For Quick Alerts
  ALLOW NOTIFICATIONS  
  For Daily Alerts

  45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.!

  |
  Nata Sarvabhouma Movie:45 ಗಂಟೆಗಳ ಬಳಿಕ ಪುನೀತ್ ನಿವಾಸದ ಮೇಲಿನ ಐಟಿ ದಾಳಿ ಅಂತ್ಯ.!|FILMIBEAT KANNADA

  ಸ್ಯಾಂಡಲ್ ವುಡ್ ಸ್ಟಾರ್ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲಿನ ಐಟಿ ರೇಡ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸತತ ಮೂರು ದಿನಗಳಿಂದ ನಟರು, ನಿರ್ಮಾಪಕರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

  ಅತ್ತ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಜಯಣ್ಣ, ನಟರಾದ ಯಶ್, ಸುದೀಪ್ ಮನೆಯಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದ್ದರೆ, ಇತ್ತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಐಟಿ ದಾಳಿ ಅಂತ್ಯಗೊಂಡಿದೆ.

  45 ಗಂಟೆಗಳ ಸುದೀರ್ಘ ಪರಿಶೀಲನೆ ನಡೆಸಿದ ಬಳಿಕ, ನಿನ್ನೆ ಮಧ್ಯರಾತ್ರಿ 12 ರ ಸುಮಾರಿಗೆ ಪುನೀತ್ ರಾಜ್ ಕುಮಾರ್ ಮನೆಯಿಂದ ಆದಾಯ ತೆರಿಗೆ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ಮುಂದೆ ಓದಿರಿ...

  ಪುನೀತ್ ಮನೆಯಲ್ಲಿ ಶೋಧ ಕಾರ್ಯ ಮುಗಿಯಿತು

  ಪುನೀತ್ ಮನೆಯಲ್ಲಿ ಶೋಧ ಕಾರ್ಯ ಮುಗಿಯಿತು

  ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯ ಅಂತ್ಯಗೊಂಡಿದೆ. ಪುನೀತ್ ಪತ್ನಿ ಅಶ್ವಿನಿಗೆ ಸೇರಿದ ಆಸ್ತಿ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದು ನಿನ್ನೆ ಮಧ್ಯರಾತ್ರಿ ಐಟಿ ಅಧಿಕಾರಿಗಳು ವಾಪಸ್ ಹೊರಟರು.

  ದಿಢೀರ್ ಐಟಿ ದಾಳಿಗೆ ಕಾರಣವಾದ ಪ್ರಮುಖ ಅಂಶಗಳು

  ಏನೂ ತೊಂದರೆ ಆಗಿಲ್ಲ

  ಏನೂ ತೊಂದರೆ ಆಗಿಲ್ಲ

  ''ಐಟಿ ರೇಡ್ ಆಗಿರುವುದು ನಿಜ. ಓರ್ವ ಜವಾಬ್ದಾರಿಯುತ ಪ್ರಜೆಯಾಗಿ, ಆದಾಯ ತೆರಿಗೆ ಅಧಿಕಾರಿಗಳಿಗೆ ನಾನು ಸಹಕರಿಸಿದ್ದೇನೆ. ಏನೂ ತೊಂದರೆ ಆಗಿಲ್ಲ. ಅವರೂ ನಮಗೆ ತೊಂದರೆ ಮಾಡಿಲ್ಲ, ನಾವೂ ಅವರಿಗೆ ತೊಂದರೆ ಕೊಡಲಿಲ್ಲ'' ಎಂದು ಐಟಿ ದಾಳಿ ಮುಗಿದ ಬಳಿಕ ಪುನೀತ್ ರಾಜ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

  ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್

  ಅಕೌಂಟ್ ವಿಚಾರವಾಗಿ ಐಟಿ ರೇಡ್

  ಅಕೌಂಟ್ ವಿಚಾರವಾಗಿ ಐಟಿ ರೇಡ್

  ''ಐಟಿ ರೇಡ್ ಕಂಪ್ಲೀಟ್ ಆಗಿದೆ. ಅಕೌಂಟ್ ವಿಚಾರವಾಗಿ ಐಟಿ ರೇಡ್ ನಡೆದಿದೆ. ಊಹಾಪೋಹ ಏನೇ ಇರಬಹುದು, ಆದರೆ ಯಾವುದೋ ಒಂದು ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟಿದ್ದೇವೆ'' ಅಂತಾರೆ ಪುನೀತ್ ರಾಜ್ ಕುಮಾರ್.

  ಬಂದ್ರು-ಹೋದ್ರು-ತಂದ್ರು: 38 ಗಂಟೆಯಿಂದ 'ಐಟಿ' ದಾಳಿಯಲ್ಲಿ ಆಗಿದ್ದಿಷ್ಟೇ.!

  ರಿಲ್ಯಾಕ್ಸ್ ಮೂಡ್ ನಲ್ಲಿ ಅಪ್ಪು ಫ್ಯಾಮಿಲಿ

  ರಿಲ್ಯಾಕ್ಸ್ ಮೂಡ್ ನಲ್ಲಿ ಅಪ್ಪು ಫ್ಯಾಮಿಲಿ

  ಕಳೆದ ಮೂರು ದಿನಗಳಿಂದ ನಡೆದ ಐಟಿ ದಾಳಿಯಿಂದಾಗಿ, ಪುನೀತ್ ರಾಜ್ ಕುಮಾರ್ ಫ್ಯಾಮಿಲಿ ಕೊಂಚ ಟೆನ್ಷನ್ ನಲ್ಲಿತ್ತು. ಆದ್ರೀಗ, ಐಟಿ ರೇಡ್ ಕಂಪ್ಲೀಟ್ ಆಗಿದ್ದು ಅಪ್ಪು ಫ್ಯಾಮಿಲಿ ಕೊಂಚ ರಿಲ್ಯಾಕ್ಸ್ ಮೂಡ್ ನಲ್ಲಿದೆ.

  ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ?

  'ನಟ ಸಾರ್ವಭೌಮ' ಆಡಿಯೋ ರಿಲೀಸ್

  'ನಟ ಸಾರ್ವಭೌಮ' ಆಡಿಯೋ ರಿಲೀಸ್

  ಇಂದು 'ನಟ ಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೆ. ಪುನೀತ್ ನಿವಾಸದ ಮೇಲೆ ಐಟಿ ದಾಳಿ ಮುಗಿದಿರುವ ಕಾರಣ, ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಅಪ್ಪು ಭಾಗವಹಿಸುವ ಸಾಧ್ಯತೆ ಇದೆ.

  English summary
  After 45 hours, IT Raid at Kannada Actor Puneeth Rajkumar house ends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X