For Quick Alerts
  ALLOW NOTIFICATIONS  
  For Daily Alerts

  ಕಾಮನ್ ಡಿಪಿ ಹಂಚಿಕೊಂಡು ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಕಾಮನ್ ಡಿಪಿ ಬಿಡುಗಡೆಯಾಗಿದ್ದು, ಹಿರಿಯ ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡಿಪಿ ಹಂಚಿಕೊಂಡಿದ್ದಾರೆ. ಡಿ ಬಾಸ್ ಬರ್ತಡೇ ಡಿಪಿ ಶೇರ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

  ದರ್ಶನ್ ಫೋಟೊ ಹಾಕಿ ಮತ್ತೊಂದು ಟ್ವೀಟ್ ಮಾಡಿದ ಜಗ್ಗೇಶ್ | Filmibeat Kannada

  ದರ್ಶನ್ ಹುಡುಗರ ಕುರಿತು ನಟ ಜಗ್ಗೇಶ್ ಹೀಯಾಳಿಸಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ವೊಂದು ವೈರಲ್ ಆಗಿತ್ತು. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಕೆಲವು ದರ್ಶನ್ ಅಭಿಮಾನಿಗಳು ಹಿರಿಯ ನಟನ ವಿರುದ್ಧ ಹರಿಹಾಯ್ದಿದ್ದರು.

  ಈ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿದ್ದ ಜಗ್ಗೇಶ್, ''ಸಿನಿಮಾ ಪ್ರಚಾರಕ್ಕಾಗಿ ಚಿಕ್ಕ ಹುಡುಗರು ಇಂತಹ ಕೆಲಸ ಮಾಡಿದ್ದಾರೆ'' ಎಂದಿದ್ದರು. ಜಗ್ಗೇಶ್ ಅವರ ಪರವಾಗಿ ಕೆಲವು ದರ್ಶನ್ ಅಭಿಮಾನಿಗಳು ಬೆಂಬಲ ಸೂಚಿಸಿ, ಡಿ ಬಾಸ್ ಜೊತೆ ಜಗ್ಗೇಶ್ ಅವರ ಆತ್ಮೀಯತೆ ಸಹಿಸದ ಕೆಲವರು ಇಂತಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

  ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಇಂತಹ ಘಟನೆಗಳು ಕೆಲವೊಮ್ಮೆ ವೈಯಕ್ತಿಕವಾಗಿ ಕಲಾವಿದರ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ದರ್ಶನ್-ಜಗ್ಗೇಶ್ ವಿಚಾರದಲ್ಲಿ ಅಂತಹದ್ದು ಕಂಡಿಲ್ಲ.

  ದರ್ಶನ್ ಅವರ ಬಗ್ಗೆ ಜಗ್ಗೇಶ್ ಗೌರವ ಹೊಂದಿದ್ದಾರೆ. ಜಗ್ಗೇಶ್ ಅವರ ಮೇಲೆಯೂ ಡಿ ಬಾಸ್ ಅಷ್ಟೇ ಗೌರವ ತೋರುತ್ತಾರೆ. ಇವರಿಬ್ಬರ ನಡುವಿನ ಸ್ನೇಹ-ಸಂಬಂಧ ಚೆನ್ನಾಗಿಯೇ ಇದೆ. ಇದೀಗ, ದರ್ಶನ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಕಾಮನ್ ಡಿಪಿ ಹಂಚಿಕೊಂಡಿರುವ ನವರಸ ನಾಯಕ ''ಹುಟ್ಟುಹಬ್ಬದ ಶುಭಾಶಯಗಳು, ನೂರ್ಕಾಲ ಸುಖವಾಗಿ ಬಾಳಿ'' ಎಂದು ಹಾರೈಸಿದ್ದಾರೆ.

  ಜಗ್ಗೇಶ್ ಅವರ ಈ ಶುಭಾಶಯಕ್ಕೆ ದರ್ಶನ್ ಅಭಿಮಾನಿಗಳು ಧನ್ಯವಾದ ಹೇಳುತ್ತಿದ್ದಾರೆ.

  English summary
  Kannada actor Jaggesh shared Darshan's birthday common DP and he wishes to D Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X