Just In
Don't Miss!
- News
ಜಗತ್ತಿನ ನಂ. 1 ರಾಷ್ಟ್ರಕ್ಕೆ ‘ಕೊರೊನಾ’ 4ನೇ ಅಲೆ ಆತಂಕ!
- Finance
ಚಿನ್ನದ ಬೆಲೆ ಏರಿಕೆ: ಗರಿಷ್ಠ ಮಟ್ಟಕ್ಕಿಂತ 9,500 ರೂಪಾಯಿ ಕಡಿಮೆ
- Sports
ಐಪಿಎಲ್ 2021: ನೀತಿ ಸಂಹಿತೆ ಉಲ್ಲಂಘಿಸಿ ಖಂಡನೆಗೆ ಒಳಗಾದ ವಿರಾಟ್ ಕೊಹ್ಲಿ
- Automobiles
ಬಿಡುಗಡೆಗೂ ಮುನ್ನವೇ ಎಪ್ರಿಲಿಯಾ ಎಸ್ಎಕ್ಸ್ಆರ್ 125 ಬೆಲೆ ಮಾಹಿತಿ ಬಹಿರಂಗ
- Lifestyle
ಈ ವಿಧಾನ ಅನುಸರಿಸಿದರೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತೆ
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಗ್ಗೇಶ್ ನಟನಾಗುವ ಬಗ್ಗೆ ಭವಿಷ್ಯ ನುಡಿದಿದ್ದ ಮೇಷ್ಟ್ರು ಇನ್ನಿಲ್ಲ
ಜಗ್ಗೇಶ್ ಮುಂದೊಂದು ದಿನ ಕಲಾವಿದರಾಗುತ್ತಾರೆ ಎಂದು ಎಳವೆಯಲ್ಲಿಯೇ ಭವಿಷ್ಯ ನುಡಿದಿದ್ದ ಜಗ್ಗೇಶ್ ಅವರ ಪ್ರೀತಿಯ ಶಿಕ್ಷಕ ಎಂ.ರಾಮಮೂರ್ತಿ ಅವರು ನಿಧನ ಹೊಂದಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದು, ನೆಚ್ಚಿನ ಶಿಕ್ಷಕ ಅಗಲಿದ್ದಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
''ನನಗೆ ಗಣಿತ ವಿಜ್ಞಾನ ಪಾಠ ಮಾಡಿ ಹಾಗು ಒಂದಲ್ಲಾ ಒಂದುದಿನ ಇವನು ಕಲಾವಿದ ಆಗುತ್ತಾನೆ ಎಂದು ನಾನು 8ನೆ ಕ್ಲಾಸಿನಲ್ಲಿ ಇರಬೇಕಾದರೆ ಭವಿಷ್ಯ ನುಡಿದಿದ್ದ ಗುರುಗಳು ಮಾರ್ಚ್ 18 ರಂದು ಶಿವನಲ್ಲಿ ಲೀನವಾದರು'' ಎಂದಿದ್ದಾರೆ ಜಗ್ಗೇಶ್.
'ಬಿಪಿಐಎಚ್‌ಎಸ್ ಶಾಲೆ ಮಲ್ಲೇಶ್ವರದ ಹೆಮ್ಮೆಯ ಪ್ರಾಧ್ಯಾಪಕರ ಆತ್ಮಕ್ಕೆ ಶಾಂತಿ ಕೋರುವ ನಿಮ್ಮ ತುಂಟ ವಿದ್ಯಾರ್ಥಿ ಈಶ್ವರಗೌಡ' ಎಂದು ಅಗಲಿದ ಶಿಕ್ಷಕನ ಆತ್ಮಕ್ಕೆ ಶಾಂತಿ ಕೋರಿದ್ದಾರೆ ಜಗ್ಗೇಶ್.
ಬಿಪಿ ಇಂಡಿಯನ್ ಹೈ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ರಾಮಮೂರ್ತಿ ಅವರು ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧನೆ ಮಾಡುತ್ತಿದ್ದರು. ವಿದ್ಯಾರ್ಥಿಗಳ ಮೆಚ್ಚಿನ ಎಂಆರ್‌ಎಂ ಮೇಷ್ಟ್ರಾಗಿ ಇವರು ಗುರುತಿಸಿಕೊಂಡಿದ್ದರು.
ರಾಮಮೂರ್ತಿ ಅವರು ಅಗಲಿದ ಬಗ್ಗೆ ಅವರ ಮಗ ನಂದ ಗೋಪಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, '60 ವರ್ಷದ ಅವರ ಶಿಕ್ಷಕ ಸೇವಾ ಜೀವನದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಬೋಧಿಸಿದ್ದಾರೆ. ರಾಮಮೂರ್ತಿ ಅವರು 87 ವರ್ಷ ಸಾರ್ಥಕ ಜೀವನ ನಡೆಸಿ ವಿಧಿವಶರಾಗಿದ್ದಾರೆ' ಎಂದಿದ್ದಾರೆ.