ಅಪ್ಪನ ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿದ್ದಾನೆ ಜೂ.ಚಿರು

ನಟ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಸಿನಿಮಾದ ಟ್ರೈಲರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಚಿರು ಇಲ್ಲದಿದ್ದರೂ ಅವರ ಸಿನಿಮಾಗಳ ಮೇಲಿನ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಸದ್ಯ ರಿಲೀಸ್ ಗೆ ರೆಡಿಯಾಗಿರುವ ರಾಜಮಾರ್ತಾಂಡ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿದೆೆ.

ವಿಶೇಷ ಎಂದರೆ ರಾಜಮಾರ್ತಂಡ ಸಿನಿಮಾದ ಟ್ರೈಲರ್ ಅನ್ನು ವಿಶೇಷ ಅತಿಥಿಯೊಬ್ಬರು ಬಿಡುಗಡೆ ಮಾಡುತ್ತಿದ್ದಾರೆ. ಮತ್ಯಾರು ಅಲ್ಲ ಚಿರಂಜೀವಿ ಮತ್ತು ಮೇಘನಾ ರಾಜ್ ಪುತ್ರ ಜೂ.ಚಿರು. ಪುಟ್ಟ ಪೋರ ಜೂ ಚಿರು ಅಪ್ಪನ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷವಾಗಿದೆ.

ನಾಳೆ ಫೆಬ್ರವರಿ 19ಕ್ಕೆ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸ್ವತಃ ಮೇಘನಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಎಲ್ಲಾ ಅವನ ತಂದೆಗಾಗಿ. ಅಪ್ಪನ ಏಂಜಲ್, ರಾಜಮಾರ್ತಾಂಡ ಟ್ರೈಲರ್ ಅನ್ನು ನನ್ನ ಮಗ ನಾಳೆ ಬಿಡುಗಡೆ ಮಾಡಲಿದ್ದಾನೆ' ಎಂದು ಹೇಳಿದ್ದಾರೆ.

Jr.Chiru will launch his father Chiranjeevi Sarajas Rajamarthanda movie trailer

ಇನ್ನೂ ಚಿತ್ರದ ನಿರ್ದೇಶಕ ರಾಮ್ ನಾರಾಯಣ್ ಮಾಹಿತಿ ನೀಡಿ, ಚಿರು ಪುತ್ರನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ವೀಡಿಯಾದಲ್ಲಿ ಪೋಸ್ಟ್ ಮಾಡಿ, ಟ್ರೈಲರ್ ರಿಲೀಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಬಹುಶಃ ಇದೇ ಮೊದಲಬಾರಿಗೆ ಪುಟ್ಟ ಮಗು ಟ್ರೈಲರ್ ರಿಲೀಸ್ ಮಾಡುತ್ತಿರುವುದು ಎಂದು ಹೇಳಿದ್ದಾರೆ.

ಚಿರು ಇಲ್ಲದಿದ್ದರೂ ಚಿರು ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಟ್ರೈಲರ್ ಗೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಧ್ವನಿ ಕೂಡ ಸಿನಿಮಾದಲ್ಲಿ ಇದೆ. ಇನ್ನೂ ಈಗಾಗಲೇ ಸಿನಿಮಾದ ಟೀಸರ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಮಗನ ಕೈಯಿಂದ ರಿಲೀಸ್ ಆಗುತ್ತಿರುವ ಟ್ರೈಲರ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

Recommended Video

ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada

More from Filmibeat

English summary
Jr.Chiru will release his father Chiranjeevi Saraja starrer Raja Marthanda trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X