For Quick Alerts
  ALLOW NOTIFICATIONS  
  For Daily Alerts

  ಡಿ.ಕೆ.ರವಿ ರಿಯಲ್ ಲೈಫ್ ಸ್ಟೋರಿ ಇದೇನಾ?

  By ಹರಾ
  |

  ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಪ್ರಕರಣ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇಡೀ ವಿಧಾನಸೌಧವನ್ನೇ ಅಲುಗಾಡಿಸುತ್ತಿರುವ ಈ ಪ್ರಕರಣ ಸ್ಯಾಂಡಲ್ ವುಡ್ ನಲ್ಲಂತೂ ಹಾಟ್ ಟಾಪಿಕ್ ಆಗಿದೆ.

  ಒಂದ್ಕಡೆ, ದಕ್ಷ ಅಧಿಕಾರಿ ಡಿ.ಕೆ.ರವಿ ಸಾವು ಪ್ರಕರಣ ಸಿಬಿಐಗೆ ವಹಿಸಬೇಕು ಅನ್ನುವ ಕೂಗು ಹೆಚ್ಚಾಗುತ್ತಿದೆ. ಆದ್ರೆ, ಗಾಂಧಿನಗರದಲ್ಲಿ ಮಾತ್ರ ಡಿ.ಕೆ.ರವಿ ಲೈಫ್ ಸ್ಟೋರಿಯನ್ನಿಟ್ಟುಕೊಂಡು ಸಿನಿಮಾ ಮಾಡೋಕೆ ಸಜ್ಜಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.

  ನಿನ್ನೆಯಷ್ಟೇ 'ಡಿ.ಕೆ.ರವಿ' ಟೈಟಲ್ ರಿಜಿಸ್ಟರ್ ಮಾಡಿಸುವುದಕ್ಕೆ ಅನೇಕ ನಿರ್ಮಾಪಕರುಗಳು ಕ್ಯೂ ನಿಂತಿದ್ದರು. ಆದ್ರೀಗ, ವಾಣಿಜ್ಯ ಮಂಡಳಿ ಅಡ್ಡದಿಂದ ಬಂದಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಪ್ರಾಮಾಣಿಕ ಅಧಿಕಾರಿಯ ಕಥೆ ಹೊತ್ತಿರುವ ಚಿತ್ರವೊಂದು ಏಪ್ರಿಲ್ ನಲ್ಲಿ ಸೆಟ್ಟೇರಲಿದೆ. ಮುಂದೆ ಓದಿ.....

  ಬೆಳ್ಳಿತೆರೆ ಮೇಲೆ 'ಡಿ.ಕೆ.ರವಿ' ಲೈಫ್ ಸ್ಟೋರಿ..?

  ಬೆಳ್ಳಿತೆರೆ ಮೇಲೆ 'ಡಿ.ಕೆ.ರವಿ' ಲೈಫ್ ಸ್ಟೋರಿ..?

  ಭೂ ಮಾಫಿಯಾ, ಮರಳು ದಂಧೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ನಿಗೂಢವಾಗಿ ಸಾವನ್ನಪ್ಪಿರುವ ಡಿ.ಕೆ.ರವಿ ಯಶೋಗಾಥೆ ಇದೀಗ ಅನೇಕ ನಿರ್ಮಾಪಕರುಗಳ ಅಚ್ಚುಮೆಚ್ಚಿನ ಕಥೆಯಾಗಿದೆ. ಡಿ.ಕೆ.ರವಿ ನಿಜ ಬದುಕನ್ನ ತೆರೆಮೇಲೆ ತರುವುದಕ್ಕೆ ಪ್ರೊಡ್ಯೂಸರ್ಸ್ ನಾ ಮುಂದು, ತಾ ಮುಂದು ಅಂತ ಮುಗಿಬೀಳ್ತಿದ್ದಾರೆ. ಇದೇ ಗ್ಯಾಪ್ ನಲ್ಲಿ 'ಸರ್ಕಾರಿ ಕೆಲಸ ದೇವರ ಕೆಲಸ' ಅನ್ನುವ ಸಿನಿಮಾ ಅನೌನ್ಸ್ ಆಗಿದೆ. [ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು]

  'ಸರ್ಕಾರಿ ಕೆಲಸ ದೇವರ ಕೆಲಸ'

  'ಸರ್ಕಾರಿ ಕೆಲಸ ದೇವರ ಕೆಲಸ'

