For Quick Alerts
  ALLOW NOTIFICATIONS  
  For Daily Alerts

  ಹಳೆ ಫೋಟೋ ಹಂಚಿಕೊಂಡು ಪತ್ನಿ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

  |

  ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬ. ಈ ವಿಶೇಷ ದಿನದಂದು ತಮ್ಮ ಪತ್ನಿಗೆ ಶುಭಕೋರಿರುವ ಜಗ್ಗೇಶ್ ಹಳೆಯ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  37 ವರ್ಷಗಳ ಹಿಂದೆ ಪರಿಮಳ ಅವರನ್ನು ಭೇಟಿ ಮಾಡಿದ ಸಮಯದ ಫೋಟೋ ಹಂಚಿಕೊಂಡು ನೆನಪು ಮೆಲುಕು ಹಾಕಿದ್ದಾರೆ.

  ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು ಮಾರ್ಚ್ 22: ಏನದು?ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು ಮಾರ್ಚ್ 22: ಏನದು?

  ''ಪರಿಮಳ ಆಗ ಸಿಕ್ಕಾಗ 15ನೆ ವರ್ಷದ ಹುಟ್ಟುಹಬ್ಬ.!

  ಇಂದು ಆಕೆಗೆ 52ನೆ ವರ್ಷದ ಹುಟ್ಟುಹಬ್ಬ.!

  ಹುಟ್ಟುಹಬ್ಬ ಶುಭಾಶಯ ಆತ್ಮೀಯಳಿಗೆ. ಶುಭದಿನ ಶುಭೋದಯ.....'' ಎಂದು ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

  ಅಂದ್ರೆ, ಜಗ್ಗೇಶ್ ಅವರು ಪರಿಮಳ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ 15 ವರ್ಷ ವಯಸ್ಸು. ಇಂದು 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ, ಜಗ್ಗೇಶ್ ಮತ್ತು ಪರಿಮಳ ಅವರದ್ದು ಪ್ರೇಮ ವಿವಾಹ. ಪರಿಮಳ ಅವರಿಗೆ ಹದಿನೆಂಟು ವರ್ಷ ತುಂಬುವ ಮೊದಲೇ ಜಗ್ಗೇಶ್ ಅವರು ವಿವಾಹವಾಗಿದ್ದರು. ಇವರಿಬ್ಬರ ದಾಂಪತ್ಯ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇತ್ಯಾರ್ಥ ಆಗಿತ್ತು ಎನ್ನುವುದು ಸ್ಮರಿಸಬಹುದು.

  English summary
  Kannada actor Jaggesh shares a throwback picture to wish wife parimala on her 52nd birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X