»   » ಯಶ್ 'ರಾಮಾಚಾರಿ' ತೆಲುಗಿನಲ್ಲಿ ಸೌಂಡ್ ಮಾಡೋದು ಪಕ್ಕಾ

ಯಶ್ 'ರಾಮಾಚಾರಿ' ತೆಲುಗಿನಲ್ಲಿ ಸೌಂಡ್ ಮಾಡೋದು ಪಕ್ಕಾ

Posted By:
Subscribe to Filmibeat Kannada

ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಇದೀಗ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ.

ಹೌದು ನವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್-ಕಟ್ ಹೇಳಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ರೀಮೇಕ್ ಹಕ್ಕನ್ನು ಖರೀದಿಸಿದ್ದು, ಟಾಲಿವುಡ್ ನ ಮೆಗಾ ಫ್ಯಾಮಿಲಿ.[ಫಿಲಂಫೇರ್ ಪ್ರಶಸ್ತಿ ಗೆದ್ದು ಬಿಟ್ಟ ನಮ್ಮ 'ರಾಮಾಚಾರಿ']


ಅಂದಹಾಗೆ ಈ ಸಿನಿಮಾ ತೆಲುಗಿಗೆ ರೀಮೇಕ್ ಆಗಲಿದೆ ಎಂದು ಈ ಮೊದಲೇ ಸುದ್ದಿಯಾಗಿತ್ತು. ಆದರೆ ಆಗಿನ್ನೂ ಪಕ್ಕಾ ಆಗಿರಲಿಲ್ಲ. ಆದರೆ ಇದೀಗ ಈ ರೀಮೇಕ್ ಸುದ್ದಿ ಪಕ್ಕಾ ಆಗಿದ್ದು, ಇನ್ನೇನು ಸದ್ಯದಲ್ಲೇ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಟಾಲಿವುಡ್ ಅಂಗಳದಲ್ಲೂ ಸೌಂಡ್ ಮಾಡಲಿದೆ.[ಕಿರುತೆರೆಯಲ್ಲಿ ಪ್ರಪ್ರಥಮ ಬ್ಲಾಕ್ ಬಸ್ಟರ್ ಮಿ ಎಂಡ್ ಮಿಸಸ್ ರಾಮಾಚಾರಿ]


ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಿನಿಕೆರಿಯರ್ ನಲ್ಲಿ ಅತ್ಯಂತ ದೊಡ್ಡ ಮಟ್ಟದ ಬ್ರೇಕ್ ಕೊಟ್ಟ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....


ತೆಲುಗಿನಲ್ಲಿ ಸಾಯಿ ಧರ್ಮ ತೇಜ

ಅಂದಹಾಗೆ ಕನ್ನಡದಲ್ಲಿ ಯಶ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಮೆಗಾ ಕುಟುಂಬದ ಸಾಯಿ ಧರ್ಮ ತೇಜ ಅವರು ಮಾಡಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಅಕ್ಕನ ಮಗ ಸಾಯಿ ಧರ್ಮ ತೇಜ ಅವರು ಸದ್ಯಕ್ಕೆ ಟಾಲಿವುಡ್ ನಲ್ಲಿ ತಮ್ಮ ಉತ್ತಮ ನಟನೆಯ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ.[ತೆಲುಗು ತೆರೆಗೆ ರಾಕಿಂಗ್ ಸ್ಟಾರ್ ರಾಮಾಚಾರಿ!]


ಸ್ಪೆಷಲ್ ಶೋ ಮೂಲಕ ನೋಡಿದ್ದ ಮೆಗಾಸ್ಟಾರ್

ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕನ್ನಡದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದ ಸ್ಪೆಷಲ್ ಶೋ ಈ ಹಿಂದೆ ಅರೇಂಜ್ ಮಾಡಲಾಗಿತ್ತು. ಸಿನಿಮಾ ನೋಡಿದ ಚಿರಂಜೀವಿ ಅವರು ಕೂಡ ಖುಷ್ ಆಗಿ ತೆಲುಗಿನಲ್ಲಿ ರಿಮೇಕ್ ಗೆ ಒಪ್ಪಿಕೊಂಡಿದ್ದರು.['ರಾಮಾಚಾರಿ' ಓಟಕ್ಕೆ ಬ್ರೇಕ್ ಹಾಕುವ ಗುಂಡಿಗೆ ಯಾರಿಗಿದೆ?]


ಕನ್ನಡದಲ್ಲಿ ನಾಗರಹಾವು-ತೆಲುಗಿನಲ್ಲಿ 'ಕೋಡೇ ನಾಗು'

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರ ತೆಲುಗಿನಲ್ಲಿ 'ಕೋಡೇ ನಾಗು' ಆಗಿ ತೆರೆಕಂಡಿತ್ತು. ಶೋಭನ್ ಬಾಬು ಅಭಿನಯಿಸಿದ್ದ 'ಕೋಡೇ ನಾಗು' ಚಿತ್ರ ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು.


ಸಿನಿಮಾ ಸಕ್ಸಸ್ ಗ್ಯಾರೆಂಟಿ

ಕನ್ನಡದಲ್ಲಿ ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾ ಹೇಗೆ ಹಿಟ್ ಆಗಿತ್ತೋ, ಹಾಗೆ ಅಲ್ಲೂ ಶೋಭನ್ ಬಾಬು ಅವರ 'ಕೋಡೇ ನಾಗು' ಸಿನಿಮಾ ಸಕ್ಸಸ್ ಆಗಿತ್ತು. ಹೀಗಾಗಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ತೆಲುಗಿಗೆ ರೀಮೇಕ್ ಮಾಡಿದ್ರೆ ವರ್ಕೌಟ್ ಆಗುತ್ತೆ ಅನ್ನೋದು ರಿಮೇಕ್ ಪಂಡಿತರ ಲೆಕ್ಕಾಚಾರ.


ತೆಲುಗಿಗೆ ರಿಮೇಕ್ ಪಕ್ಕಾ

ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ತೆಲುಗಿಗೆ ರಿಮೇಕ್ ಆಗುತ್ತಿರುವುದು ಪಕ್ಕಾ ಎಂಬುದನ್ನು ತೆಲುಗು ಸ್ನಾಪ್ ನವರು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.


ನವ ನಿರ್ದೇಶಕನ ಆಕ್ಷನ್-ಕಟ್

ಕನ್ನಡದಲ್ಲಿ 'ಮಿ.ಅಂಡ್ ಮಿಸಸ್ ರಾಮಾಚಾರಿ' ಎಂಬ ಸೂಪರ್ ಹಿಟ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಸ ಎಂಟ್ರಿ ಪಡೆದುಕೊಂಡ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ್ದರು.


50 ಕೋಟಿ ಕಲೆಕ್ಷನ್

ಯಶ್ ಮತ್ತು ರಾಧಿಕಾ ಜೋಡಿಯ 'ಮಿ.ಅಂಡ್.ಮಿಸಸ್ ರಾಮಾಚಾರಿ' ಸಿನಿಮಾ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಚಿಂದಿ ಚಿತ್ರಾನ್ನ ಮಾಡಿತ್ತು.


ನಿರ್ಮಾಪಕ ರಾಜ್ ಕುಮಾರ್

ತೆಲುಗಿಗೆ ಈ ಚಿತ್ರವನ್ನು ಕೊಂಡೊಯ್ಯುತ್ತಿರುವುದು 'ಮೈನಾ' ಮತ್ತು 'ಮೈತ್ರಿ' ಚಿತ್ರಗಳ ನಿರ್ಮಾಪಕ, ಕನ್ನಡಿಗ, ರಾಜ್ ಕುಮಾರ್. ಕನ್ನಡದಲ್ಲಿ ಈ ಚಿತ್ರಕ್ಕೆ ನಿರ್ಮಾಪಕ ಜಯಣ್ಣ ಭೋಗೇಂದ್ರ ಅವರು ಬಂಡವಾಳ ಹೂಡಿದ್ದರು.


English summary
'Mr And Mrs Ramachari' to be remade in Telugu. The Kannada superhit movie will be remade by a hero belonging to Tollywood Mega family. Telugu Actor Sai Dharam Tej is all set to star in the official remake of Mr And Mrs Ramachari. The original movie starred Yash & Radhika Pandit in the lead roles, directed by debutant Santhosh Anandram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada