Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
James box office collection day 2 :'ಜೇಮ್ಸ್' ಎರಡನೇ ದಿನದ ಕಲೆಕ್ಷನ್ ಎಷ್ಟು?
ಪುನೀತ್ ರಾಜ್‌ಕುಮಾರ್ ನಟನೆಯ 'ಜೇಮ್ಸ್' ಸಿನಿಮಾ ಮಾರ್ಚ್ 17 ರಂದು ಬಿಡುಗಡೆ ಆಗಿದ್ದು ಕನ್ನಡ ಚಿತ್ರರಂಗ ಹಿಂದೆಂದೂ ನೋಡದ ರೀತಿಯಲ್ಲಿ ಸಿನಿಮಾಕ್ಕೆ ಓಪನಿಂಗ್ ದೊರಕಿದೆ.
ಅಪ್ಪು ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ಮೊದಲ ದಿನವಂತೂ ಮಧ್ಯರಾತ್ರಿ 1 ಗಂಟೆಯಿಂದಲೇ ಶೋಗಳು ಪ್ರಾರಂಭವಾಗಿದ್ದು ಎಲ್ಲ ಶೊಗಳು ಹೌಸ್‌ಫುಲ್ ಆಗಿವೆ. ಮೊದಲ ದಿನವೇ ಕನ್ನಡ ಚಿತ್ರರಂಗದ ಹಲವು ದಾಖಲೆಗಳನ್ನು ಪುಡಿಗಟ್ಟಿದೆ 'ಜೇಮ್ಸ್'.
'ಜೇಮ್ಸ್' ಸಿನಿಮಾ ಮೊದಲ ದಿನ ಕೇವಲ ಕರ್ನಾಟದಲ್ಲಿ ಸರಿ ಸುಮಾರು 35 ಕೋಟಿ ರುಪಾಯಿ ಗಳಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಮೊದಲ ದಿನವೇ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿದ ಮತ್ತೊಂದು ಕನ್ನಡ ಸಿನಿಮಾ ಇಲ್ಲ. ಮೊದಲ ದಿನ ಮಾತ್ರವಲ್ಲ ಎರಡನೇಯ ದಿನವೂ ದೊಡ್ಡ ಮೊತ್ತದ ಗಳಿಕೆಯನ್ನು 'ಜೇಮ್ಸ್' ಸಿನಿಮಾ ಮಾಡಿದೆ.
James
Box
Office
Collection
Day
1
:
'ಜೇಮ್ಸ್'
ಸಿನಿಮಾ
ಮೊದಲ
ದಿನದ
ಕಲೆಕ್ಷನ್
ಎಷ್ಟು?
ಮೊದಲ ದಿನ ಕರ್ನಾಟಕ ಒಂದರಲ್ಲೇ ಸರಿ ಸುಮಾರು 35 ಕೋಟಿ ಗಳಿಸಿರುವ ಸಿನಿಮಾ ಎರಡನೇ ದಿನ ರಾಜ್ಯದಾದ್ಯಂತ 18 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ಇಷ್ಟು ದೊಡ್ಡ ಮೊತ್ತ ಗಳಿಸಿರುವುದು ದಾಖಲೆಯೇ ಆಗಿದೆ. ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟಾಗಲಿದ್ದು ಒಂದು ವಾರದ ಒಳಗಾಗಿಯೇ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದು ಪಕ್ಕಾ ಎನ್ನಲಾಗುತ್ತಿದೆ.

ಇದೆಲ್ಲ ಪುನೀತ್ ಅಣ್ಣನ ಪವರ್: ನಿರ್ಮಾಪಕ
ಸಿನಿಮಾದ ಕಲೆಕ್ಷನ್ ಬಗ್ಗೆ ನಿನ್ನೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಇದೆಲ್ಲ ಪುನೀತ್ ಅಣ್ಣನ ಪವರ್. ನನಗೆ ತಿಳಿದಿರುವಂತೆ ಈ ರೀತಿಯ ಓಪನಿಂಗ್ ಇನ್ಯಾವ ಸಿನಿಮಾಕ್ಕೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿಯೂ ಸಿಗುವುದಿಲ್ಲ. ಗಳಿಕೆಯಲ್ಲಿ ಮಾತ್ರವಲ್ಲ ಹಲವು ವಿಭಾಗಗಳಲ್ಲಿ ಈ ಸಿನಿಮಾ ಹಳೆಯ ರೆಕಾರ್ಡ್‌ಗಳನ್ನೆಲ್ಲಾ ಮುರಿದು ಹಾಕಿದೆ'' ಎಂದಿದ್ದಾರೆ.
Shivarajkumar
Cried:
ತಮ್ಮನ
'ಜೇಮ್ಸ್'
ಸಿನಿಮಾ
ನೋಡಿ
ಬಿಕ್ಕಿ
ಬಿಕ್ಕಿ
ಅತ್ತ
ಶಿವಣ್ಣ

