»   » 'ಚಕ್ರವರ್ತಿ' ಐಟಂ ಹಾಡಿಗೆ ಹೆಜ್ಜೆ ಹಾಕಿದ 'ನಾಟಿಗರ್ಲ್' ಇವರೇ!

'ಚಕ್ರವರ್ತಿ' ಐಟಂ ಹಾಡಿಗೆ ಹೆಜ್ಜೆ ಹಾಕಿದ 'ನಾಟಿಗರ್ಲ್' ಇವರೇ!

Posted By:
Subscribe to Filmibeat Kannada

ಈಗ ಇಂತಹದ್ದೇ ಹಬ್ಬವನ್ನ ನೀಡಲಿದೆ ದರ್ಶನ್ ಅಭಿನಯದ 'ಚಕ್ರವರ್ತಿ'. ಹೌದು, 'ಚಕ್ರವರ್ತಿ' ಚಿತ್ರದಲ್ಲಿ ಐಟಂ ಹಾಡಿದ್ದು, ಈ ಹಾಡಿನಲ್ಲಿ ಬಾಲಿವುಡ್ ಸುಂದರಿಯೊಬ್ಬಳು ಹೆಜ್ಜೆ ಹಾಕಿದ್ದಾರೆ.

ಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!

ಈ ಹಾಡು ತುಂಬಾನೇ ಸ್ಪೆಷಲ್ ಆಗಿದ್ದು, 1985ರ ಕಾಲದ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿದೆಯಂತೆ. ಹಾಗಾದ್ರೆ, 'ಚಕ್ರವರ್ತಿ' ಚಿತ್ರದ ಐಟಂ ಹಾಡಿನ ಸ್ಪೆಷಾಲಿಟಿ ಏನು? ಈ ವಿಶೇಷ ಹಾಡಿಗೆ ಡ್ಯಾನ್ ಮಾಡಿರುವ ಈ ಸುಂದರಿ ಯಾರು ಅಂತ ಇಲ್ಲಿದೆ ನೋಡಿ....

'ಚಕ್ರವರ್ತಿ'ಯಲ್ಲಿ ಐಟಂ ಸಾಂಗ್

ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದಲ್ಲಿ ಸ್ಪೆಷಲ್ ನಂಬರ್ ಹಾಡೊಂದು ಮೂಡಿಬಂದಿದೆ. ಇದು 1985ರ ರೆಟ್ರೋ ಸ್ಟೈಲ್ ನ ಐಟಂ ಸಾಂಗ್ ಎಂಬುವುದು ವಿಶೇಷ. ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ರೀಟಾ ಎಂಬುವರು ಹಾಡಿದ್ದಾರೆ.['ಚಕ್ರವರ್ತಿ' ಚಿತ್ರದ ರೆಟ್ರೋ ಸಾಂಗ್ 'ಮತ್ತೆ ಮಳೆಯಾಗಿದೆ' ರಿಲೀಸ್!]

'ನಾಟಿ ಗರ್ಲ್' ಆದ ಬಾಲಿವುಡ್ ಬೆಡಗಿ

'ನಾಟಿ ಗರ್ಲ್' ಐಟಂ ಹಾಡಿಗೆ ಬಾಲಿವುಡ್ ಟಿವಿ ಸ್ಟಾರ್ ಹಾಗೂ ನಟಿ ಇಶಿತಾ ವ್ಯಾಸ್ ಹೆಜ್ಜೆ ಹಾಕಿದ್ದಾರೆ. ಇದು ರೆಟ್ರೋ ಸ್ಟೈಲ್ ಸಾಂಗ್ ಆಗಿರುವುದ್ರಿಂದ ತುಂಬಾ ವಿಶೇಷವಾಗಿದೆಯಂತೆ.

ಇಶಿತಾ ವ್ಯಾಸ್ ಯಾರು?

ಇಶಿತಾ ವ್ಯಾಸ್ ಹಿಂದಿ ಟೆಲಿವಿಷನ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟಿ. ಅದರ ಜೊತೆ ತೆಲುಗು, ತಮಿಳು, ಹಾಗೂ ಕೆಲ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

'ಮುಕುಂದ ಮುರಾರಿ' ಚಿತ್ರದಲ್ಲಿ 'ಮಾತೆ'

ಅಷ್ಟೇ ಅಲ್ಲದೇ ಕನ್ನಡ ಚಿತ್ರದಲ್ಲೂ ಒಂದು ಸಣ್ಣ ಪಾತ್ರವನ್ನ ನಿರ್ವಹಿಸಿದ್ದಾರೆ. ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರದಲ್ಲಿ 'ಮಾತೆ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ.

English summary
Bollywood Tv Star and Actress Ishita Vyas was shake a leg for an item number in the Chakravarthy film along with Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada