For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಕೊಂಡ ಜಗ್ಗೇಶ್ ಅನ್ನು ಅರಸಿ ಬಂದ ಗುರು ರಾಯರು!

  |

  ಸಿನಿಮಾಗಳಲ್ಲಿ ಹಾಸ್ಯ ದೃಶ್ಯಗಳಲ್ಲಿ ನಟಿಸುತ್ತಾ ಜನರನ್ನು ರಂಜಿಸುವ ನಟ ಜಗ್ಗೇಶ್ ಅಧ್ಯಾತ್ಮದ ವಿಷಯದಲ್ಲಿ ಬಹಳ ಗಂಭೀರ. ಗುರು ರಾಯರನ್ನು ಅಪಾರವಾಗಿ ನಂಬುವ, ರಾಯರಿಗೆ ನಡೆದುಕೊಳ್ಳುವ ಜಗ್ಗೇಶ್, ರಾಯರ ಬಗ್ಗೆ ದಿನಕ್ಕೆ ಕನಿಷ್ಟ ಒಂದಾದರೂ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

  ತಮ್ಮ ಜೀವನದಲ್ಲಿ ಗುರು ರಾಯರ ಪವಾಡ ಹಲವು ಬಾರಿ ಆಗಿದೆ ಎಂದು ಈ ಮುಂಚೆ ಹಲವು ಬಾರಿ ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ. ತಾವು ನಟನಾಗಿ ಇಷ್ಟು ದೊಡ್ಡ ಹೆಸರು, ಆಸ್ತಿ ಗಳಿಸುವುದರ ಹಿಂದೆ ತಮ್ಮ ತಾಯಿ ಹಾಗೂ ರಾಯರ ಆಶೀರ್ವಾದವೇ ಸಾಕ್ಷಿ ಎಂಬುದನ್ನು ಜಗ್ಗೇಶ್ ಆಗಾಗ್ಗೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

  ರಾಯರ ಮಹಿಮೆಯನ್ನು ಪರಿ-ಪರಿಯಾಗಿ ಹಲವು ಬಾರಿ ಹೇಳಿರುವ ಜಗ್ಗೇಶ್, ರಾಯರ ಮೇಲೆ ಭಕ್ತಿ ಇರುವವರನ್ನು ರಾಯರೇ ಅರಸಿ ಬರುತ್ತಾರೆ ಎಂಬುದನ್ನು ಇದೀಗ ತಮ್ಮದೇ ದೈನಂದಿನ ಜೀವನದಲ್ಲಿ ನಡೆದ ಘಟನೆಯನ್ನು ಉದಾಹರಣೆಯಾಗಿ ಬಳಸಿ ಹೇಳಿದ್ದಾರೆ.

  ಹೊಸ ಕಾರು ಬುಕ್ ಮಾಡಿರುವ ಜಗ್ಗೇಶ್

  ಹೊಸ ಕಾರು ಬುಕ್ ಮಾಡಿರುವ ಜಗ್ಗೇಶ್

  'ರಾಘವೇಂದ್ರ ಸ್ಟೋರ್ಸ್' ಸಿನಿಮಾದ ಚಿತ್ರೀಕರಣ ಮುಗಿಸಿರುವ ನಟ ಜಗ್ಗೇಶ್, ಆ ಸಿನಿಮಾದ ನಿರ್ದೇಶಕ ಸಂತೋಶ್ ಆನಂದ್ ರಾಮ್ ಒತ್ತಾಯಕ್ಕೆ ಮಣಿದು ಬಿಎಂಡಬ್ಲು-ಎಕ್ಸ್ 5 ಕಾರೊಂದನ್ನು ಬುಕ್ ಮಾಡಿದ್ದಾರೆ. ರಾಯರನ್ನು ಅಪಾರವಾಗಿ ನಂಬುವ ಜಗ್ಗೇಶ್ ತಮ್ಮ ಎಲ್ಲ ಕಾರುಗಳಲ್ಲಿಯೂ ರಾಯರ ಪುಟ್ಟ ವಿಗ್ರಹ ತಪ್ಪದೇ ಇಡುತ್ತಾರೆ. ಹೊಸ ಕಾರಿಗೂ ರಾಯರ ವಿಗ್ರಹ ಇಡುವ ನಿಶ್ಚಯ ಮಾಡಿ ಅದನ್ನು ತರಲು ಮಂತ್ರಾಲಯಕ್ಕೆ ಹೋಗಿದ್ದಾರೆ.

  ಪಾದುಕೆ ತಂದ ಜಗ್ಗೇಶ್

  ಪಾದುಕೆ ತಂದ ಜಗ್ಗೇಶ್

  ಮಂತ್ರಾಲಯದಲ್ಲಿ ರಾಯರ ಪಾದುಕೆಯ ಮಾದರಿಯನ್ನು ಕೊಂಡು ಅದನ್ನು ಬೃಂದಾವನದಲ್ಲಿ ಇಟ್ಟು ತಂದಿದ್ದಾರೆ. ಕಾರು ಡೆಲಿವರಿ ಬಂದಾಗ ಅದರಲ್ಲಿ ಪಾದುಕೆಗಳನ್ನು ಇಡಬೇಕು ಎಂಬುದು ಜಗ್ಗೇಶ್ ಯೋಜನೆಯಾಗಿತ್ತು. ಆದರೆ ಆ ನಂತರ ಅದೇಕೋ ಜಗ್ಗೇಶ್‌ಗೆ ಅದು ಸರಿಬಂದಿಲ್ಲ. ವಿಗ್ರಹವೇ ಇಟ್ಟರೆ ಸೂಕ್ತ ಎನಿಸಿದೆ. ಕಾರು ಡೆಲಿವರಿ ತೆಗೆದುಕೊಂಡ ಬಳಿಕ ಹೊಸದೊಂದು ಪುಟ್ಟ ವಿಗ್ರಹ ಖರೀದಿಸಿ ಇಟ್ಟರಾಯಿತು ಎಂದುಕೊಂಡಿದ್ದಾರೆ. ಆದರೆ ಆಗಲೇ ನಡೆದಿದೆ ಒಂದು ಅಚ್ಚರಿ.

