For Quick Alerts
  ALLOW NOTIFICATIONS  
  For Daily Alerts

  ಫಿಲಂಫೇರ್ ಕೃಷ್ಣ ಸುಂದರಿ ಕಡೆದ ಶಿಲ್ಪಿ ಯಾರು?

  By Rajendra
  |

  ಐಡಿಯಾ ಫಿಲಂಫೇರ್ ಅವಾರ್ಡ್ಸ್ 2013 (South) ಪ್ರಶಸ್ತಿಗಳಿಗೆ ವೇದಿಕೆ ಸಜ್ಜಾಗಿದೆ. ಹೈದರಾಬಾದಿನ ಇಂಟರ್ ನ್ಯಾಶನಲ್ ಕನ್ವೆಂಷನ್ ಸೆಂಟರ್ ನಲ್ಲಿ ಜುಲೈ 20, 2013ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷ ದರ್ಶನ್ ಅಭಿನಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಎಪಿ ಅರ್ಜುನ್ ಅವರ ಅದ್ದೂರಿ, ಯೋಗರಾಜ್ ಭಟ್ಟರ 'ಡ್ರಾಮಾ' ಚಿತ್ರಗಳು ಪ್ರಶಸ್ತಿ ಪಟ್ಟಿಯಲ್ಲಿವೆ.

  ಈ ಮೇಲಿನ ಮೂರು ಚಿತ್ರಗಳು ಒಂದಲ್ಲಾ ಒಂದು ವಿಭಾಗದಲ್ಲಿ ನಾಮಿನೇಟ್ ಆಗಿರುವುದು ವಿಶೇಷ. ಈ ಬಾರಿ ಯಾವ ವಿಭಾಗದಲ್ಲಿ ಯಾವ ಚಿತ್ರ ನಾಮಿನೇಟ್ ಆಗಿದೆ ಎಂಬುದನ್ನು ಇಲ್ಲಿ ನೋಡಿ. ಅದಕ್ಕೂ ಮುನ್ನ ಫಿಲಂಫೇರ್ ಪ್ರಶಸ್ತಿ ಬಗ್ಗೆ ಒಂದಷ್ಟು ಮಾಹಿತಿ.

  ಪ್ರತಿ ಈ ವರ್ಷ ಈ ಚಲನಚಿತ್ರ ಪ್ರಶಸ್ತಿಗಳನ್ನು ದಿ ಟೈಂಸ್ ಗ್ರೂಪ್ ವಿತರಿಸುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜನಮತ ಸಂಗ್ರಹ ಹಾಗೂ ಪರಿಣಿತರ ಸಮಿತಿ ಸದಸ್ಯರು ಪ್ರಶಸ್ತಿಗೆ ಅರ್ಹರಾದ ಕಲಾವಿದರು ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡುತ್ತಾರೆ.

  ಭಾರತೀಯ ಚಿತ್ರೋದ್ಯಮದಲ್ಲಿ ಫಿಲಂಫೇರ್ ಪ್ರಶಸ್ತಿಗಳನ್ನು ಆಸ್ಕರ್ ಪ್ರಶಸ್ತಿಗೆ ಸಮಾನವೆಂದೇ ಪರಿಗಣಿಸಲಾಗುತ್ತದೆ. ಇನ್ನು ಪ್ರಶಸ್ತಿಗಾಗಿ ನೀಡುವ "ಬ್ಲ್ಯಾಕ್ ಲೇಡಿ" ಕಂಚಿನ ಪ್ರತಿಮೆ 46.5 ಸೆಂ.ಮೀ ಎತ್ತರ ಹಾಗೂ ಸರಿಸುಮಾರು 5 ಕೆ.ಜಿ ತೂಕವಿರುತ್ತದೆ.

  ಈ ಕೃಷ್ಣ ಸುಂದರಿಯನ್ನು ಟೈಂಸ್ ಗ್ರೂಪ್ ನ ಕಲಾ ನಿರ್ದೇಶಕ ವಾಲ್ಟರ್ ಲಾಂಘಮ್ಮರ್ ಅವರ ಮೇಲ್ವಿಚಾರಣೆಯಲ್ಲಿ ಎನ್.ಜಿ.ಫಾನ್ಸಾರೆ ವಿನ್ಯಾಸ ಮಾಡಿದರು. ಹತ್ತು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

  ಇದುವರೆಗೂ ಈ ಪ್ರಶಸ್ತಿಯನ್ನು ಕಮಲ್ ಹಾಸನ್ 17 ಸಲ ಪಡೆದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರಿಗೆ 8 ಸಲ ಫಿಲಂಫೇರ್ ಕೃಷ್ಣ ಸುಂದರಿ ಒಲಿದಿದ್ದಾಳೆ. ಇನ್ನು ಲಕ್ಷ್ಮಿ, ಸರಿತಾ, ಸುಹಾಸಿನಿ ಹಾಗೂ ರೇವತಿ ಅವರಿಗೆ ತಲಾ ಆರು ಬಾರಿ ಪ್ರಶಸ್ತಿ ಬಂದಿದೆ. (ಒನ್ಇಂಡಿಯಾ ಕನ್ನಡ)

  English summary
  The Filmfare Awards have been often referred to as Indian film industry's equivalent to the Oscars. "The Black Lady" Originally designed by N.G. Phansare under the supervision of Times of India's art director Walter Langhammer, it is generally made of bronze, its height is 46.5 cm and it weighs around 5 kg.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X