Don't Miss!
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೋಶ್ ವೇದಿಕೆಯಲ್ಲಿ ಧಮಾಕಾ ಎಬ್ಬಿಸಿರುವ ಪ್ರತಿಭಾನ್ವಿತ ಬೇಬಿ ಹನ್ವಿಕಾ
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಪ್ಲಾಟ್‌ಫಾರ್ಮ್ ಜೋಶ್ ಹಲವು ತೆರೆ ಮರೆಯ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ ಮತ್ತು ಅವರನ್ನು ಜನಪ್ರಿಯಗೊಳಿಸಿದೆ.
ಜೋಶ್ ಕಿರು ವಿಡಿಯೋ ಫ್ಲಾಪ್‌ಫಾರ್ಮ್‌ನಲ್ಲಿ ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರು ಪುಟಾಣಿ ಬಾಲಕಿ ಹನ್ವಿಕಾ ಯು ಗೌಡ.
ಜೋಶ್ ಹಾಗೂ ಇನ್‌ಸ್ಟಾಗ್ರಾಂ ಎರಡರಲ್ಲೂ ಸೆಲೆಬ್ರಿಟಿಯೇ ಆಗಿರುವ ಹನ್ವಿಕಾ ಕಿರು ವಿಡಿಯೋಗಳ ಮೂಲಕ ತಮ್ಮ ನೃತ್ಯ ಹಾಗೂ ಅಭಿನಯ ಪ್ರತಿಭೆಯನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಜೊತೆಗೆ ಹಲವು ಪ್ರತಿಭಾವಂತರಿಗೆ ಪ್ರೇರಣೆ ಸಹ ಒದಗಿಸುತ್ತಿದ್ದಾರೆ.
ಜನಪ್ರಿಯ ಜೋಶ್ ಅಪ್ಲಿಕೇಶನ್‌ನಲ್ಲಿ ಹನ್ವಿಕಾ ಯು ಗೌಡ ಅವರನ್ನು ಸುಮಾರು 8 ಲಕ್ಷ ಮಂದಿ ಫಾಲೋ ಮಾಡುತ್ತಾರೆ. ಎಂಟು ಲಕ್ಷ ಮಂದಿ ಫಾಲೋವರ್‌ಗಳನ್ನು ಹೊಂದಿರುವ ಹನ್ವಿಕಾ ಈವರೆಗೆ ಸುಮಾರು 37 ಲಕ್ಷ ಲೈಕ್ಸ್‌ಗಳನ್ನು ಗಳಿಸಿಕೊಂಡು, ಜೋಶ್‌ನ ಟಾಪ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇತರೆ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ ಕೊಲ್ಯಾಜ್‌ಗಳನ್ನು ಮಾಡಿ ಫಾಲೋವರ್‌ಗಳನ್ನು ಹೆಚ್ಚು ಮಾಡಿಕೊಂಡಿದ್ದಾರೆ ಹನ್ವಿಕಾ.
ಇನ್‌ಸ್ಟಾಗ್ರಾಂನಲ್ಲಿಯೂ ಹನ್ವಿಕಾ ಸ್ಟಾರ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹನ್ವಿಕಾರನ್ನು ಸುಮಾರು 27 ಸಾವಿರ ಮಂದಿ ಫಾಲೋ ಮಾಡುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಈವರೆಗೆ 192 ಪೋಸ್ಟ್‌ಗಳನ್ನು ಹನ್ವಿಕಾ ಮಾಡಿದ್ದಾರೆ. ಹಲವು ವಿಡಿಯೋಗಳು, ಚಿತ್ರಗಳನ್ನು ಹನ್ವಿಕಾ ಹಂಚಿಕೊಂಡಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್, ರವಿಚಂದ್ರನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಸ್ಟಾರ್ ನಟರನ್ನು ತನ್ನ ಮುಗ್ಧತೆ ಹಾಗೂ ಪ್ರತಿಭೆಯಿಂದ ಸೆಳೆದಿರುವ ಹನ್ವಿಕಾ, ಹಲವು ಸ್ಟಾರ್ ನಟರನ್ನು ಭೇಟಿಯಾಗಿ ಶಹಭಾಸ್ ಎನಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಸ್ಟಾರ್ ನಟರೊಟ್ಟಿಗಿನ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಹಾಡುಗಳಿಗೆ ಮುದ್ದಾಗಿ ಡ್ಯಾನ್ಸ್ ಮಾಡಿ ಹಲವು ವಿಡಿಯೋಗಳನ್ನು ಹನ್ವಿಕಾ ಜೋಶ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಿನಿಮಾಗಳ ಡೈಲಾಗ್‌ಗಳನ್ನು ಹೇಳುತ್ತಾ ಮಾಸ್ ನಟರಂತೆ ಅಭಿನಯಿಸಿರುವ ವಿಡಿಯೋಗಳಂತೂ ಬಹಳ ಮುದ್ದಾಗಿವೆ. ಇನ್ನೂ ಪುಟ್ಟ ಬಾಲಕಿಯಾಗಿರುವ ಹನ್ವಿಕಾಳ ಪ್ರತಿಭೆ ಹೀಗೆ ಮುಂದುವರೆಯಲಿ, ಜೋಶ್ ಕಿರು ವಿಡಿಯೋ ಅಪ್ಲಿಕೇಶನ್ ಮೂಲಕ ಕೋಟ್ಯಂತರ ಜನರನ್ನು ಹನ್ವಿಕಾಳ ಪ್ರತಿಭೆ ತಲುಪಲಿ.