»   » 'ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!

'ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್, ಡಾ.ರಾಜ್ ಕುಮಾರ್ ಅವರ ಬಹುದೊಡ್ಡ ಅಭಿಮಾನಿ. ಇದರಲ್ಲಿ ಎರಡು ಮಾತಿಲ್ಲ. ಯಾಕೆ ಈ ಮಾತು ಹೇಳಿದ್ವಿ ಅಂದ್ರೆ, ಪುನೀತ್ ರಾಜ್ ಕುಮಾರ್ ರೂಪದಲ್ಲಿ ರಾಜ್ ಕುಮಾರ್ ಅವರನ್ನ ಕಂಡರಂತೆ ನಟ ಜಗ್ಗೇಶ್.

ಇದಕ್ಕೆ ಲೇಟೆಸ್ಟ್ ಸಾಕ್ಷಿಯಾಗಿದ್ದು, ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ. ಹೌದು, ಇತ್ತೀಚೆಗಷ್ಟೆ, 'ರಾಜಕುಮಾರ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಜಗ್ಗೇಶ್, 'ರಾಜಕುಮಾರ' ಹೇಗೆ ಮೂಡಿಬಂದಿದೆ ಎಂಬುದನ್ನ ತಮ್ಮದೇ ಆದ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]


Jaggesh Talks About Puneeth RajKumar's Acting In Rajakumara

ಅಂದ್ಹಾಗೆ, 'ರಾಜಕುಮಾರ' ಚಿತ್ರದ ಡಬ್ಬಿಂಗ್ ನಡೆಯುವ ವೇಳೆ ಭೇಟಿ ನೀಡಿದ್ದ ನಟ ಜಗ್ಗೇಶ್, 'ರಾಜಕುಮಾರ' ಚಿತ್ರದ ಇಂಟರ್ ವಲ್ ದೃಶ್ಯವನ್ನ ನೋಡಿದರಂತೆ. ಈ ದೃಶ್ಯವನ್ನ ನೋಡಿ ಜಗ್ಗೇಶ್ ಅವರು ರೋಮಾಂಚನಗೊಂಡರಂತೆ. ಯಾಕಂದ್ರೆ, ಈ ದೃಶ್ಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ರೂಪದಲ್ಲಿ, ಡಾ ರಾಜ್ ಕುಮಾರ್ ಅವರೇ ವಾಪಸ್ ಬಂದಂತೆ ಭಾಸವಾಯಿತ್ತಂತೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]


Jaggesh Talks About Puneeth RajKumar's Acting In Rajakumara

ಹಾಗಾಗಿ, ಈ ಚಿತ್ರ ಪುನೀತ್ ರಾಜ್ ಕುಮಾರ್ ಅವರಿಗೆ ಮೈಲಿಗಲ್ಲು ಎಂದು ಹೇಳಿದ್ದಾರೆ ನವರಸ ನಾಯಕ ಜಗ್ಗೇಶ್. ಈ ಸಂತಸದ ವಿಚಾರವನ್ನ ಜಗ್ಗೇಶ್ ಅವರು ತಮ್ಮ ಟ್ವಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.


'ರಾಜಕುಮಾರ' ಚಿತ್ರ ಸದ್ಯ ಚಿತ್ರೀಕರಣ ಮುಗಿಸಿದ್ದು, ಪೊಸ್ಟ್ ಪ್ರೊಡಕ್ಷನ್ ಕಲೆಸದಲ್ಲಿ ತೊಡಗಿಸಿಕೊಂಡಿದೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುಭಾಷಾ ನಟಿ ಪ್ರಿಯಾ ಆನಂದ್ ನಾಯಕಿಯಾಗಿದ್ದಾರೆ.

English summary
Jaggesh Talks About Puneeth RajKumar's Acting In Rajakumara. Recently Jaggesh Visit to Dubbing Studio of 'Rajakumara'. and He Watch the Interval Scene in the Movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X