆಲುವೆ ಸೋನಲ್]

ವೆರೈಟಿ ಹೆಚ್ಚು.!

ಸೋನಲ್ ಚೌಹಾಣ್ ಬಳಿ ತರಹೇವಾರಿ ಶೂ, ಸ್ಯಾಂಡಲ್, ಸ್ನೀಕರ್ಸ್ ಇವೆ.

ಎಲ್ಲೇ ಹೋದರೂ ಹುಡುಕಿ ತರುತ್ತಾರಂತೆ.!

''ನನಗೆ ಶೂ, ಚಪ್ಪಲಿಗಳೆಂದರೆ ಬಹಳ ಇಷ್ಟ. ಎಲ್ಲೇ ಹೋದರೂ ತಪ್ಪದೆ ಖರೀದಿ ಮಾಡುತ್ತೇನೆ. ಇತ್ತೀಚೆಗಷ್ಟೇ ಲಂಡನ್ ಗೆ ಹೋಗಿದ್ದಾಗ ಎಲ್.ಇ.ಡಿ ಶೂ ಖರೀದಿಸಿದೆ'' ಎನ್ನುತ್ತಾರೆ ನಟಿ ಸೋನಲ್ ಚೌಹಾಣ್

ಕನ್ನಡ ಚಿತ್ರರಂಗದ ನಂಟು

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಚೆಲುವೆಯೇ ನಿನ್ನ ನೋಡಲು' ಚಿತ್ರದಲ್ಲಿ ಸೋನಲ್ ಚೌಹಾಣ್ ನಟಿಸಿದ್ದರು. [ಚಿತ್ರ ವಿಮರ್ಶೆ: ಚೆಲುವೆಯೇ ನಿನ್ನೇ ನೋಡಲು]

English summary
Actress Sonal Chauhan is obsessed with Heel-shoes, sneakers. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada