For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್

  |

  ಸ್ಯಾಂಡಲ್ ವುಡ್ ಗೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಮುಂಜಾನೆ ಆರು ಗಂಟೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿ ಗಾಬರಿ ಮೂಡಿಸಿದ್ದಾರೆ.

  ಕನ್ನಡ ಚಿತ್ರರಂಗದ 8 ಜನ ಖ್ಯಾತ ನಟ ಹಾಗೂ ನಿರ್ಮಾಪಕರು ಮನೆ, ಕಛೇರಿ ಮತ್ತು ಸಂಬಂಧಿಕರ ಮನೆ ಮೇಲೆ ರೈಡ್ ಮಾಡಲಾಗಿದ್ದು, ಸುಮಾರು 200 ಅಧಿಕಾರಿಗಳು, ಬೆಂಗಳೂರಿನ 25 ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

  ಅಂದ್ಹಾಗೆ, ಈ ದಾಳಿಗೆ ಒಳಗಾಗಿರುವ ನಟ ಮತ್ತು ನಿರ್ಮಾಪಕರು ಸಾಮಾನ್ಯದವರಲ್ಲ. ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ. ಹಾಗಿದ್ರೆ, ಯಾರ ಯಾರ ಮನೆಗೆ ಐಟಿ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ? ಮುಂದೆ ಓದಿ...

  ದೊಡ್ಮನೆಯ ಸಹೋದರರು

  ದೊಡ್ಮನೆಯ ಸಹೋದರರು

  ಡಾ ರಾಜ್ ಕುಮಾರ್ ಅವರ ಪುತ್ರರಾದ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ನಿವಾಸದ ಮೇಲೆ ಐಟಿ ದಾಳಿ ಆಗಿದೆ. ಸದಾಶಿವನಗರದಲ್ಲಿರುವ ಪುನೀತ್ ನಿವಾಸ ಮತ್ತು ನಾಗವಾರದಲ್ಲಿರುವ ಶಿವಣ್ಣನ ನಿವಾಸದ ಮೇಲೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ರೈಡ್ ಮಾಡಲಾಗಿದೆ.

  ನಟ ಶಿವರಾಜ್ ಕುಮಾರ್ ಮನೆ ಮೇಲೆಯೂ ಐಟಿ ರೇಡ್

  ಸುದೀಪ್ ನಿವಾಸ

  ಸುದೀಪ್ ನಿವಾಸ

  ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಕಿಚ್ಚ ಸುದೀಪ್ ಅವರ ಮನೆ ಮೇಲೆ ಐಟಿ ದಾಳಿ ಆಗಿದೆ. ಜೆಪಿ ನಗರದಲ್ಲಿರುವ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಆಸ್ತಿ ವಿವರ, ದಾಖಲೆ ಪತ್ರಗಳು ಪರಿಶೀಲನೆ ನಡೆಸಿದ್ದಾರೆ.

  ರಾಕಿ ಭಾಯ್ ಮನೆ

  ರಾಕಿ ಭಾಯ್ ಮನೆ

  ಕೆಜಿಎಫ್ ಚಿತ್ರದ ಯಶಸ್ಸಿನಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿ ಆಗಿದೆ. ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸ, ಮಾವನ ಮನೆ ಸೇರಿದಂತೆ ಹಲವು ಕಡೆ ರೈಡ್ ಆಗಿದೆ. ಕೆಜಿಎಫ್ ಸಿನಿಮಾ 150 ಕೋಟಿ ಗಳಿಸಿದೆ ಎಂಬ ಮಾಹಿತಿಯೂ ಇದೆ.

  ನಟ ಸುದೀಪ್, ಯಶ್ ರಿಗೂ ಶಾಕ್ ನೀಡಿದ ಐಟಿ ಅಧಿಕಾರಿಗಳು

  'ಕೆಜಿಎಫ್' ನಿರ್ಮಾಪಕನೂ ಟಾರ್ಗೆಟ್

  'ಕೆಜಿಎಫ್' ನಿರ್ಮಾಪಕನೂ ಟಾರ್ಗೆಟ್

  ಸದ್ಯ ಕೆಜಿಎಫ್ ಚಿತ್ರವನ್ನ ನಿರ್ಮಾಣ ಮಾಡಿ ಅತಿ ದೊಡ್ಡ ಗಳಿಕೆ ಕಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಬಾವಿಯಲ್ಲಿರುವ ನಿವಾಸಕ್ಕೆ ಮುಂಜಾನೆಯೇ ಐಟಿ ಆಫಿಸರ್ಸ್ ಎಂಟ್ರಿಯಾಗಿದ್ದಾರೆ.

  ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ

  ಸಿ ಆರ್ ಮನೋಹರ್

  ಸಿ ಆರ್ ಮನೋಹರ್

  ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ 'ದಿ ವಿಲನ್' ಚಿತ್ರವನ್ನ ನಿರ್ಮಾಣ ಮಾಡಿದ್ದ, ವಿಧಾನ ಪರಿಷತ್ ಸದಸ್ಯ ಸಿ ಆರ್ ಮನೋಹರ್ ಅವರ ಮನೆ ಮೇಲೆಯೂ ಐಟಿ ದಾಳಿ ನಡೆದಿದೆ. ಎಚ್ ಎಸ್ ಆರ್ ಲೇಔಟ್ ನಿವಾಸ ಸೇರಿದಂತೆ ಕಚೇರಿಗಳ ಮೇಲೆ ರೈಡ್ ಆಗಿದೆ.

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ

  ಕೋಟಿ ನಿರ್ಮಾಪಕ ಜಯಣ್ಣ

  ಕೋಟಿ ನಿರ್ಮಾಪಕ ಜಯಣ್ಣ

  ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡ್ತಿರುವ ಖ್ಯಾತ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮಾಲೀಕ ಜಯಣ್ಣ ಅವರ ನಾಗರಬಾವಿ ಮನೆ ಮೇಲೆ ಐಟಿ ರೈಡ್ ಆಗಿದೆ. 'ಮಿಸ್ಟರ್ ಅಂಡ್ ಮಿಸಸ್' 'ರಾಮಾಚಾರಿ', 'ಗೂಗ್ಲಿ', 'ರಣವಿಕ್ರಮ', 'ರುಸ್ತುಂ' ಚಿತ್ರಗಳು ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ.

  ರಾಕ್ ಲೈನ್ ವೆಂಕಟೇಶ್

  ರಾಕ್ ಲೈನ್ ವೆಂಕಟೇಶ್

  ರಜನಿಕಾಂತ್, ಸಲ್ಮಾನ್ ಖಾನ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆ ಮೇಲೂ ಐಟಿ ದಾಳಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ನಿವಾಸವನ್ನ ಐಟಿ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

  English summary
  Kannada film industry woke up to raids by income tax sleuths at the residences of film actors and producers on Thursday in Bengaluru including sudeep, shiva rajkumar, puneeth rajkumar, rockline venkatesh, vijay kiragandur, jayanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X