»   » ಈ ಜ್ಯೂನಿಯರ್ ರಣ್ಬೀರ್ ಕಪೂರ್ ಯಾರು ಹೇಳಿ?

ಈ ಜ್ಯೂನಿಯರ್ ರಣ್ಬೀರ್ ಕಪೂರ್ ಯಾರು ಹೇಳಿ?

Posted By:
Subscribe to Filmibeat Kannada

ಕೆಳಗಿರುವ ಫೋಟೋನ ಒಮ್ಮೆ ನೋಡಿ....ಮೊದಲ ನೋಟಕ್ಕೆ ಚಾಕಲೇಟ್ ಬಾಯ್ ನಂತೆ ಕಾಣುವ ಈತ ಒಂದು ಆಂಗಲ್ ನಿಂದ ಶಾಹೀದ್ ಕಪೂರ್...ಇನ್ನೊಂದು ಆಂಗಲ್ ನಿಂದ ರಣ್ಬೀರ್ ಕಪೂರ್ ನಂತೆ ಕಾಣಲ್ವಾ?

ಹೌದು.!! ಹಾಗಾದ್ರೆ, ಈತ ಕಪೂರ್ ಖಾನ್ದಾನ್ ನ ಮತ್ತೊಂದು ಕುಡಿನಾ? ಅಂತ ಪ್ರಶ್ನೆ ಮಾಡ್ಬೇಡಿ. ಈತ ಕಪೂರ್ ಕುಟುಂಬಕ್ಕೆ ಸೇರಿದವನಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಈತ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝಾಹಿದ್ ಖಾನ್.

ಝಾಹಿದ್ ಖಾನ್ ನ ನೋಡಿ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಫಿದಾ ಆಗಿದ್ದಾರಂತೆ..! ಅರೇ...ಅಂತ ಹುಬ್ಬೇರಿಸುತ್ತಾ...ಪೂರಾ ಕಹಾನಿಯನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

ಜಮೀರ್ ಅಹಮದ್ ಖಾನ್ ಪುತ್ರ ಝಾಹಿದ್ ಖಾನ್

ಕರ್ನಾಟಕ ವಿಧಾನಸಭಾ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಈ ಝಾಹಿದ್ ಖಾನ್. ಸದ್ಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ ಝಾಹಿದ್ ಖಾನ್.

ಜಮೀರ್ ಅಹ್ಮದ್ ಖಾನ್ ಗೆ ಬಾಲಿವುಡ್ ನಂಟು

ಕೆಲ ತಿಂಗಳ ಹಿಂದೆಯಷ್ಟೇ ಪುತ್ರ ಝಾಹಿದ್ ಜೊತೆಗೆ ಜಮೀರ್ ಅಹ್ಮದ್ ಖಾನ್ ಮುಂಬೈಗೆ ಹೋಗಿದ್ರಂತೆ. ಜಮೀರ್ ಸ್ನೇಹಿತರೊಬ್ಬರಿಗೆ ಶಾರುಖ್ ಅತ್ಯಾಪ್ತರು. ಸ್ನೇಹಿತರ ಮುಖಾಂತರ ಶಾರುಖ್ ಮನೆಗೆ ಜಮೀರ್ ಮತ್ತು ಝಾಹಿದ್ ಡಿನ್ನರ್ ಗೆ ಹೋಗಿದ್ದರು.

ಝಾಹಿದ್ ನೋಡಿ ಶಾರುಖ್ ಖಾನ್ ಫಿದಾ..!

