For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಸ್ಮಾರಕ ಸ್ಥಳಾಂತರ ಗುಲ್ಲು; ಅಭಿಮಾನಿಗಳ ಬೃಹತ್ ಪ್ರತಿಭಟನೆ

  By Harshitha
  |

  'ಸಾಹಸಸಿಂಹ' ಡಾ.ವಿಷ್ಣುವರ್ಧನ್ ಕಣ್ಮರೆಯಾಗಿ ಆರೂವರೆ ವರ್ಷಗಳಾದರೂ, ಅವರ ಸ್ಮಾರಕದ ಸುತ್ತ ಎದ್ದಿರುವ ವಿವಾದ ಇನ್ನೂ ಬಗೆಹರಿದಿಲ್ಲ.

  ಈ ಮಧ್ಯೆ ಡಾ.ವಿಷ್ಣು ಸ್ಮಾರಕ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಿಂದ ಮೈಸೂರಿಗೆ ಶಿಫ್ಟ್ ಆಗಲಿದೆ ಎಂಬ ಗುಲ್ಲು ಹೇಗೆ ಹಬ್ಬಿತೋ ಗೊತ್ತಿಲ್ಲ, ಸ್ಮಾರಕ ಸ್ಥಳಾಂತರ ವಿರೋಧಿಸಿ ವಿಷ್ಣು ಸೇನಾ ಸಮಿತಿ ಕಳೆದ ಶನಿವಾರ ಬೃಹತ್ ಪ್ರತಿಭಟನೆ ಕೈಗೊಂಡಿತು.

  ವಿಷ್ಣು ಸೇನಾ ಸಮಿತಿ ಜೊತೆಗೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶನಿವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಬಳಿ ಸರ್ಕಾರದ ವಿರುದ್ಧ ಘೋಷವಾಕ್ಯ ಕೂಗಿದರು. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ಯಾವುದೇ ಕಾರಣಕ್ಕೂ, ಸ್ಮಾರಕ ಸ್ಥಳಾಂತರಕ್ಕೆ ಭಾರತಿ ವಿಷ್ಣುವರ್ಧನ್ ಒಪ್ಪಬಾರದು ಅಂತ ವಿಷ್ಣು ಅಭಿಮಾನಿಗಳು ಒತ್ತಾಯಿಸಿದರು. ಅಪ್ಪಿ-ತಪ್ಪಿ ಶಿಫ್ಟ್ ಆದರೆ, ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

  ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ಆದ ಪ್ರತಿಭಟನಾಕಾರರು, ವಿಷ್ಣು ಸ್ಮಾರಕ ಸ್ಥಳಾಂತರ ಮಾಡದಂತೆ ಮನವಿ ಮಾಡಿದರು. [ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಷ್ಣು ಅಭಿಮಾನಿಗಳ ಪತ್ರ]

  ''ಮೊದಲು ಭಾರತಿ ವಿಷ್ಣುವರ್ಧನ್ ರವರನ್ನು ಒಪ್ಪಿಸಿ, ಅವರು ಒಪ್ಪಿದರೆ ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಾಣವಾಗಲಿದೆ'' ಎಂಬ ಭರವಸೆ ನೀಡಿದ್ದಾರಂತೆ ಸಿ.ಎಂ. ಸಿದ್ಧರಾಮಯ್ಯ.

  English summary
  Vishnu Sena Samithi along with hundreds of fans protested in front of Town Hall, Bengaluru against the shift of Dr.Vishnuvardhan memorial from Abhiman Studio, Bengaluru to Mysore (Mysuru).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X