»   » ಯಾರಪ್ಪಾ ಹೇಳಿದ್ದು 'ಸಂತು Straight Forward' ರೀಮೇಕ್ ಸಿನಿಮಾ ಅಂತ?

ಯಾರಪ್ಪಾ ಹೇಳಿದ್ದು 'ಸಂತು Straight Forward' ರೀಮೇಕ್ ಸಿನಿಮಾ ಅಂತ?

Posted By:
Subscribe to Filmibeat Kannada

'ಸಂತು Straight Forward' ಚಿತ್ರ ತರಾ-ತುರಿಯಲ್ಲಿ ತಯಾರಾಗಿ ಇದೀಗ ಹೇಳಿದಂತೆ ದೀಪಾವಳಿ ಹಬ್ಬಕ್ಕೆ ತೆರೆಗೆ ಬರುತ್ತಿದೆ. ಆದ್ರೆ ಇದು ರೀಮೇಕ್ ಚಿತ್ರ ಅಂತ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಕೆ.ಮಂಜು ನಿರ್ಮಾಣದ 'ಸಂತು Straight Forward' ಸಿನಿಮಾ ತಮಿಳಿನ 'ವಾಲು' ಚಿತ್ರದ ರೀಮೇಕ್ ಅಂತ ಕೆಲವರು ಹೇಳುತ್ತಿದ್ದಾರೆ. ಜೊತೆಗೆ ಈ ಸ್ವಮೇಕ್-ರೀಮೇಕ್ ಗಳ ಬಗ್ಗೆ, ಫೇಸ್ ಬುಕ್ ನಲ್ಲಿ ಇತ್ತೀಚೆಗೆ ಭಾರಿ ಚರ್ಚೆ ಕೂಡ ನಡೆಯಿತು.


ಕೆಲವರು ಹೇಳುವ ಪ್ರಕಾರ ಇದು 25% 'ವಾಲು' ಚಿತ್ರದ ರೀಮೇಕ್ ಅಂತ. ಆದ್ರೆ ಇನ್ನು ಕೆಲವರು ಇಲ್ಲ ಇದು ಪೂರ್ತಿ ಹೊಸ ಸ್ಕ್ರಿಪ್ಟ್ ಅಂತಾರೆ. ಅಷ್ಟಕ್ಕೂ ಯಾವುದು ಸುಳ್ಳು, ಯಾವುದು ನಿಜ ಅನ್ನೋದನ್ನು ಚಿತ್ರತಂಡವೇ ತಿಳಿಸಿದೆ.['ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ]


ಸಿನಿಮಾ ಬಿಡುಗಡೆ ಆಗೋ ಮುನ್ನವೇ ಇದು ರೀಮೇಕ್ ಅಂತ ಅಭಿಮಾನಿಗಳಿಗೆ ಮತ್ತು ಸಿನಿ ಪ್ರಿಯರಿಗೆ ತಪ್ಪು ಮಾಹಿತಿ ಸಿಗುವುದು ಸರಿಯಲ್ಲ.


ಈ ಚಿತ್ರದಲ್ಲಿ ಎಲ್ಲರ ಹಾಟ್ ಫೆವರಿಟ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಇದು ರೀಮೇಕ್ ಅನ್ನೋ ಅನುಮಾನ ಕಾಡಲು ಪ್ರಮುಖ ಕಾರಣ ಇದೆ. ಅದೇನು ನೋಡೋಣ ಮುಂದೆ ಓದಿ...


ಛೇ..ಛೇ.. ಖಂಡಿತ ರೀಮೇಕ್ ಅಲ್ಲ

ಇದೀಗ ಖುದ್ದು ಚಿತ್ರತಂಡದ ಮೂಲಗಳೇ ಇದು ಶುದ್ಧ ಕನ್ನಡ ನೆಲದ ಸಿನಿಮಾ. ಪೂರ್ತಿ ಹೊಸ ಸ್ಕ್ರಿಪ್ಟ್ ಬರೆದಿರೋ ಸ್ವಮೇಕ್ ಸಿನಿಮಾ ಅಂತ ಚಿತ್ರತಂಡದ ಮೂಲಗಳು ಖಚಿತಪಡಿಸಿವೆ.['ಸಂತು Straight Forward' ಚಿತ್ರದ ಆಕರ್ಷಕ ಟೀಸರ್ ನೋಡಿ]