  'ಡಿ.ಕೆ.ರವಿ' ಟೈಟಲ್ ಪಡೆದುಕೊಳ್ಳುವುದಕ್ಕೆ ಅನೇಕ ನಿರ್ಮಾಪಕರುಗಳು ಒದ್ದಾಡುತ್ತಿರುವಾಗಲೇ, 'ಸರ್ಕಾರಿ ಕೆಲಸ ದೇವರ ಕೆಲಸ' ಅನ್ನುವ ಸಿನಿಮಾ ಅನೌನ್ಸ್ ಆಗಿದೆ. ಸಾಲದಕ್ಕೆ 'ಎಲ್ರೂ ---- ನನ್ ಮಕ್ಳು' ಅಂತ ಕ್ಯಾಪ್ಷನ್ ಕೂಡ ಚಿತ್ರಕ್ಕಿದೆ. ಖಡಕ್ ಆಫೀಸರ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸುತ್ತಿದ್ದಾರೆ.

  ಡಿ.ಕೆ.ರವಿ ಪಾತ್ರದಲ್ಲಿ ರವಿಶಂಕರ್ ಗೌಡ?

  ಡಿ.ಕೆ.ರವಿ ಪಾತ್ರದಲ್ಲಿ ರವಿಶಂಕರ್ ಗೌಡ?

  ಹುರಿಗಟ್ಟಿದ ಮೀಸೆ, ಕಪ್ಪು ಕನ್ನಡಕ ಧರಿಸಿ ಥೇಟ್ ಡಿ.ಕೆ.ರವಿಯಂತೆ ರವಿಶಂಕರ್ ಗೌಡ ಪೋಸ್ ಕೊಟ್ಟಿರುವುದರಿಂದ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರದ ಬಗ್ಗೆ ಆಗಲೇ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ.

  ರವಿಶಂಕರ್ ಗೌಡ ಹೇಳುವುದೇನು?

  ರವಿಶಂಕರ್ ಗೌಡ ಹೇಳುವುದೇನು?

  ''ಸರ್ಕಾರಿ ಕೆಲಸ ದೇವರ ಕೆಲಸ' ಒಂದೊಳ್ಳೆ ಸಿನಿಮಾ. ಭ್ರಷ್ಟರ ವಿರುದ್ಧ ಸಮರ ಸಾರುವ ಸಿನಿಮಾ. ನಾನು ಖಡಕ್ ಆಫೀಸರ್ ರೋಲ್ ಪ್ಲೇ ಮಾಡುತ್ತಿದ್ದೇನೆ. ನಿಷ್ಠಾವಂತ ಅಧಿಕಾರಿಯ ಸುತ್ತ ನಡೆಯುವ ಕಥೆ ಚಿತ್ರದ ಹೂರಣ. ಇಷ್ಟು ಬಿಟ್ಟು ಬಾಕಿ ಏನನ್ನೂ ಬಹಿರಂಗಪಡಿಸುವ ಹಾಗಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಟ ರವಿಶಂಕರ್ ಗೌಡ ಹೇಳಿದರು.

  ಚಿತ್ರಕ್ಕೆ ಅಶ್ವಿನಿ ರಾಮ್ ಪ್ರಸಾದ್ ಬಂಡವಾಳ

  ಚಿತ್ರಕ್ಕೆ ಅಶ್ವಿನಿ ರಾಮ್ ಪ್ರಸಾದ್ ಬಂಡವಾಳ

  'ಜೋಗಿ', 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಗಳನ್ನ ನಿರ್ಮಿಸಿದ್ದ ಅಶ್ವಿನಿ ಆಡಿಯೋ ಕಂಪನಿ ಮಾಲೀಕ ರಾಮ್ ಪ್ರಸಾದ್, 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಹಿಂದೆ 'ಪರೀಕ್ಷೆ' ಅನ್ನೋ ಸಿನಿಮಾ ನಿರ್ದೇಶಿಸಿದ್ದ ರವೀಂದ್ರ, ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ಶಿರಡಿಯಲ್ಲಿ ಸ್ಕ್ರಿಪ್ಟ್ ಪೂಜೆಯಲ್ಲಿ ತೊಡಗಿರುವ ಚಿತ್ರತಂಡ, ಏಪ್ರಿಲ್ 2 ರಂದು ಶೂಟಿಂಗ್ ಗೆ ಚಾಲನೆ ನೀಡಲಿದೆ.

  English summary
  Kannada Actor Ravishankar starrer 'Sarkari Kelasa Devara Kelasa' is announced and shooting will commence from April 2nd. Meanwhile the title of the movie is in news, as it resembles IAS Officer D.K.Ravi's life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X