For Quick Alerts
  ALLOW NOTIFICATIONS  
  For Daily Alerts

  ಸೀಮಂತದಲ್ಲಿ ರಾಧಿಕಾ ಪಂಡಿತ್ ಗೆ ಸಿಕ್ಕ ದುಬಾರಿ ಉಡುಗೊರೆಗಳ ಮೇಲೆ ಐಟಿ ಕಣ್ಣು.!

  |
  Sandalwood IT Raid: ರಾಧಿಕಾ ಪಂಡಿತ್ ಸೀಮಂತದ ಉಡುಗೊರೆಯನ್ನೂ ಬಿಡದ ಐಟಿ ಅಧಿಕಾರಿಗಳು | Oneindia Kannada

  ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಮತ್ತು ನಿರ್ಮಾಪಕರ ನಿವಾಸದ ಮೇಲಿನ ಐಟಿ ದಾಳಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅತ್ತ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದರೆ, ಇತ್ತ ಯಶ್ ಮನೆಯಲ್ಲಿ ಇನ್ನೂ ತಲಾಶ್ ನಡೆಯುತ್ತಲೇ ಇದೆ.

  ಯಶ್ ಖರೀದಿ ಮಾಡಿರುವ ಆಸ್ತಿ, ಚಿನ್ನಾಭರಣ, ಚಿತ್ರಗಳಿಗೆ ಪಡೆಯುವ ಸಂಭಾವನೆ ಸೇರಿದಂತೆ ಆದಾಯದ ಮೂಲಗಳ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜೊತೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಗೆ ಸೇರಿದ ದುಬಾರಿ ಉಡುಗೊರೆಗಳ ಮೇಲೂ ಐಟಿ ಕಣ್ಣಿಟ್ಟಿದೆ.

  ಬೆಂಗಳೂರಿಗೆ ಬಂದ ಯಶ್, ಐಟಿ ರೈಡ್ ಬಗ್ಗೆ ಹೇಳಿದ್ದೇನು?

  ನವೆಂಬರ್ ತಿಂಗಳಲ್ಲಿ ತುಂಬು ಗರ್ಭಿಣಿ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಪ್ರತಿಷ್ಟಿತ ಹೋಟೆಲ್ ನಲ್ಲಿ ನಡೆದಿತ್ತು. ಸೀಮಂತಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಆಗಮಿಸಿ ಗರ್ಭವತಿ ರಾಧಿಕಾ ಪಂಡಿತ್ ಗೆ ದುಬಾರಿ ಗಿಫ್ಟ್ ಗಳನ್ನು ನೀಡಿದ್ದರು.

  ಐಟಿ ಅಧಿಕಾರಿಗಳು ಇವರನ್ನೇ ಟಾರ್ಗೆಟ್ ಮಾಡಲು ಕಾರಣ ಇದಿರಬಹುದೇ?

  ಈ ಬೆಲೆ ಬಾಳುವ ಉಡುಗೊರೆಗಳ ವಿಚಾರವಾಗಿ ಆದಾಯ ತೆರಿಗೆ ಅಧಿಕಾರಿಗಳು ಸದ್ಯ ಮೌಲ್ಯಮಾಪನ ನಡೆಸುತ್ತಿದ್ದಾರೆ. ಇದರ ನಡುವೆ ಪಂಚನಾಮೆಗೂ ಸಿದ್ಧತೆ ಮಾಡಕೊಳ್ಳಲಾಗಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಯಶ್ ಮನೆಯಲ್ಲಿ ಪರಿಶೀಲನೆ ಅಂತ್ಯಗೊಳ್ಳುವ ಸಾಧ್ಯತೆ ಇದೆ.

  English summary
  IT Raid continues in Rocking Star Yash's house on Day 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X