»   » ಸಖತ್ ಸ್ಪೆಷಲ್ ಆಗಿತ್ತು ರಕ್ಷಿತಾ ಪ್ರೇಮ್ ಮಗನ ಬರ್ತಡೇ.!

ಸಖತ್ ಸ್ಪೆಷಲ್ ಆಗಿತ್ತು ರಕ್ಷಿತಾ ಪ್ರೇಮ್ ಮಗನ ಬರ್ತಡೇ.!

Posted By: Pavithra
Subscribe to Filmibeat Kannada

ಸ್ಯಾಂಡಲ್ ವುಡ್ ಸ್ಟಾರ್ ಗಳ ಬರ್ತಡೇಯನ್ನ ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿ ಸ್ಟಾರ್ ಮಕ್ಕಳ ಬರ್ತಡೇ ಗಳನ್ನ ಕೂಡ ಅಷ್ಟೇ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡೋದು ಈಗಿನ ಟ್ರೆಂಡ್.

ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನೀಶ್ ಬರ್ತಡೇಯನ್ನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲಾಗಿತ್ತು. ಅಭಿಮಾನಿಗಳು ದರ್ಶನ್ ಮನೆಗೆ ಹೋಗಿ ಲಿಟಲ್ ಸ್ಟಾರ್ ಗೆ ಶುಭಕೋರಿ ಬಂದಿದ್ದರು. ಈಗ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರ ಪುತ್ರ ಸೂರ್ಯ ತಮ್ಮ ಬರ್ತಡೇಯನ್ನ ವಿಶೇಷವಾಗಿ ಆಚರಣೆ ಮಾಡಿಕೊಂಡಿದ್ದಾರೆ.

ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತ ದಂಪತಿಯ ಏಕೈಕ ಪುತ್ರ ಸೂರ್ಯ. ಸೂರ್ಯನ ಬರ್ತಡೇಯನ್ನ ನಟಿ ರಕ್ಷಿತಾ ಸಖತ್ ಕಲರ್ ಫುಲ್ ಆಗಿ ಅಯೋಜನೆ ಮಾಡಿದ್ದು, ಸೂರ್ಯನ ಫ್ರೆಂಡ್ಸ್ ಮತ್ತು ಸಂಬಂಧಿಕರನ್ನ ಇನ್ವೈಟ್ ಮಾಡಿ ಹುಟ್ಟುಹಬ್ಬವನ್ನ ಆಚರಣೆ ಮಾಡಲಾಯ್ತು. ಮುಂದೆ ನೋಡಿ....

ಮಗನ ಬರ್ತಡೇಗೆ ಅಮ್ಮನ ತಯಾರಿ

ಸೂರ್ಯನ ಈ ವರ್ಷದ ಬರ್ತಡೇಯನ್ನ ಸ್ಪೈಡರ್ ಮ್ಯಾನ್ ಕಾನ್ಸೆಪ್ಟ್ ನಲ್ಲಿ ಮಾಡಲಾಯ್ತು. ಸ್ಚೈಡರ್ ಮ್ಯಾನ್ ಕೇಕ್ ಹಾಗೂ ಸೂಪರ್ ಕಾರ್ ಕೇಕ್ ಈ ವರ್ಷದ ಬರ್ತಡೇಯ ಹೈಲೆಟ್ ಆಗಿತ್ತು. ಮುದ್ದು ಮಗನ ಹುಟ್ಟುಹಬ್ಬಕ್ಕಾಗಿ ರಕ್ಷಿತಾ ಸಾಕಷ್ಟು ತಯಾರಿ ಮಾಡಿದ್ದರು.

ನಟಿ ರಕ್ಷಿತಾ ಕೋರಿಕೆಯನ್ನ ಕೆಲವೇ ದಿನದಲ್ಲಿ ಈಡೇರಿಸಿದ ದರ್ಶನ್

ಫ್ಯಾಮಿಲಿ ಪ್ರೆಂಡ್ಸ್ ಜೊತೆ ಸೆಲೆಬ್ರೇಷನ್

ರಕ್ಷಿತಾ ಹಾಗೂ ಪ್ರೇಮ್ ಅವರ ಆಪ್ತರು ಮಾತ್ರ ಬರ್ತಡೇ ಆಚರಣೆಯಲ್ಲಿ ಭಾಗಿಯಾಗಿದ್ದರು. ರಕ್ಷಿತಾ ಅವರ ತಂದೆ ತಾಯಿ ಸೇರಿದಂತೆ 'ದಿ ವಿಲನ್' ಟೀಂ ನಲ್ಲಿ ಕೆಲಸ ಮಾಡುತ್ತಿರುವ ಕೆಲ ತಂತ್ರಜ್ಞರು ಕೂಡ ಸೂರ್ಯನ ಬರ್ತಡೇಗೆ ಹಾಜರ್ ಆಗಿದ್ದರು.

ಜೂ.ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿದ ವಿಜಯಲಕ್ಷ್ಮಿ.!

ಅಮ್ಮನ ಮುದ್ದು ಮಗನ ಬರ್ತಡೇ

ಸೂರ್ಯ ಈ ವರ್ಷ ತನ್ನ 9ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ. ಅಪ್ಪ ಅಮ್ಮನಂತೆ ಪ್ರತಿಭಾನ್ವಿತನಾಗಿರುವ ಸೂರ್ಯನ ಹಿಂದಿ ಭಾಷಣ ಕೇಳಿದ್ರೆ ನೀವೇ ಒಮ್ಮೆ ಶಾಕ್ ಆಗ್ತಿರಾ. ಅಷ್ಟೇ ಅಲ್ಲದೆ ಆರ್ಟ್ ಕ್ರಾಫ್ಟ್ ನಲ್ಲೂ ಸೂರ್ಯ ನಂಬರ್ ಒನ್.

ಸಿನಿಮಾ ಕಡೆಗಿಲ್ಲ ಗಮನ

ಸಖತ್ ಆಕ್ಟಿವ್ ಆಗಿರುವ ಸೂರ್ಯರನ್ನ ಸದ್ಯ ಓದುವ ಕಡೆ ಹೆಚ್ಚಿನ ಗಮನ ಹರಿಸುವಂತೆ ರಕ್ಷಿತಾ ಹಾಗೂ ಪ್ರೇಮ್ ನೋಡಿಕೊಳ್ತಿದ್ದಾರೆ. ಸಿನಿಮಾ ಕಾರ್ಯಕ್ರಮಗಳಿಗಾಗಲಿ ಶೂಟಿಂಗ್ ಗಾಗಲಿ ಸೂರ್ಯರನ್ನ ಹೆಚ್ಚಾಗಿ ಕರೆದುಕೊಂಡು ಬರೋದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ಸ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿಕೊಡ್ತಿರೋದ್ರಿಂದ ಪ್ರೇಮ್ ಅವರ ಮಗ ಕೂಡ ಚಿತ್ರರಂಗಕ್ಕೆ ಬರ್ತಾರ ಎಂಬ ಕುತೂಹಲ ಕಾಡಿದೆ.

ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!

ಮಕ್ಕಳ ಬರ್ತಡೇಗೆ ಸ್ಪೆಷಲ್ ಇಂಟ್ರೆಸ್ಟ್

ಸ್ಟಾರ್ ಗಳ ಮನೆಯಲ್ಲಿ ಅಮ್ಮಂದಿರು ಸಖತ್ ಪ್ಲಾನ್ ಮಾಡ್ತಾರೆ ಅನ್ನೋದು ಇತ್ತೀಚಿಗೆ ಕಾಮನ್ ವಿಚಾರ. ಮೊನ್ನೆ ಮೊನ್ನೆಯಷ್ಟೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ತಮ್ಮ ಮಗನ ಬರ್ತಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದರು. ಈಗ ಸೂರ್ಯನ ಬರ್ತಡೇಯನ್ನ ರಕ್ಷಿತ ಪ್ರೇಮ್ ಸ್ಪೆಷಲ್ ಆಗಿ ಆಚರಣೆ ಮಾಡಿದ್ದಾರೆ.

ದರ್ಶನ್-ಪ್ರೇಮ್ ಮತ್ತೆ ಸಿನಿಮಾ ಮಾಡೋದು ಪಕ್ಕಾ, ರಕ್ಷಿತಾ ಬಿಚ್ಚಿಟ್ಟ ಕಥೆ.!

English summary
Rakshitha prem celebrate his son birthday with kids, ರಕ್ಷಿತಾ ಪ್ರೇಮ್ ಮಗ ಸೂರ್ಯನ ಬರ್ತಡೇ ಸೆಲೆಬ್ರೆಷನ್ ಹೇಗಿತ್ತು ಗೊತ್ತಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X