For Quick Alerts
  ALLOW NOTIFICATIONS  
  For Daily Alerts

  ಐಟಿ ಕೋಟೆಯಿಂದ ಹೊರಬಂದ ರಶ್ಮಿಕಾ ಕುಟುಂಬ: ಅಧಿಕಾರಿಗಳಿಗೆ ಸಿಕ್ಕಿದ್ದೇನು?

  By ಮಡಿಕೇರಿ ಪ್ರತಿನಿಧಿ
  |

  Recommended Video

  Rashmika Mandanna is out of IT claw | RASHMIKA MANDANNA | IT RAID | FILMIBEAT KANNADA

  ರಶ್ಮಿಕಾ ಮಂದಣ್ಣರವರ ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸದಲ್ಲಿ ಗುರುವಾರ ಬೆಳಗ್ಗೆಯಿಂದ ನಡೆಯುತ್ತಿದ್ದ ಐಟಿ ದಾಳಿ ಶುಕ್ರವಾರ ಮಧ್ಯಾಹ್ನ ಅಂತ್ಯವಾಗಿದೆ. ಐಟಿ ದಾಳಿ ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 4 ಬಾಕ್ಸ್ ದಾಖಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ.

  ಒಂದು ಸೂಟ್‌ ಕೇಸ್‌, ಎರಡು ಬ್ಯಾಗ್ ಮತ್ತೊಂದು ವೈಟ್ ಬಾಕ್ಸ್‌ನಲ್ಲಿ ಐಟಿ ಅಧಿಕಾರಿಗಳು ದಾಖಲೆ ಸಂಗ್ರಹ ಮಾಡಿದ್ದಾರೆ. ಐಟಿ ಅಧಿಕಾರಿಗಳ ಎರಡು ತಂಡ ರಶ್ಮಿಕಾ ನಿವಾಸದಲ್ಲಿ ಹಾಗೂ ಮಂದಣ್ಣ ಸೆರೆನಿಟಿ ಹಾಲ್‌ನಲ್ಲಿ ಶೋಧ ಕಾರ್ಯ ನಡೆಸಿದ್ದರು.

  ರಶ್ಮಿಕಾ ಇಷ್ಟು ದೊಡ್ಡ ಶ್ರೀಮಂತರಾ? ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರರಶ್ಮಿಕಾ ಇಷ್ಟು ದೊಡ್ಡ ಶ್ರೀಮಂತರಾ? ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ

  ಜತೆಗೆ, ಶೂಟಿಂಗ್ ‌ನಲ್ಲಿದ್ದ ರಶ್ಮಿಕಾ ಮಂದಣ್ಣ ಗುರುವಾರ ರಾತ್ರಿ ಕೊಡಗು ಜಿಲ್ಲೆಯ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಜತೆಗೆ, ತಡರಾತ್ರಿ ಮನೆಗೆ ಆಗಮಿಸಿದ ರಶ್ಮಿಕಾ ತಾಯಿ ಸುಮನ್‌ ಮಂದಣ್ಣರನ್ನೂ ಐಟಿ ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  ಇಂದು ಬೆಳಗ್ಗೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಮನೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿತ್ತು. 'ಕಿರಿಕ್‌ ಪಾರ್ಟಿ'ಯ ಸಾನ್ವಿ ಪಾತ್ರದ ಮೂಲಕ ಮನೆ ಮಾತಾದ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್‌ ಚಿತ್ರಗಳ ಜತೆ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರಗಳಲ್ಲೂ ಹೆಸರು ಗಳಿಸಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ರೈಡ್ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ರೈಡ್

  ಇತ್ತೀಚೆಗೆ ಮಹೇಶ್‌ ಬಾಬು ಹಾಗೂ ನಟಿ ರಶ್ಮಿಕಾ ಮಂದಣ್ಣರ ತೆಲುಗಿನ 'ಸರಿಲೇರು ನೀ ಕೆವ್ವರು' ಚಿತ್ರ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡುತ್ತಿದೆ. ಅಲ್ಲದೆ, ಕನ್ನಡದಲ್ಲಿ ನಟ ಧ್ರುವ ಸರ್ಜಾ ಜತೆಗಿನ 'ಪೊಗರು' ಚಿತ್ರ ಸದ್ಯದಲ್ಲೇ ರಿಲೀಸ್ ಗೆ ರೆಡಿಯಾಗಿದೆ.

  English summary
  IT Raid on South India Actress Rashmika Mandanna on virajpete Residence ends today.
  Friday, January 17, 2020, 19:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X