ಐಟಿ ದಾಳಿ ಪ್ರಕರಣ: ಇಂದು ವಿಚಾರಣೆಯಲ್ಲಿ ರಶ್ಮಿಕಾ ಕುಟುಂಬ ಭಾಗಿ

Recommended Video

ರಶ್ಮಿಕಾ ಮಂದಣ್ಣ ಚಿತ್ರರಂಗದಿಂದ ಗಳಿಸಿದೆಷ್ಟು ಕೋಟಿ? ಇಲ್ಲಿದೆ ಫುಲ್ ಡೀಟೈಲ್ಸ್ | Rashmika Mandanna

ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಇಂದು (ಜನವರಿ 21) ಈ ಬಗ್ಗೆ ವಿಚಾರಣೆ ನಡೆಯಲಿದೆ. ಇಂದಿನ ವಿಚಾರಣೆಯಲ್ಲಿ ಭಾಗಿಯಾಗಲು ರಶ್ಮಿಕಾ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿದೆ.

ನಟಿ ರಶ್ಮಿಕಾ ಮಂದಣ್ಣ, ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಮಂದಣ್ಣ ವಿಚಾರಣೆಯಲ್ಲಿ ಭಾಗಿಯಾಗಬೇಕಿದೆ. ಮೈಸೂರಿನ ಆದಾಯ ತೆರಿಗೆ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಮಂದಣ್ಣ ಕುಟುಂಬ ಉತ್ತರ ನೀಡಬೇಕಾಗುತ್ತದೆ.

ಜನವರಿ 16 ರಂದು ವಿರಾಜಪೇಟೆಯಲ್ಲಿ ಇರುವ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ನಡೆದಿತ್ತು. 10ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಆ ವೇಳೆ ಹೈದರಾಬಾದನಲ್ಲಿ ಇದ್ದ ರಶ್ಮಿಕಾ ನಂತರ ಮನೆಗೆ ಆಗಮಿಸಿದರು. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಐಟಿ ಅಧಿಕಾರಿಗಳು ಶೋಧ ನಡೆಸಿದ್ದರು.

IT Officers Will Inquire Actress Rashmika Family Today

ದೊಡ್ಡ ದೊಡ್ಡ ಹೈ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಅಲ್ಲದೆ ರಶ್ಮಿಕಾ ಕುಟುಂಬ ಆಸ್ತಿ ಕೂಡ ಹೆಚ್ಚಿದೆ. ಹೀಗಾಗಿ ಐಟಿ ದಾಳಿ ಆಗಿದೆ ಎಂದು ಉಹಿಸಲಾಗಿತ್ತು.

ಸದ್ಯ, ತಮಿಳು ಸಿನಿಮಾದ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ನಟ ಕಾರ್ತಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಪೊಗರು' ಸಿನಿಮಾದ ಡಬ್ಬಿಂಗ್ ಕೆಲಸ ಕೂಡ ಬಾಕಿ ಇದೆ.

More from Filmibeat

English summary
IT Officers will inquire Kannada Actress Rashmika family today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X