For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಡ್ರಗ್ಸ್ ನಂಟನ್ನು ಕಳಂಕ ಎಂದು ಭಾವಿಸಲಾಗದು: ನಟಿ ನಿವೇದಿತಾ

  |

  ಕನ್ನಡ ಚಿತ್ರೋದ್ಯಮದ ಕೆಲ ನಟ-ನಟಿಯರಿಗೆ ಡ್ರಗ್ಸ್ ನಂಟು ಇದೆ ಎಂಬ ಆರೋಪ ಹಿರಿದಾಗುತ್ತಾ ಸಾಗುತ್ತಿದೆ. ಮಾದಕ ದ್ರವ್ಯದ ನಂಟು ಕನ್ನಡ ಚಿತ್ರರಂಗಕ್ಕೆ ಅಂಟಿದ ಕಳಂಕ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಹಲವರು ಹಲವಾರು ಅಭಿಪ್ರಾಯಗಳನ್ನು ಹರಿಯಬಿಡುತ್ತಿದ್ದಾರೆ. ಕೆಲವರು ಚಿತ್ರೋದ್ಯಮಕ್ಕೆ ಡ್ರಗ್ಸ್ ನಂಟು ಸುಳ್ಳೆಂದು, ಕೆಲವರು ನಿಜವೆಂದು ವಾದ ಹರಿಬಿಡುತ್ತಿದ್ದಾರೆ.

  ಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹಕೊಕೇನ್, ಹೆರಾಯಿನ್ ಬಿಡಿ, ಗಾಂಜಾ ಕಾನೂನುಬದ್ಧಗೊಳಿಸಿ: ನಟಿ ನಿವೇದಿತಾ ಆಗ್ರಹ

  ಚಿತ್ರೋದ್ಯಮದಲ್ಲಿ ಸಕ್ರಿಯರಾಗಿರುವವರಲ್ಲೇ ಈ ವಿಷಯವಾಗಿ ಬಹು ಭಿನ್ನ ಅಭಿಪ್ರಾಯಗಳಿವೆ. ನಾವು ಕಾಪಿಟ್ಟಿದ್ದ ಚಿತ್ರರಂಗವನ್ನು ಹೊಸಬರು ಹಾಳುಮಾಡಿದರೆಂದು ಹಿರಿಯರು ಕಣ್ಣು ಕಿರಿದು ಮಾಡುತ್ತಿದ್ದಾರೆ.

  ಈ ನಡುವೆ ತಮ್ಮ ದಿಟ್ಟ ಪಾತ್ರಗಳಿಗೆ ಹೆಸರಾದ ಕೃಷ್ಣಸುಂದರಿ ನಿವೇದಿತಾ, ತುಸು ಭಿನ್ನವಾದ ವಾದ ಮುಂದಿಟ್ಟಿದ್ದಾರೆ. ಚಿತ್ರರಂಗಕ್ಕೆ ಡ್ರಗ್ಸ್ ನಂಟು ಇದೆಯೆಂದಾದರೂ ಅದನ್ನು ಕಳಂಕ ಎಂದು ಭಾವಿಸುವ ಅಗತ್ಯವಿಲ್ಲ, ನಾನಂತೂ ಅದನ್ನು ಕಳಂಕವೆಂದು ಒಪ್ಪಿಕೊಳ್ಳಲು ತಯಾರಿಲ್ಲ ಎಂದಿದ್ದಾರೆ.

  ಉದ್ಯಮಕ್ಕೆ ಕಳಂಕ ಎಂದುಕೊಳ್ಳುವುದಿಲ್ಲ: ನಿವೇದಿತಾ

  ಉದ್ಯಮಕ್ಕೆ ಕಳಂಕ ಎಂದುಕೊಳ್ಳುವುದಿಲ್ಲ: ನಿವೇದಿತಾ

  ಒಂದೊಮ್ಮೆ ಉದ್ಯಮದ ಕೆಲವರು ಮಾದಕ ವ್ಯಸನಿಗಳಾಗಿದ್ದರೂ ಸಹ ಅದನ್ನು ನಾನು ನಮ್ಮ ಉದ್ಯಮಕ್ಕೆ ಕಳಂಕ ಎಂದುಕೊಳ್ಳುವುದಿಲ್ಲ. ಪರಿವಾರದಲ್ಲಿ ತಪ್ಪು ದಾರಿ ಹಿಡಿದವನಿಗೆ ಶಿಕ್ಷೆ ಆಗಬೇಕು, ಆತ ತಪ್ಪು ತಿದ್ದಿಕೊಳ್ಳಲು ಅವಕಾಶ ಸಿಗಬೇಕು. ಹಾಗಾಗಿ ನಾನಿದನ್ನು ಕಳಂಕ ಎಂದುಕೊಳ್ಳುವುದಿಲ್ಲ ಎಂದರು ನಿವೇದಿತಾ.

  ಇಡೀಯ ಚಿತ್ರರಂಗವನ್ನೇ ದೂರುವುದು ಸೂಕ್ತವಲ್ಲ: ನಿವೇದಿತಾ

  ಇಡೀಯ ಚಿತ್ರರಂಗವನ್ನೇ ದೂರುವುದು ಸೂಕ್ತವಲ್ಲ: ನಿವೇದಿತಾ

  ಚಿತ್ರವೊಂದರ ಸೆಟ್‌ನಲ್ಲಿ ಹತ್ತು-ಹದಿನೈದು ನಟ-ನಟಿಯರಿದ್ದರೆ ನೂರಾರು ಮಂದಿ ಇತರರು ಇರುತ್ತಾರೆ. ಆದರೂ ಸಹ ನಟ-ನಟಿಯರನ್ನೇ 'ಚಿತ್ರರಂಗ' ಎಂದು ಬ್ರ್ಯಾಂಡ್ ಮಾಡಲಾಗಿದೆ. ಅಸಲಿಗೆ ಸಿನಿಮಾಕ್ಕೆ ದುಡಿಯುವ ಎಲ್ಲರೂ ಸೇರಿಯೇ ಚಿತ್ರೋದ್ಯಮ ಎಂಬುದಾಗಿದೆ. ಹೀಗಿರುವಾಗ ಯಾರೋ ಕೆಲವರು ಮಾಡಿರಬಹುದಾದ ತಪ್ಪಿಗೆ ಇಡೀಯ ಚಿತ್ರೋದ್ಯಮವನ್ನೇ ದೋಷಿ ಸ್ಥಾನದಲ್ಲಿ ನಿಲ್ಲಿಸುವುದು ಸೂಕ್ತವಲ್ಲ ಎಂದರು ನಟಿ ನಿವೇದಿತಾ.

  ತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾತುಳಸಿಯಂತೆ ಗಾಂಜಾ ಸಹ ಶ್ರೇಷ್ಠ: ನಟಿ ನಿವೇದಿತಾ

  ಮಾದಕ ವ್ಯಸನ ಎಲ್ಲಾ ಕ್ಷೇತ್ರಗಳಲ್ಲೂ ಇದೆ: ನಿವೇದಿತಾ

  ಮಾದಕ ವ್ಯಸನ ಎಲ್ಲಾ ಕ್ಷೇತ್ರಗಳಲ್ಲೂ ಇದೆ: ನಿವೇದಿತಾ

  ಸ್ಯಾಂಡಲ್‌ವುಡ್‌ನ ಕೆಲವರಿಗೆ ಚಟವಿರುವ ಸಾಧ್ಯತೆ ಇದೆ. ಆದರೆ ಆ ಚಟವಂತ ಕೆಲವರು ಇಡೀಯ ಸಿನಿಮಾ ಉದ್ಯಮವನ್ನು ಪ್ರತಿನಿಧಿಸುವುದಿಲ್ಲ. ಮಾದಕ ವ್ಯಸನಿಗಳು ಎಲ್ಲಾ ಕ್ಷೇತ್ರದಲ್ಲಿಯೂ ಇದ್ದಾರೆ. ಆದರೆ ಪ್ರಸ್ತುತ ಸಿನಿಮಾ ಉದ್ಯಮದ ಕಡೆಗೆ ಅದರಲ್ಲಿಯೂ ನಟ-ನಟಿಯರ ಕಡೆಗೆ ಮಾತ್ರವೇ 'ಫೋಕಸ್ ಶಿಫ್ಟ್' ಆಗಿದೆ ಎಂದರು ನಿವೇದಿತಾ.

  ನಟ-ನಟಿಯರು ಡ್ರಗ್ಸ್ ನನ್ನ ಗಮನಕ್ಕೆ ಬಂದಿಲ್ಲ: ನಿವೇದಿತಾ

  ನಟ-ನಟಿಯರು ಡ್ರಗ್ಸ್ ನನ್ನ ಗಮನಕ್ಕೆ ಬಂದಿಲ್ಲ: ನಿವೇದಿತಾ

  ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುವುದು ವೈಯಕ್ತಿಕವಾಗಿ ನನ್ನ ಗಮನಕ್ಕೆ ಬಂದಿಲ್ಲ. ನಾನು ಹೆಚ್ಚಿಗೆ ಯಾವ ಪಾರ್ಟಿಗಳಿಗೆ ಹೋಗುವುದಿಲ್ಲ. ಆರಂಭದಲ್ಲಿ ಕೆಲವು ಪೇಜ್‌ 3 ಪಾರ್ಟಿಗಳಿಗೆ ಹೋಗಿದ್ದಿದೆ. ಅಲ್ಲಿ ಸಿನಿಮಾದವರು ಮಾತ್ರವೇ ಇರುವುದಿಲ್ಲ, ಪೊಲೀಸರು, ರಾಜಕಾರಣಿಗಳು ಎಲ್ಲ ಕ್ಷೇತ್ರದವರೂ ಇರುತ್ತಾರೆ. ನನ್ನ ಪರಿಚಯದವರು ಮಾದಕ ವ್ಯಸನಿಗಳಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದರು ನಿವೇದಿತಾ.

  English summary
  Actress Nivedhitha said its unfair to blame Kannada movie industry for some peoples mistake. She talks about drug mafia relation to Kannada movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X