For Quick Alerts
ALLOW NOTIFICATIONS  
For Daily Alerts

ವಿವಾದಾತ್ಮಕ ನಟಿ ಮೈತ್ರಿಯಾ ಹೊಸ ಚಿತ್ರದಲ್ಲಿ ಡಿ.ಕೆ.ರವಿ ಕಥೆ?

By Harshitha
|

ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಪ್ರಕರಣ ಕೊಂಚ ತಣ್ಣಗಾಗಿರುವ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಡಿ.ಕೆ.ರವಿ ಸದ್ದು ಕೇಳಿ ಬರುತ್ತಿದೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ವರದಿ ಮಾಡಿದಂತೆ 'ಡಿ.ಕೆ.ರವಿ' ಟೈಟಲ್ ರಿಜಿಸ್ಟರ್ ಮಾಡಿಸುವುದಕ್ಕಾಗಿ ನಿರ್ಮಾಪಕರು ನಾ ಮುಂದು ತಾ ಮುಂದು ಅಂತ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.

ಡಿ.ಕೆ.ರವಿ ಕುಟುಂಬದವರು NOC ಕೊಡುವವರೆಗೂ ಟೈಟಲ್ ನೀಡುವುದಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟಪಡಿಸಿತ್ತು. ಡಿ.ಕೆ.ರವಿ ಅವರ ನಿಗೂಢ ಸಾವಿನ ಕುರಿತು ಅದೆಷ್ಟು ಮಂದಿ ಸಿನಿಮಾ ಮಾಡುವುದಕ್ಕೆ ಕಥೆ ರಚಿಸುತ್ತಿದ್ದಾರೋ, ಗೊತ್ತಿಲ್ಲ. [ಡಿ.ಕೆ.ರವಿ ರಿಯಲ್ ಲೈಫ್ ಸ್ಟೋರಿ ಇದೇನಾ?]

ಆದ್ರೆ, ಕಾಂಟ್ರೋವರ್ಶಿಯಲ್ ಬೆಡಗಿ ಮೈತ್ರಿಯಾ ಗೌಡ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಕಥೆ ಇದೆ ಎನ್ನಲಾಗಿದೆ. ಇದು ರೀಲ್ ಸುದ್ದಿಯೋ ಅಥವಾ ರಿಯಲ್ ಸುದ್ದಿಯೋ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಅಕ್ಷತೆ' ಚಿತ್ರದಲ್ಲಿ ನಟಿ ಮೈತ್ರಿಯಾ ಗೌಡ

'ಅಕ್ಷತೆ' ಚಿತ್ರದಲ್ಲಿ ನಟಿ ಮೈತ್ರಿಯಾ ಗೌಡ

''ಕೇಂದ್ರ ಸಚಿವ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ನನ್ನ ಗಂಡ'' ಅಂತ್ಹೇಳಿ ದೊಡ್ಡ ಸುದ್ದಿ ಮಾಡಿದ್ದ ನಟಿ ಮೈತ್ರಿಯಾ ಗೌಡ ಈಗ ಗಾಂಧಿನಗರದಲ್ಲಿ ಬಿಜಿಯಾಗಿದ್ದಾರೆ. 'Love on NH4' ಚಿತ್ರದ ನಂತ್ರ ನಟಿ ಮೈತ್ರಿಯಾ ಹೊಸ ಚಿತ್ರವನ್ನ ಒಪ್ಪಿಕೊಂಡಿದ್ದಾರೆ. ಅದೇ 'ಅಕ್ಷತೆ'.

'ಅಕ್ಷತೆ' ಚಿತ್ರದಲ್ಲಿ ಡಿ.ಕೆ.ರವಿ ರಿಯಲ್ ಕಥೆ?

'ಅಕ್ಷತೆ' ಚಿತ್ರದಲ್ಲಿ ಡಿ.ಕೆ.ರವಿ ರಿಯಲ್ ಕಥೆ?

ನಾಯಕ-ನಾಯಕಿಯ ಪಾತ್ರಗಳ ಜೊತೆಗೆ ಪ್ರಾಮಾಣಿಕ ಐಎಎಸ್ ಅಧಿಕಾರಿಯ ಪಾತ್ರಕ್ಕೂ 'ಅಕ್ಷತೆ' ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಬಡತನದ ಕುಟುಂಬದಲ್ಲಿ ಹುಟ್ಟಿ-ಬೆಳೆದು ಐಎಎಸ್ ಅಧಿಕಾರಿಯಾಗಿ, ಮೈನಿಂಗ್ ವಿರುದ್ಧ ಸಮರ ಸಾರಿ, ನಂತರ ನಿಗೂಢವಾಗಿ ಕಣ್ಮರೆ ಆಗುವ ಅಂಶ 'ಅಕ್ಷತೆ' ಚಿತ್ರದಲ್ಲಿದೆ. ಅಲ್ಲಿಗೆ, ಇದು ಡಿ.ಕೆ.ರವಿ ಅವರ ನಿಜ ಬದುಕಿನ ಕಥೆ ಅನ್ನುತ್ತಿದೆ ಗಾಂಧಿನಗರ. [ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು]

ನಿರ್ದೇಶಕ ರಾಜು ಹೇಳುವುದೇನು?

ನಿರ್ದೇಶಕ ರಾಜು ಹೇಳುವುದೇನು?

''ಚಿತ್ರದಲ್ಲಿ ಐಎಎಸ್ ಅಧಿಕಾರಿ ಪಾತ್ರ ಇರುವುದು ನಿಜ. ಕಷ್ಟದಿಂದ ಬೆಳೆದು ಐಎಎಸ್ ಆಫೀಸರ್ ಆಗ್ತಾರೆ. ನಂತರ ಭ್ರಷ್ಟಾಚಾರಕ್ಕೆ ಸಿಲುಕಿ ಕಣ್ಮರೆ ಆಗುವ ಕಥೆ ನಮ್ಮ ಚಿತ್ರದಲ್ಲಿದೆ. ಆದ್ರೆ, ಅದು ಡಿ.ಕೆ.ರವಿ ಅವರ ನಿಜ ಜೀವನದ ಆಧಾರಿತ ಅಲ್ಲ. ಅವರ ಬದುಕಿಗೂ ನಮ್ಮ ಸಿನಿಮಾಗೂ ಸಂಬಂಧ ಇಲ್ಲ. ಇಲ್ಲಿ ಯಾವುದೇ ವಿವಾದ ಇಲ್ಲ'' ಅಂತ 'ಅಕ್ಷತೆ' ಚಿತ್ರದ ನಿರ್ದೇಶಕ ರಾಜು 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟಪಡಿಸಿದ್ದಾರೆ.

ಮದುವೆ ಸುತ್ತ ನಡೆಯುವ ಕಥೆ 'ಅಕ್ಷತೆ'

ಮದುವೆ ಸುತ್ತ ನಡೆಯುವ ಕಥೆ 'ಅಕ್ಷತೆ'

ಪ್ರೇಮಿಗಳು ಮದುವೆಯಾಗುವಾಗ ಎದುರಾಗುವ ತೊಂದರೆಗಳ ಸುತ್ತ ನಡೆಯುವ ಕಥೆ ಈ 'ಅಕ್ಷತೆ'. ಪ್ರಮುಖ ತಾರಾಗಣದಲ್ಲಿ ನಟಿ ಮೈತ್ರಿಯಾ ಗೌಡ, 'ಯುವ' ಖ್ಯಾತಿಯ ಕಾರ್ತಿಕ್ ಶೆಟ್ಟಿ, 'ಸಂಚಾರಿ' ಖ್ಯಾತಿಯ ರಾಜ್ ಮುಂತಾದವರು ಇದ್ದಾರೆ.

ಹೊಸಬರ ಹೊಸ ಪ್ರಯತ್ನ

ಹೊಸಬರ ಹೊಸ ಪ್ರಯತ್ನ

'ಜಟಾಯು' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ರಾಜು, 'ಅಕ್ಷತೆ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮೈತ್ರಿಯಾ ಗೌಡ ನಟಿಸಿರುವ 'Love on NH4' ಚಿತ್ರದ ನಿರ್ಮಾಪಕರಾದ ಸಂಜೀವ್ ಶೆಟ್ಟಿ ಮತ್ತು ಎಸ್.ವೆಂಕಟೇಶ್ ಈ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ.

English summary
Kannada Actress Mythriya Gowda is roped into play lead in the movie 'Akshathe'. According to the sources, 'Akshathe' plot is based on an IAS Officer, who comes from poor background and later goes missing due to Mining Mafia. Hence, moviegoers are predicting that 'Akshathe' is based on D.K.Ravi life story.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more