»   » ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪಂಡಿತ್ ಜೋಡಿ

ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪಂಡಿತ್ ಜೋಡಿ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಂಟು ತಿಂಗಳುಗಳಾಗಿವೆ ಅಷ್ಟೇ. ಹೀಗಿರುವಾಗ, ವರ್ಷದ ಸಂಭ್ರಮ ಎಲ್ಲಿಂದ ಬಂತು ಅಂತ ನೀವು ಯೋಚಿಸುತ್ತಿದ್ದರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯ ನಿಶ್ಚಿತಾರ್ಥ ಸಮಾರಂಭವನ್ನ ಸ್ವಲ್ಪ ನೆನಪಿಸಿಕೊಳ್ಳಿ...

ಕಳೆದ ವರ್ಷದ ಆಗಸ್ಟ್ 12 ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಎಂಗೇಜ್ ಆದರು. ಯಶ್-ರಾಧಿಕಾ ಪಂಡಿತ್ ಪ್ರೇಮಕ್ಕೆ ಗೋವಾದಲ್ಲಿ 'ನಿಶ್ಚಿತಾರ್ಥ'ದ ಮುದ್ರೆ ಬಿದ್ದು ಸರಿಯಾಗಿ ಒಂದು ವರ್ಷ ಕಳೆದಿದೆ.

Its been a year for Yash-Radhika Pandit engagement

ಚಿತ್ರಪಟ: ಎಂಗೇಜ್ ಆದ ಮಿ.ಅಂಡ್.ಮಿಸಸ್ ರಾಮಾಚಾರಿ

ಇದೇ ಸವಿನೆನಪನ್ನ ಸಾಮಾಜಿಕ ಜಾಲತಾಣಗಳ ಮೂಲಕ ನಟಿ ಹಾಗೂ ಯಶ್ ಮುದ್ದಿನ ಮಡದಿ ರಾಧಿಕಾ ಪಂಡಿತ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ನಿಶ್ಚಿತಾರ್ಥದ ವಜ್ರದುಂಗುರಕ್ಕೆ ಯಶ್ ಫೆವಿಕಾಲ್

''ಆಗಲೇ ವರ್ಷ ಕಳೆದಿದೆ. ಆ ನಗು, ಆ ಖುಷಿ, ಆ ಸಂಭ್ರಮ ಇನ್ನೂ ನನಗೆ ನೆನಪಿದೆ. ಗೋವಾ ಕಡಲಿನ ಅಲೆಗಳು ನನಗಿನ್ನೂ ಕೇಳಿಸುತ್ತಿದೆ. ಹೂವಿನ ಪರಿಮಳ, ಕೇಕ್ ನ ಸ್ವಾದ, ತಳಮಳಗೊಂಡ ಕ್ಷಣಗಳನ್ನ ನಾನಿನ್ನೂ ಮರೆತಿಲ್ಲ.'' ಎಂದು ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಖುಷಿ ಖುಷಿಯಾಗಿ ಇರುವ ರಾಕಿಂಗ್ ಜೋಡಿ ಹೀಗೆ ಸದಾ ಕಾಲ ಇರಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

English summary
Kannada Actress Radhika Pandit has taken her Facebook page to share joy on the occasion of her Engagement Anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada