For Quick Alerts
  ALLOW NOTIFICATIONS  
  For Daily Alerts

  ಹಲವಾರು ತೆಲುಗು ವೇದಿಕೆಯಲ್ಲಿ ಡಾ.ರಾಜ್ ಬಗ್ಗೆ ಎಸ್ಪಿಬಿ ತೋರಿದ್ದ ಧನ್ಯತಾಭಾವ ಹೀಗಿತ್ತು!

  |

  ಕೆಲವೊಂದು ಅಪರೂಪದ/ಅನುಭವದ ಮಾತುಗಳು ಸಾಧಕರ ಬಾಯಿಯಿಂದ ಮಾತ್ರ ಬರಲು ಸಾಧ್ಯ ಎನ್ನುವುದಕ್ಕೆ, ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಆಡಿದ ಮಾತು ಸಾಕ್ಷಿಯಾಗಬಲ್ಲದು.

  ಲವ್ ಇಲ್ಲ ಅಂದ್ರೆ ನಮ್ ಹುಡುಗ್ರು ಬಿಡಬೇಕಲ್ಲ ಅಂದ್ರು ಧನ್ವೀರ್ | Filmibeat Kannada

  ನಟನೆಯಲ್ಲಿ ರಾಜ್ ಎಷ್ಟು ಪ್ರಬುದ್ದತೆಯನ್ನು ಹೊಂದಿದ್ದರೋ ಹಾಡಿನಲ್ಲೂ ಅಷ್ಟೇ ಕೂಡಾ ಎನ್ನುವುದನ್ನು ವಿವರಿಸಬೇಕಾಗಿಲ್ಲ. ಆದರೆ, ಇಡೀ ದೇಶವೇ ಒಪ್ಪಿಕೊಳ್ಳುವ/ಮೆಚ್ಚಿಕೊಳ್ಳುವ ಆಲ್ ಟೈಂ ಗ್ರೇಟ್ ಸಿಂಗರ್ ಗಳಲ್ಲಿ ಎಸ್ಪಿಬಿ ಕೂಡಾ ಒಬ್ಬರು.

  ಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರಅಪ್ಪನ ಆರೋಗ್ಯದಲ್ಲಿ ಚೇತರಿಕೆಯಿಲ್ಲ: ಕಣ್ಣೀರಿಟ್ಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಪುತ್ರ

  ಎಲ್ಲಾ ಭಾಷೆಯಲ್ಲಿ ನಾನು ಹಾಡಿದ್ದರೂ, ಕನ್ನಡಿಗರು ತೋರಿಸುವ ಪ್ರೀತಿಗೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕನ್ನಡೇತರ ವೇದಿಕೆಯಲ್ಲಿ ಹೇಳಿದ್ದ ಬಾಲು ಸರ್, ಅವರ ಚಿತ್ರವೊಂದಕ್ಕೆ ಡಾ.ರಾಜ್ ಹಾಡಿದ್ದರು.

  ಶಶಿಕುಮಾರ್ ಪ್ರಮುಖ ಭೂಮಿಕೆಯಲ್ಲಿದ್ದ, ಸಾಯಿ ಪ್ರಕಾಶ್ ನಿರ್ದೇಶನದ 'ಮುದ್ದಿನ ಮಾವ' ಸಿನಿಮಾದಲ್ಲಿ, ಎಸ್ಪಿಬಿ ಮಾವನ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಹಾಡೊಂದನ್ನು ಎಸ್ಪಿ ಬಾಲಸುಬ್ರಮಣ್ಯಂಗಾಗಿ ರಾಜ್ ಹಾಡಿದ್ದರು. ಇದನ್ನು, ಹಲವು ತೆಲುಗು ವೇದಿಕೆಯಲ್ಲಿ ಹತ್ತಾರು ಬಾರಿ ಎಸ್ಪಿಬಿ ನೆನಪಿಸಿಕೊಂಡಿದ್ದು ಹೀಗೆ:

  'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ'ಎಸ್‌ಪಿಬಿ ಬೇಗ ಹಾಡುವಂತಾಗಲಿ....' ಮಂಗಳಮುಖಿಯರು ಪ್ರಾರ್ಥನೆ

  ಶಶಿಕುಮಾರ್,ಎಸ್.ಪಿ.ಬಿ ಪ್ರಮುಖ ಭೂಮಿಕೆಯ ಮುದ್ದಿನ ಮಾವ ಚಿತ್ರ

  ಶಶಿಕುಮಾರ್,ಎಸ್.ಪಿ.ಬಿ ಪ್ರಮುಖ ಭೂಮಿಕೆಯ ಮುದ್ದಿನ ಮಾವ ಚಿತ್ರ

  1993ರಲ್ಲಿ ಶಶಿಕುಮಾರ್, ಶೃತಿ, ಎಸ್.ಪಿ.ಬಾಲಸುಬ್ರಮಣ್ಯಂ ಪ್ರಮುಖ ಭೂಮಿಕೆಯಲ್ಲಿದ್ದ 'ಮುದ್ದಿನ ಮಾವ' ಚಿತ್ರ ಬಿಡುಗಡೆಯಾಯಿತು. ಇದು, ತಮಿಳಿನ 'ನಾನ್ ಪುಡಿಚ್ಚಾ ಮಾಪಿಳೈ' ಚಿತ್ರದ ರಿಮೇಕ್. ಚಿತ್ರದಲ್ಲಿ ಮಾವನ ಪಾತ್ರದಲ್ಲಿ ಎಸ್ಪಿಬಿ ಅಭಿನಯಿಸಿದ್ದರು. ಎಸ್ಪಿಬಿ ಪಾತ್ರದ ಎರಡು ಹಾಡನ್ನು ಡಾ.ರಾಜ್ ಹಾಡಿದ್ದರು.

  ಹೀರೋ ಶಶಿಕುಮಾರ್ ಒಪ್ಪಿಕೊಂಡಿರಲಿಲ್ಲ

  ಹೀರೋ ಶಶಿಕುಮಾರ್ ಒಪ್ಪಿಕೊಂಡಿರಲಿಲ್ಲ

  ಈ ಬಗ್ಗೆ ಹಲವಾರು ಬಾರಿ ಎಸ್ಪಿಬಿ ತನ್ನ ಅನುಭವವನ್ನು ಹಂಚಿಕೊಂಡಿದ್ದರು. "ಮುದ್ದಿನ ಮಾವ ಸಿನಿಮಾದಲ್ಲಿ ಮಾವನ ಪಾತ್ರದಲ್ಲಿ ನಟಿಸಿದ್ದೆ. ಆ ಚಿತ್ರಕ್ಕೆ ಸಂಗೀತವನ್ನು ನಾನೇ ನೀಡಿದ್ದೆ. ಹೀರೋ ಪಾತ್ರಕ್ಕೂ ನಾನು ಹಾಡುವುದು, ನನ್ನ ಪಾತ್ರಕ್ಕೂ ನಾನೇ ಹಾಡುವುದು ಬೇಡವೆಂದು ನಿರ್ದೇಶಕರ ಬಳಿ ಹೇಳಿದ್ದೆ. ಅದಕ್ಕೆ ಎಲ್ಲರು ಒಪ್ಪಿಕೊಂಡರೂ, ಆದರೆ, ಹೀರೋ ಶಶಿಕುಮಾರ್ ಒಪ್ಪಿಕೊಂಡಿರಲಿಲ್ಲ" - ಎಸ್ಪಿಬಿ.

  ಧನ್ಯತಾಭಾವ ಮೆರೆದಿದ್ದ ಎಸ್ಪಿಬಿ

  ಧನ್ಯತಾಭಾವ ಮೆರೆದಿದ್ದ ಎಸ್ಪಿಬಿ

  "ನನ್ನ ಪಾತ್ರಕ್ಕೆ ಬಾಲು ಸರ್ ಬಿಟ್ಟು ಇನ್ನೊಬ್ಬರು ಹಾಡಲು ನನ್ನ ಒಪ್ಪಿಗೆಯಿಲ್ಲ ಎಂದು ಶಶಿಕುಮಾರ್ ಹಠ ಹಿಡಿದರು. ಇದು, ನಿರ್ಮಾಪಕರು ಮತ್ತು ಹೀರೋ ನಡುವೆ ಸಣ್ಣ ಮನಸ್ತಾಪಕ್ಕೆ ಕಾರಣವಾಯಿತು. ಕೊನೆಗೆ, ಹೀರೋ ಹಾಡನ್ನು ನಾನೇ ಹಾಡುತ್ತೇನೆ. ನನ್ನ ಪಾತ್ರದ ಹಾಡನ್ನು ಬೇರೊಬ್ಬರಿಂದ ಹಾಡಿಸಿ ಎಂದು ನಾನು ಹೇಳಿದೆ. ಅದಕ್ಕೆ ಚಿತ್ರತಂಡ ಒಪ್ಪಿಕೊಂಡಿತು" - ಎಸ್ಪಿಬಿ.

  ರಾಜ್ ಕುಮಾರ್ ಅವರಿಂದ ಹಾಡಿಸಲು ಪ್ರಯತ್ನಿಸೋಣ

  ರಾಜ್ ಕುಮಾರ್ ಅವರಿಂದ ಹಾಡಿಸಲು ಪ್ರಯತ್ನಿಸೋಣ

  "ಆದರೆ ನನ್ನ ಪಾತ್ರದ ಹಾಡನ್ನು ಹಾಡುವುದು ಯಾರು ಎನ್ನುವ ಪ್ರಶ್ನೆ ಎದುರಾದಾಗ ರಾಜ್ ಕುಮಾರ್ ಅವರಿಂದ ಹಾಡಿಸಲು ಪ್ರಯತ್ನಿಸೋಣ. ನಾನೇ ಅವರಲ್ಲಿ ಮಾತನಾಡುತ್ತೇನೆ ಎಂದು ಹೇಳಿ, ಅವರಲ್ಲಿ ವಿನಂತಿಸಿಕೊಂಡೆ. ನಿಮ್ಮ ಪಾತ್ರಕ್ಕೆ ನಾನು ಹಾಡುವುದೇ, ನಿಮ್ಮಂತಹ ಗಾಯಕರಿಗೆ ಸರಿಸಾಟಿ ನಾನು ಆಗಲಾರೆ ಎಂದು ಅಣ್ಣಾವ್ರು ಹೇಳಿದ್ರು. ಹೇಗೋ ಅವರನ್ನು ಒಪ್ಪಿಸಿದೆ" - ಎಸ್ಪಿಬಿ.

  ಆ ಹಾಡೇ ದೀಪಾವಳಿ..ದೀಪಾವಳಿ..

  ಆ ಹಾಡೇ ದೀಪಾವಳಿ..ದೀಪಾವಳಿ..

  ಆ ಹಾಡೇ ದೀಪಾವಳಿ..ದೀಪಾವಳಿ.., ಇಷ್ಟಕ್ಕೂ ಮುಗಿದಿಲ್ಲ. ನನಗೆ ಫೋನ್ ಮಾಡಿ, ನಿಮ್ಮಷ್ಟು ಹಾಡಲು ನನಗೆ ಸಾಧ್ಯವಾಗಿಲ್ಲ. ನನ್ನಿಂದ ತಪ್ಪಾಗಿದ್ದರೆ ಮನ್ನಿಸಿ ಎಂದು ನನ್ನಲ್ಲಿ ಹೇಳಿದ್ದರು. ನನಗೆ ಮಾತೇ ಹೊರಡಲಿಲ್ಲ. ಈ ಎಲ್ಲಾ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆಂದರೆ, ಅವರಲ್ಲಿದ್ದ ಸೌಜನ್ಯತೆ, ಡೌನ್ ಟು ಅರ್ಥ್ ಕ್ಯಾರೆಕ್ಟರ್"ಎಂದು ಎಸ್.ಪಿ.ಬಾಲಸುಬ್ರಮಣ್ಯಂ ಹಲವು ವೇದಿಕೆಯಲ್ಲಿ ಹೇಳಿದ್ದರು.

  English summary
  In Several Platform SP Balasubramanyam Recalling Incident Dr.Rajkumar Sung For His Movie,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X