»   » ಅದು 'ಕಾಂಪ್ಲಿಮೆಂಟ್'.! ರಜನಿ ಅಭಿಮಾನಿಗಳಿಗೆ ವರ್ಮಾ ಸ್ಪಷ್ಟನೆ

ಅದು 'ಕಾಂಪ್ಲಿಮೆಂಟ್'.! ರಜನಿ ಅಭಿಮಾನಿಗಳಿಗೆ ವರ್ಮಾ ಸ್ಪಷ್ಟನೆ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ 'ಲುಕ್ಸ್' ಬಗ್ಗೆ ಬೇಕಾಬಿಟ್ಟಿ ಕಾಮೆಂಟ್ ಮಾಡಿ, 'ತಲೈವಾ' ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ತಮ್ಮ ಟ್ವೀಟ್ ಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.

'ಬ್ಯಾಡ್ ಲುಕರ್' ಅಂತೆಲ್ಲಾ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳು ರಜನಿಕಾಂತ್ ರವರಿಗೆ ಅಭಿನಂದನೆ ಸಲ್ಲಿಸುವುದಕ್ಕಂತೆ..! ಹಾಗಂತ ಖುದ್ದು ವರ್ಮಾ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. [ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

ರಜನಿಕಾಂತ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಅಷ್ಟೂ ಟ್ವೀಟ್ ಗಳು 'ಕಾಂಪ್ಲಿಮೆಂಟ್' ಅಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ....

ವರ್ಮಾ ಹೊಗಳುತ್ತಿರುವುದು ಯಾರಿಗೂ ಅರ್ಥವಾಗ್ಲಿಲ್ಲ!

ಸೂಪರ್ ಸ್ಟಾರ್ ರಜನಿಕಾಂತ್ ರವರಿಗೆ ಕಾಂಪ್ಲಿಮೆಂಟ್ (ಅಭಿನಂದನೆ) ಸಲ್ಲಿಸುವ ಸಲುವಾಗಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಂತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ವರ್ಮಾ ನೀಡಿದ ಸ್ಪಷ್ಟನೆ

''ನಾನು ರಜನಿಕಾಂತ್ ರವರಿಗೆ ಕಾಂಪ್ಲಿಮೆಂಟ್ (ಅಭಿನಂದನೆ) ಸಲ್ಲಿಸಿದ್ದು ರಜನಿಕಾಂತ್ ಅಭಿಮಾನಿಗಳಿಗೆ ಅರ್ಥವಾಗ್ಲಿಲ್ಲ'' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. [ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!]

ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಳ್ಳುವ ರಜನಿ

''ನಾನು ರಜನಿಗೆ ಅಭಿನಂದನೆ (ಕಾಂಪ್ಲಿಮೆಂಟ್) ಸಲ್ಲಿಸುತ್ತಿದ್ದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ರಜನಿ ಅಭಿಮಾನಿಗಳು, ರಜನಿ ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಳ್ಳುತ್ತಾರೆ ಅನ್ನೋದನ್ನ ಮೊದಲು ಅರಿಯಬೇಕು'' ಅಂತ ಟ್ವೀಟ್ ಮಾಡಿದ್ದಾರೆ.

ವಿಡಿಯೋ ಕೂಡ ಹಾಕಿದ್ದಾರೆ!

ತಮ್ಮ ಬಗ್ಗೆ ತಾವೇ ತಮಾಷೆ ಮಾಡಿಕೊಂಡ ರಜನಿಕಾಂತ್ ರವರ ವಿಡಿಯೋನ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

English summary
Soon after Rajinikanth's fan base hit back, Controversial Director Ram Gopal Varma has clarified that it was a compliment made to Super Star Rajinikanth over his looks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada