For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಛಾಯಾಗ್ರಾಹಕ ಭುವನ್ ಗೌಡರನ್ನು ಹೊಗಳಿದ ಜನಾರ್ದನ ರೆಡ್ಡಿ

  |

  ಆಗಸ್ಟ್ 19....ವಿಶ್ವ ಛಾಯಾಗ್ರಹಣ ದಿನ. ಈ ವಿಶೇಷ ದಿನದಲ್ಲಿ ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿ ಅವರು ಎಲ್ಲಾ ಛಾಯಾಗ್ರಾಹಕರಿಗೆ ಶುಭಕೋರಿದ್ದಾರೆ. ವಿಶೇಷವಾಗಿ ಕೆಜಿಎಫ್ ಖ್ಯಾತಿಯ ಭುವನ್ ಗೌಡ ಅವರಿಗೆ ವಿಶ್ ಮಾಡಿದ್ದಾರೆ. ಭುವನ್‌ಗೌಡ ಅವರ ಜೊತೆಗಿನ ಆತ್ಮೀಯ ಸಂಬಂಧದ ಬಗ್ಗೆ ಹಾಗೂ ಅವರ ಕೆಲಸದ ಬಗ್ಗೆ ಫೇಸ್‌ಬುಕ್‌ನಲ್ಲಿ ಬಹಳ ವಿವರವಾಗಿ ಬರೆದುಕೊಂಡಿದ್ದಾರೆ.

  'ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ ಅನ್ನೋದು ಅಕ್ಷರಶಃ ಸತ್ಯವಾದ ಮಾತು. ಆದಕಾರಣ ಛಾಯಾಚಿತ್ರಕ್ಕಿರುವ ಮನ್ನಣೆ ಗಮನಿಸಿ 2010ರ ಆಗಸ್ಟ್ 19 ರಂದು ಭಾರತವೂ ಸೇರಿದಂತೆ ಸುಮಾರು 100 ದೇಶಗಳು ಮೊದಲ ಛಾಯಾಗ್ರಹಣ ದಿನವನ್ನು ಆಚರಿಸಿದವು. ಫೋಟೋಗ್ರಫಿ ಒಂದು ಕಲೆ. ಜಾಗತಿಕ ಓಟಕ್ಕೆ ಅಷ್ಟೇ ಅಲ್ಲ, ಒಂದು ದೇಶದ ಒಟ್ಟು ಅಭಿವೃದ್ಧಿಯ ಮುನ್ನೋಟಕ್ಕೆ ಫೋಟೋ ಒಂದು ದಾಖಲೆ. ಈ ದಿನದಂದು ನಾನು ಒಬ್ಬ ಅತ್ಯುತ್ತಮ ಛಾಯಾಗ್ರಾಹಕರ ಸಾಧನೆ ಹಾಗೂ ಕ್ರಿಯಾಶೀಲತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ'. (ಜನಾರ್ದನ ರೆಡ್ಡಿ ಬರೆದಿರುವ ಸಾಲು ಯಥಾವತ್ತಾಗಿ ಪ್ರಕಟಿಸಲಾಗಿದೆ)

  ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಕಥೆ ಏನಾಯ್ತು?

  ಕ್ರಿಯಾಶೀಲ ಸಿನಿಮಾಟೋಗ್ರಾಫರ್

  ಕ್ರಿಯಾಶೀಲ ಸಿನಿಮಾಟೋಗ್ರಾಫರ್

  ನನಗೆ ಹಾಗೂ ನನ್ನ ಕುಟುಂಬಕ್ಕೆ ಅತ್ಯಂತ ಆತ್ಮೀಯರಾಗಿರುವ ನನ್ನ ಪ್ರೀತಿಯ ಸಹೋದರನಾದ ಭುವನ್ ಗೌಡ ಅವರು ಒಬ್ಬ ಕ್ರಿಯಾಶೀಲ ಸಿನಿಮಾಟೋಗ್ರಾಫರ್. ಇವರು ನನ್ನ ಮಗಳ ಮದುವೆಯಿಂದ ಹಿಡಿದು ನನ್ನ ಹಾಗೂ ನನ್ನ ಮೊಮ್ಮಗಳ ಫೋಟೋಗ್ರಫಿ ವಿಚಾರದಲ್ಲಿ ನಮ್ಮ ಕುಟುಂಬದ ಸದಸ್ಯರಲ್ಲಿ ಅವರು ಒಬ್ಬರಾಗಿದ್ದಾರೆ. ಇಂದು ವಿಶ್ವ ಛಾಯಾಚಿತ್ರ ಗ್ರಹಣ ದಿನದಂದು ಅವರು ತೆಗೆದ ಕೆಲವು ಛಾಯಾಚಿತ್ರಗಳನ್ನು ನಾನು ಪ್ರದರ್ಶನ ಮಾಡಿರುವೆ. (ಕೆಲವು ಫೋಟೋ ಶೇರ್ ಮಾಡಿದ್ದಾರೆ)

  ವಿಶ್ವದ ಪ್ರಮುಖ ಸಿನಿಮಾಟೋಗ್ರಾಫರ್

  ವಿಶ್ವದ ಪ್ರಮುಖ ಸಿನಿಮಾಟೋಗ್ರಾಫರ್

  ಇವರು ಕೆ.ಜಿ.ಎಫ್ ಚಿತ್ರದ ಮೂಲಕ ಸಿನಿಮಾಟೋಗ್ರಾಫರ್ ಆಗಿ ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲೇ ಖ್ಯಾತಿಯನ್ನು ಪಡೆದಿದ್ದಾರೆ. ಕೆ.ಜಿ.ಎಫ್ ಚಾಪ್ಟರ್ -2 ಕೊರೊನಾದಿಂದ ಬಿಡುಗಡೆಗೆ ವಿಳಂಬವಾಗಿರಬಹುದು, ಮುಂದೊಂದು ದಿನ ಚಿತ್ರ ಬಿಡುಗಡೆಯಾದ ನಂತರ, ಇಡೀ ವಿಶ್ವದಲ್ಲಿ ಪ್ರಮುಖ ಸಿನಿಮಾಟೋಗ್ರಾಫರ್ ಗಳಲ್ಲಿ ಭುವನ್ ಗೌಡ ಅವರು ಒಬ್ಬರಾಗಲಿದ್ದಾರೆ. ಯುವ ಸಿನಿಮಾಟೋಗ್ರಾಫರ್ ಆಗಿ ಇವರು ಒಬ್ಬ ಕನ್ನಡಿಗನಾಗಿ ವಿಶ್ವದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಮುಂದೆಯೂ ಈ ಖ್ಯಾತಿಯನ್ನು ಉಳಿಸಿಕೊಳ್ಳಲಿದ್ದಾರೆ.

  ನನ್ನ ವೈಯಕ್ತಿಕ ಫೋಟೋ ಸೆರೆಹಿಡಿದ್ದಿದ್ದಾರೆ

  ನನ್ನ ವೈಯಕ್ತಿಕ ಫೋಟೋ ಸೆರೆಹಿಡಿದ್ದಿದ್ದಾರೆ

  ಇತ್ತೀಚೆಗೆ ನಾನು ಕೊರೊನಾ ವೈರಸ್ ನಿಂದಾಗಿ ಹೊರಗೆ ಹೋಗದ ಕಾರಣ, ನಾನು ದಾಡಿ ಬಿಟ್ಟಿರುವ ಫೋಟೋಗಳನ್ನು ಅತ್ಯುತ್ತಮವಾಗಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಕೆ.ಜಿ.ಎಫ್- ಚಾಪ್ಟರ್ ಒಂದರಲ್ಲಿ ಮಾಡಿದ ಕೆಲಸಕ್ಕೆ ಅತ್ಯುತ್ತಮ ಸಿನಿಮಾ ಛಾಯಾಗ್ರಾಹಕರಾಗಿ ಪ್ರಶಸ್ತಿ ಪಡೆದಿರುವುದು ಸೇರಿದಂತೆ ಹಲವಾಯ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಅಲ್ಲದೆ ಕೆ.ಜಿ.ಎಫ್ ಚಾಪ್ಟರ್-1, ಚಾಪ್ಟರ್-2 ಹಾಗೂ ಪುಷ್ಪಕ ವಿಮಾನ, ಉಗ್ರಂ, ಲೊಡ್ಡೆ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಅತ್ಯುತ್ತಮ ಛಾಯಾಗ್ರಹಣ ನೀಡಿದ್ದಾರೆ.

  ನನ್ನ ಸಹೋದರನಿಗೆ ಶುಭಾಶಯ

  ನನ್ನ ಸಹೋದರನಿಗೆ ಶುಭಾಶಯ

  ಈ ಛಾಯಾಗ್ರಹಣ ದಿನಾಚರಣೆಯಂದು ನನ್ನ ಪ್ರೀತಿಯ ಎಲ್ಲಾ ಛಾಯಾಗ್ರಾಹಕರಿಗೆ ಹಾಗೂ ವಿಶೇಷವಾಗಿ ನನ್ನ ಸಹೋದರ ಭುವನ್ ಗೌಡ ಅವರಿಗೆ ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತೇನೆ'' ಎಂದು ಗಾಲಿ ಜನಾರ್ದನ ರೆಡ್ಡಿ ವಿಶ್ವ ಛಾಯಾಗ್ರಹಣ ದಿನಕ್ಕೆ ವಿಶ್ ಮಾಡಿದ್ದಾರೆ.

  English summary
  World photography day: political leader janardhan reddy wish to kannada photographer Bhuvan gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X