ಝಾಹಿದ್ ಲುಕ್ ನೋಡಿ ಕಿಂಗ್ ಖಾನ್ ಶಾರುಖ್ ಫಿದಾ ಆದರಂತೆ. ''ನೋಡೋಕೆ ನನಗಿಂತ ಸ್ಮಾರ್ಟ್ ಆಗಿದ್ದೀಯಾ. ಬಾಲಿವುಡ್ ನಲ್ಲಿ ಆಕ್ಟ್ ಮಾಡು'' ಅಂತ ಶಾರುಖ್ ಖಾನ್ ಸಲಹೆ ನೀಡಿದರಂತೆ. ಅಲ್ಲದೇ ಒಂದು ಫೋಟೋಶೂಟ್ ಮಾಡಿಸುವಂತೆ ಒತ್ತಾಯ ಕೂಡ ಮಾಡಿದರಂತೆ. ['ಫಿಲ್ಮಿಬೀಟ್ ಕನ್ನಡ' ವಿಶೇಷ; ಎಚ್.ಡಿ.ಕೆ ಪುತ್ರ ನಿಖಿಲ್ ಸಂದರ್ಶನ]

ಶಾರುಖ್ ಒತ್ತಾಯಕ್ಕೆ ಫೋಟೋಶೂಟ್

ಶಾರುಖ್ ಮಾತಿಗೆ ಮಣಿದು ಜಮೀರ್ ಅಹ್ಮದ್ ಖಾನ್ ತಮ್ಮ ಪುತ್ರನಿಗಾಗಿ ಮುಂಬೈನಲ್ಲಿ ಫೋಟೋ ಶೂಟ್ ಮಾಡಿಸಿದರು. ಆ ಫೋಟೋಗಳೇ ಇವು.

ಬಾಲಿವುಡ್ ಗೆ ಎಂಟ್ರಿ ಕೊಡ್ತಾರಾ ಜಮೀರ್ ಪುತ್ರ?

ನೋಡೋಕೆ ಬಾಲಿವುಡ್ ಗೆ ಹೇಳಿಮಾಡಿಸಿದ ನಾಯಕನಂತಿರುವ ಝಾಹಿದ್, ಶಾರುಖ್ ಮೂಲಕ ಬಾಲಿವುಡ್ ಗೆ ಎಂಟ್ರಿಕೊಡ್ತಾರಾ ಅನ್ನುವ ಪ್ರಶ್ನೆಗೆ ಜಮೀರ್ ಅಹ್ಮದ್ ಖಾನ್ 'ಸದ್ಯಕ್ಕಿಲ್ಲ' ಅನ್ನುವ ಉತ್ತರ ಕೊಡ್ತಾರೆ. ''ಮಗ ಇನ್ನು ಪಿಯುಸಿ ಓದುತ್ತಿದ್ದಾನೆ. ಅವನು ಇನ್ನೂ ಚೆನ್ನಾಗಿ ಓದಬೇಕು. ಈ ಲೈನ್ ಗೆ ಬಂದರೆ ಓದಲ್ಲ. ಅವನು ಓದು ಮುಗಿಸಿದ ಮೇಲೆ ಇಷ್ಟ ಇದ್ದರೆ ಮಾಡಲಿ'' ಅಂತ ಹೇಳ್ತಾರೆ.

ಸ್ಯಾಂಡಲ್ ವುಡ್ ಕಡೆಗೆ ರಾಜಕಾರಣಿ ಪುತ್ರರು

ಕಾಂಗ್ರೆಸ್ ನಾಯಕ ರೇವಣ್ಣ ಪುತ್ರ ಅನೂಪ್, ಚೆಲುವರಾಯಸ್ವಾಮಿ ಪುತ್ರ ಸಚಿನ್, ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಮುಂದೆ ಇದೇ ಹಾದಿಯಲ್ಲಿ ಜಮೀರ್ ಅಹ್ಮದ್ ಖಾನ್ ಪುತ್ರ ಝಾಹಿದ್ ಖಾನ್ ಕೂಡ ಬಂದರೆ ಅಚ್ಚರಿ ಇಲ್ಲ. [ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ]

English summary
JDS Leader Zameer Ahmed Khan's son Zahid Khan has done a photo shoot in Mumbai. Does it mean Zahid Khan is gearing up to enter Bollywood? Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada