»   »  ಹೊಸ ವರ್ಷಕ್ಕೆ ಶಿವರಾಜ್ ಕುಮಾರ್ v/s ಕೋಮಲ್?

ಹೊಸ ವರ್ಷಕ್ಕೆ ಶಿವರಾಜ್ ಕುಮಾರ್ v/s ಕೋಮಲ್?

Posted By:
Subscribe to Filmibeat Kannada

ಶುಕ್ರವಾರ ಬಂತೂಂದ್ರೆ ಸಿನಿ ಪ್ರೇಕ್ಷಕರಿಗೆ ಹಬ್ಬ. ಅದ್ರಲ್ಲೂ ಈ ಬಾರಿ ಶುಕ್ರವಾರದಂದೇ ಹೊಸ ವರ್ಷ ಬಂದಿರುವ ಕಾರಣ ಸಿನಿ ಪ್ರಿಯರಿಗೆ ಬೋನಸ್.

ಕನ್ನಡ ಸಿನಿ ರಸಿಕರಿಗೆ ಬಂಪರ್ ಉಡುಗೊರೆಯಾಗಿ ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ಹೊಸ ವರ್ಷದಂದು ತೆರೆಗೆ ಬರುವ ಸೂಚನೆ ನೀಡಿದೆ. [ಹೊಸ ವರ್ಷಕ್ಕೆ 'ಕಿಲ್ಲಿಂಗ್ ವೀರಪ್ಪನ್' ಗ್ರ್ಯಾಂಡ್ ರಿಲೀಸ್]


killing-veerappan

ಇದರೊಂದಿಗೆ ಕೋಮಲ್ ನಟನೆಯ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರ ಕೂಡ ತೆರೆಗೆ ಬರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾ ಜನವರಿ 1, 2016 ರಂದು ಬಿಡುಗಡೆ ಆಗಲಿದೆ. ['ಪುಟ್ಟಣ್ಣ' ಸಿನಿಮಾ ನೋಡಿ ಪುಟ್ಟಣ್ಣ ಕಣಗಾಲ್ ಕುಟುಂಬ ಹೇಳಿದ್ದೇನು?]


komal-kumar

ಈಗಾಗಲೇ ಸೆನ್ಸಾರ್ ಅಂಗಳದಿಂದ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಸಿನಿಮಾ ಕ್ಲೀನ್ ಚಿಟ್ ಪಡೆದದ್ದು ಆಗಿದೆ. ಅಲ್ಲಿಗೆ, ಹೊಸ ವರ್ಷದಂದು ಶಿವಣ್ಣ ಕಡೆಯಿಂದ Docudrama ಥ್ರಿಲ್ಲರ್ ಸಿನಿಮಾ ಬಂದ್ರೆ, ಕೋಮಲ್ ಕಡೆಯಿಂದ ಹಾರರ್ ಸಿನಿಮಾ ತೆರೆಮೇಲೆ ವಿಜೃಂಭಿಸಲಿದೆ. ಬಾಕ್ಸ್ ಆಫೀಸ್ ನಲ್ಲಿ ಇಬ್ಬರ ಪೈಕಿ ಯಾರು ಗೆದ್ದು ನಗೆ ಬೀರುತ್ತಾರೋ ನೋಡೋಣ...

English summary
Shiva Rajkumar starrer 'Killing Veerappan' and Komal Kumar starrer 'Kathe Chitrakathe Nirdheshana Puttanna' to release on January 1st 2016.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada