ಜಗ್ಗೇಶ್ 10ನೇ ಕ್ಲಾಸ್ ಅಂಕಪಟ್ಟಿ: ಬೂಟಿನಲ್ಲಿ ಹೊಡೆದಿದ್ದರಂತೆ ತಂದೆ, ಆತ್ಮಹತ್ಯೆಗೆ ಯತ್ನ!

ಕನ್ನಡದ ಹಿರಿಯ ನಟ ಜಗ್ಗೇಶ್ ಅವರ ತಮ್ಮ 10ನೇ ತರಗತಿಯ ಅಂಕಪಟ್ಟಿ ಹಂಚಿಕೊಂಡಿದ್ದಾರೆ. 1979ರಲ್ಲಿ ಜಗ್ಗೇಶ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಎರಡನೇ ದರ್ಜೆಯಲ್ಲಿ ಪಾಸ್ ಆಗಿದ್ದಾರೆ. ಜಗ್ಗೇಶ್ ತೆಗೆದುಕೊಂಡಿದ್ದ ಈ ಅಂಕಗಳಿಗೆ ಅವರ ತಂದೆ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರಂತೆ. ಅದಕ್ಕೆ ಮನನೊಂದು ಜಗ್ಗೇಶ್ ಅವರು ಆತ್ಮಹತ್ಯಗೆ ಯತ್ನಿಸಿದ್ದರು ಎಂಬ ವಿಚಾರವನ್ನು ಖುದ್ದು ಅವರೇ ಬಹಿರಂಗಪಡಿಸಿದ್ದಾರೆ.

ಪ್ರತಿ ವಿಚಾರದಲ್ಲೂ ಕನ್ನಡ ಅಭಿಮಾನ ಸಾರುವ ಜಗ್ಗೇಶ್ ಅವರು 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲೇ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ ಎನ್ನುವುದು ವಿಶೇಷ. ತೃತೀಯ ಭಾಷೆ ಹಿಂದಿಯಲ್ಲಿ ಕಡಿಮೆ ಅಂಕ ಗಳಿಸಿಕೊಂಡಿದ್ದಾರೆ. ಹಾಗಾದ್ರೆ, ಜಗ್ಗೇಶ್ ಅವರ ಎಸ್‌ಎಸ್‌ಎಲ್‌ಸಿ ಅಂಕಗಳು ಎಷ್ಟು? ಮುಂದೆ ಓದಿ...

600ಕ್ಕೆ 342 ಅಂಕ

600ಕ್ಕೆ 342 ಅಂಕ

ಇಂದಿನ ಜಗ್ಗೇಶ್ ಅವರ ಮೂಲ ಹೆಸರು ಈಶ್ವರ. 1979ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದಾರೆ. 10ನೇ ತರಗತಿಯಲ್ಲಿ ಒಟ್ಟು 600 ಅಂಕಗಳಿಗೆ ಪರೀಕ್ಷೆ ಬರೆದಿದ್ದು. 600ಕ್ಕೆ 342 ಅಂಕ ಪಡೆದು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದರು. ಅಂದ್ಹಾಗೆ, ಜಗ್ಗೇಶ್ ಶೇರ್ ಮಾಡಿರುವ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಸೆಕೆಂಡ್ ಕಾಪಿ ಎನ್ನುವುದು ಗಮನಿಸಬೇಕು.

ಅಂಕಗಳ ವಿವರ

ಅಂಕಗಳ ವಿವರ

ಪ್ರಥಮ ಭಾಷೆ - 150ಕ್ಕೆ 101 ಅಂಕ

ದ್ವಿತೀಯ ಭಾಷೆ - 100ಕ್ಕೆ 54 ಅಂಕ

ತೃತೀಯ ಭಾಷೆ - 50ಕ್ಕೆ 20 ಅಂಕ

ಗಣಿತ - 100ಕ್ಕೆ 57 ಅಂಕ

ವಿಜ್ಞಾನ - 100ಕ್ಕೆ 52 ಅಂಕ

ಸಮಾಜ ವಿಜ್ಞಾನ - 100ಕ್ಕೆ 58 ಅಂಕ

ನಡುರಸ್ತೆಯಲ್ಲಿ ಹೊಡೆದಿದ್ದರು

ನಡುರಸ್ತೆಯಲ್ಲಿ ಹೊಡೆದಿದ್ದರು

ಅಂಕಪಟ್ಟಿ ಹಂಚಿಕೊಂಡ ಜಗ್ಗೇಶ್ ''ಇಂದಿನ ಜಗ್ಗೇಶ ಶಾಲೆಯ ಈಶ್ವರ. ಭಾಷಾಭಿಮಾನ ಬಾಲ್ಯದಿಂದ ಬಂದಾಗ ಮಾತ್ರ ಅವನು ಸಾಯುವವರೆಗೆ ಕನ್ನಡ ಹೃದಯ ಬಡಿತದ ಜೊತೆಯಲ್ಲೆ ಉಳಿಯುತ್ತದೆ. ಈ ಅಂಕೆಗೆ ಅಪ್ಪ ನಡುರೋಡಲ್ಲಿ ಬೂಟಿನಲ್ಲಿ ಹೊಡೆದಿದ್ದರು. ಮನನೊಂದು ಆತ್ಮಹತ್ಯಗೆ ಯತ್ನಿಸಿದ್ದೆ. ಒಂದು ವೇಳೆ ಹೋಗಿದ್ದರೆ ಇಂದು ಜಗ್ಗೇಶ ಸತ್ತವರಲ್ಲಿ ಒಬ್ಬ. ಮಕ್ಕಳ ತಂದೆ ತಾಯಿ ಹುರಿದುಂಬಿಸಿ. ಸಾಧಕ ಹುಟ್ಟುತ್ತಾನೆ' ಎಂದು ಟ್ವೀಟ್ ಮಾಡಿದ್ದಾರೆ.

Recommended Video

ಪ್ರಿಯಾಮಣಿ ಮದುವೆ ಕಾನೂನುಬಾಹಿರ ಎಂದ ಮುಸ್ತಫಾ ರಾಜ್ ಮೊದಲ ಪತ್ನಿ
8 ರೂ ಶುಲ್ಕ, 2 ಸೆಟ್ ಯೂನಿಫಾರಂ

8 ರೂ ಶುಲ್ಕ, 2 ಸೆಟ್ ಯೂನಿಫಾರಂ

''ಆಗ ಶಾಲೆಯ ಶುಲ್ಕ 8 ರೂಪಾಯಿ. 2 ಸೆಟ್ ಯೂನಿಫಾರಂ. ಯಾವುದೇ ಟ್ಯೂಷನ್ ಇರ್ತಿರಲಿಲ್ಲ. ರಾಗಿ ಮುದ್ದೆ ತಿಂಡಿ. ಅಮ್ಮನ ಪ್ರೀತಿ ಮತ್ತು ಆರೈಕೆ. ನನ್ನ ಇಂದಿನ ಸಾಧನೆಗೆ ಪತ್ನಿಯ ಬೆಂಬಲ ಹಾಗೂ ರಾಯರ ಆಶೀರ್ವಾದ. ಮನಸಿದ್ದರೆ ಮಾರ್ಗ'' ಎಂದು ಜಗ್ಗೇಶ್ ಹೇಳಿದ್ದಾರೆ.

More from Filmibeat

English summary
Kannada actor Jaggesh shares his SSLC marks card; he passes in second class in board exams.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X