  ಉಡುಗೊರೆ ಕೊಟ್ಟ ಗೆಳೆಯ: ಜಗ್ಗೇಶ್

  ಉಡುಗೊರೆ ಕೊಟ್ಟ ಗೆಳೆಯ: ಜಗ್ಗೇಶ್

  ಜಗ್ಗೇಶ್, ರಾಯರ ವಿಗ್ರಹ ಕೊಳ್ಳಬೇಕು ಎಂದುಕೊಂಡ ಬಳಿಕ ಅವರ ಆತ್ಮೀಯ ಗೆಳೆಯ ವೈದ್ಯ ಸುನಿಲ್ ಜಗ್ಗೇಶ್ ಭೇಟಿಗೆ ಬಂದಿದ್ದಾರೆ. ಜಗ್ಗೇಶ್‌ಗಾಗಿ ಕೈಯಲ್ಲಿ ತಯಾರಿಸಿದ ಬೆಳ್ಳಿ ರಾಯರ ಪ್ರತಿಮೆಯನ್ನು ಉಡುಗೊರೆಯಾಗಿ ಜಗ್ಗೇಶ್‌ಗೆ ನೀಡಿದ್ದಾರೆ. ಜಗ್ಗೇಶ್ ಅಂದುಕೊಂಡ ಮಾದರಿಯಲ್ಲಿಯೇ ಆ ರಾಯರ ಪುಟ್ಟ ಮೂರ್ತಿ ಇದೆ.

  ರಾಯರು ಎಂಥ ಕರುಣಾಮಯಿ: ಜಗ್ಗೇಶ್

  ರಾಯರು ಎಂಥ ಕರುಣಾಮಯಿ: ಜಗ್ಗೇಶ್

  ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ''ರಾಯರು ಎಂಥ ಕರುಣಾಮಯಿ ತಮ್ಮ ಭಕ್ತರು ಮನಸಲ್ಲಿ ಅಂದುಕೊಂಡದ್ದು ನೆರವೇರಿಸಿಬಿಡುತ್ತಾರೆ. ನಾನು ಧನ್ಯ ಅನ್ನಿಸಿತು. ಆಧ್ಯಾತ್ಮಿಕ ಮಾರ್ಗ ಅರಿವಿದ್ದವರಿಗೆ ಮಾತ್ರ ಅರಿವಾಗೋದು ರಾಯರ ಪವಾಡ ರಾಯರ ಭಕ್ತರ ಹೃದಯಕ್ಕೆ ತಿಳಿಸುವ ಮನಸಾಯಿತು ತಿಳಿಸಿ ಮನಸ್ಸು ಹಗುರಮಾಡಿಕೊಂಡೆ. "ನಂಬಿಕೆ ಭಕ್ತಿಯಿಂದ ಕೂಗಿದರೆ ರಾಯರು ನಮ್ಮ ನಿಮ್ಮ ಗಮನಿಸುತ್ತಾರೆ ನಮ್ಮಜೊತೆ ನಿಲ್ಲುತ್ತಾರೆ" ಎಂದಿದ್ದಾರೆ.

  ಜಗ್ಗೇಶ್ ಖರೀದಿಸಲಿರುವ ಕಾರಿನ ಬೆಲೆ ಎಷ್ಟು?

  ಜಗ್ಗೇಶ್ ಖರೀದಿಸಲಿರುವ ಕಾರಿನ ಬೆಲೆ ಎಷ್ಟು?

  ಜಗ್ಗೇಶ್ ಖರೀದಿಸಲಿರುವ ಬಿಎಂಡಬ್ಲು ಎಕ್ಸ್‌ 5 ಕಾರಿನ ಎಕ್ಸ್ ಶೋರೂಂ ಬೆಲೆಯೇ 80 ರಿಂದ 90 ಲಕ್ಷ ಇದೆ. ರೋಡ್ ಟ್ಯಾಕ್ಸ್ ಇತರೆಗಳು ಸೇರಿ ಕಾರಿನ ಒಟ್ಟು ಬೆಲೆ 1.10 ಕೋಟಿ ದಾಟಲಿದೆ. ಈಗಾಗಲೇ ಕೆಲವು ಒಳ್ಳೆಯ ಕಾರುಗಳುಳ್ಳ ಜಗ್ಗೇಶ್ ಇದೀಗ ತಮ್ಮ ಕಾರಿನ ಕಲೆಕ್ಷನ್‌ಗೆ ಸ್ಟೈಲಿಶ್ ಹಾಗೂ ಶಕ್ತಿಶಾಲಿ ಬಿಎಂಡಬ್ಲು ಎಕ್ಸ್ 5 ಅನ್ನು ಸೇರಿಸಿಕೊಳ್ಳುತ್ತಿದ್ದಾರೆ.

  English summary
  Jaggesh purchasing a new car. In that backdrop he wrote about Guru Raghavendra Swamy miracle.
  Saturday, May 7, 2022, 18:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X