ಈಗಾಗಲೇ ನೂರು ಕೋಟಿ ದಾಟಿದೆ!
ಸಿನಿಮಾವು ಮೊದಲ ದಿನ ಮೂವತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದನ್ನು ಒಪ್ಪಿಕೊಂಡ ಅವರು, ಒಂದು ವಾರದ ಒಳಗಾಗಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಅಲ್ಲದೆ, ಸಿನಿಮಾದ ಡಿಜಿಟಲ್, ಸ್ಯಾಟಲೈಟ್, ಒಟಿಟಿ ಹಾಗೂ ಸಿನಿಮಾದ ಒಟ್ಟಾರೆ ಗ್ರಾಸ್ ಕಲೆಕ್ಷನ್ ಲೆಕ್ಕ ಹಾಕಿದರೆ ಸಿನಿಮಾ ಈಗಾಗಲೇ ನೂರು ಕೋಟಿಗೂ ಹೆಚ್ಚು ಹಣವನ್ನು ಕಲೆಕ್ಷನ್ ಮಾಡಿ ಆಗಿದೆ'' ಎಂದಿದ್ದಾರೆ ನಿರ್ಮಾಪಕ.

ಗ್ರಾಸ್ ಕಲೆಕ್ಷನ್ ಮೇಲೆ ತೆರಿಗೆ ಕಟ್ ಆಗುತ್ತೆ: ನಿರ್ಮಾಪಕ
ಸಿನಿಮಾದ ಗ್ರಾಸ್ ಕಲೆಕ್ಷನ್ ಎಷ್ಟಾಗಿದೆಯೊ ಅಷ್ಟೂ ನಿರ್ಮಾಪಕನಿಗೆ ಲಾಭ ಎನ್ನಲಾಗುವುದಿಲ್ಲ. ಮಲ್ಟಿಫ್ಲೆಕ್ಸ್‌ಗಳಲ್ಲಿ ಸರಾಸರಿ 50% ನೀಡಿದರೆ ಒಟ್ಟು ಗ್ರಾಸ್ ಕಲೆಕ್ಷನ್‌ಗೆ ತೆರಿಗೆ ರೂಪವಾಗಿ 20% ನೀಡಬೇಕಾಗುತ್ತದೆ. ಹಾಗಾಗಿ ಒಟ್ಟಾರೆ ಗ್ರಾಸ್ ಕಲೆಕ್ಷನ್ ನೂರು ಕೋಟಿ ಆದರೂ ಅದು ಲಾಭವಾಗಿ ನೂರು ಕೋಟಿ ಆಗಿರುವುದಿಲ್ಲ ಎಂಬ ಒಳ ಲೆಕ್ಕಾಚಾರವನ್ನೂ ಬಿಟ್ಟಿದ್ದರು ನಿರ್ಮಾಪಕ ಪತ್ತಿಕೊಂಡ.
Fact
Check:
'ಜೇಮ್ಸ್'
ಚಿತ್ರ
ನೋಡಲು
2
ದಿನ
ರಜೆ
ಘೋಷಿಸಿದ
ಕಾಲೇಜು
ಆಡಳಿತ
ಮಂಡಳಿ?

ಪ್ರಿಯಾ ಆನಂದ್ ನಾಯಕಿ
'ಜೇಮ್ಸ್' ಸಿನಿಮಾವು ಮಾರ್ಚ್ 17 ರಂದು ಬಿಡುಗಡೆ ಆಗಿದ್ದು ಸಿನಿಮಾದಲ್ಲಿ ಎರಡು ಶೇಡ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದಾರೆ. ಡ್ರಗ್ಸ್ ವಿರುದ್ಧ ಹೋರಾಟದ ಕತೆಯನ್ನು ಈ ಸಿನಿಮಾ ಹೊಂದಿದೆ. ಜೊತೆಗೆ ಸ್ನೇಹದ ಬಗ್ಗೆ ಸಂದೇಶವನ್ನೂ ಸಾರುತ್ತಿದೆ. ಸಿನಿಮಾದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಕಾಂತ್, ಶರತ್ ಕುಮಾರ್, ಆದಿತ್ಯ ಮೆನನ್ ಮುಖ್ಯ ವಿಲನ್‌ಗಳಾಗಿದ್ದಾರೆ. ರಂಗಾಯಣ ರಘು, ಅನು ಪ್ರಭಾಕರ್, ಚಿಕ್ಕಣ್ಣ, ತಿಲಕ್, ಶಯನ್ ಶೆಟ್ಟಿ, ಸಾಧು ಕೋಕಿಲ, ಸುಚೇಂದ್ರ ಪ್ರಸಾದ್, ಕಾಮಿಡಿ ಕಿಲಾಡಿಗಳು ನಯನ ಇನ್ನೂ ಹಲವಾರು ಮಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.