ಕೆ.ಮಂಜು ರೀಮೇಕ್ ಹಕ್ಕು ಖರೀದಿಸಿದ್ದಾರೆ

'ಸಂತು Straight Forward' ರೀಮೇಕ್ ಸಿನಿಮಾ ಇರಬಹುದೇನೋ ಅನ್ನೋ ಅನುಮಾನ ಕಾಡಲು ಪ್ರಮುಖ ಕಾರಣ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು. ಅದೇನಪ್ಪಾ ಅಂದ್ರೆ, ಕೆ.ಮಂಜು ಅವರು 'ವಾಲು' ಚಿತ್ರದ ರೀಮೇಕ್ ಹಕ್ಕನ್ನು ಈ ಮೊದಲೇ ಖರೀದಿ ಮಾಡಿದ್ದು ಒಂದು ಕಾರಣ ಆದರೆ ಇನ್ನೊಂದು ಕಾರಣ ಇದೆ.


'ಡೆಡ್ಲಿ' ಆದಿತ್ಯ ಜಾಗಕ್ಕೆ ಶ್ಯಾಮ್

ತಮಿಳಿನ 'ವಾಲು' ಚಿತ್ರದಲ್ಲಿ ನಮ್ಮ ಕನ್ನಡ ನಟ ಆದಿತ್ಯ ಅವರು ವಿಲನ್ ಆಗಿ ಮಿಂಚಿದ್ದರು. ಇವಿಷ್ಟು ಮಾತ್ರವಲ್ಲದೇ, ಮೊದಲು 'ಸಂತು Straight Forward' ಚಿತ್ರದ ವಿಲನ್ ರೋಲ್ ಗೆ 'ಡೆಡ್ಲಿ' ಆದಿತ್ಯ ಅವರೇ ಆಯ್ಕೆ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಆದಿತ್ಯ ಜಾಗಕ್ಕೆ ಪರಭಾಷಾ ನಟ ಶ್ಯಾಮ್ ಬಂದರು.[ತಮಿಳಿನಲ್ಲಿ ಡೆಡ್ಲಿ ಆದಿತ್ಯನ ಹೊಸ ಅವತಾರ]


ಆದಿತ್ಯ ಮತ್ತು ರೀಮೇಕ್ ಹಕ್ಕು ಸಿಂಕ್ ಆದಾಗ

ಒಟ್ಟಿನಲ್ಲಿ ಈ ಎಲ್ಲಾ ವಿಚಾರಗಳು ಒಂದಕ್ಕೊಂದು ಲಿಂಕ್ ಆದಾಗ ಸಾಮಾನ್ಯವಾಗಿ, ಇದೂ ಕೂಡ ರೀಮೇಕ್ ಸಿನಿಮಾ ಇರಬಹುದೇನೋ ಅನ್ನೋ ಅನುಮಾನ ಕಾಡಿದೆ ಅಷ್ಟೇ. ಆದರೆ ಇದೀಗ ಎಲ್ಲಾ ಅನುಮಾನಗಳಿಗೆ ಖುದ್ದು ಚಿತ್ರತಂಡದ ಮೂಲಗಳೇ ಉತ್ತರ ನೀಡಿದ್ದು, ಇನ್ನುಮುಂದೆ ಮುಲಾಜಿಲ್ಲದೇ 'ಸಂತು Straight Forward' ಪಕ್ಕಾ ಸ್ವಮೇಕ್ ಸಿನಿಮಾ ಅಂತ ಹೇಳಬಹುದು.


ದೀಪಾವಳಿಗೆ 'ಸಂತು' ಪಟಾಕಿ

ಮಹೇಶ್ ರಾವ್ ನಿರ್ದೇಶನ ಮಾಡಿರುವ ಈ ಸಿನಿಮಾ ಅಕ್ಟೋಬರ್ 28, ಅಂದರೆ ಇದೇ ಶುಕ್ರವಾರ, ದೀಪಾವಳಿ ಹಬ್ಬದಂದು ಗ್ರ್ಯಾಂಡ್ ಅಗಿ ತೆರೆ ಕಾಣುತ್ತಿದೆ. ಜೊತೆಗೆ ಇಂದು 4 ಗಂಟೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದ್ದು, ಆವಾಗ ಇದು ಸ್ವಮೇಕ್ ಸಿನಿಮಾ ಅಂತ ಖಂಡಿತ ಎಲ್ಲರಿಗೂ ತಿಳಿದೇ ತಿಳಿಯುತ್ತದೆ.


English summary
Is Kannada Movie 'Santhu Straight Forward' remake or swamake. Kannada Actor Yash and Kannada Actress Radhika Pandit Starrer 'Santhu Straight Forward' Swamake and it is completely new script says movie sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada