For Quick Alerts
  ALLOW NOTIFICATIONS  
  For Daily Alerts

  'ಜಗ್ಗೂದಾದಾ' ದರ್ಶನ್ ಯಾಕೆ ಹೀಗ್ಮಾಡ್ತಿದ್ದಾರೆ?

  By ಕುಸುಮ
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ವರಸೆ ಬದಲಿಸಿದ್ದಾರೆ. ಈ ಬಾರಿ 'ಜಗ್ಗೂದಾದಾ' ಸಿನಿಮಾ ರಿಲೀಸ್ ವೇಳೆಯಲ್ಲಿ ಅವರು ಬೆಂಗಳೂರಿನಲ್ಲಿಲ್ಲ, ಮೈಸೂರಿನಲ್ಲಿದ್ದಾರೆ. ಎಲ್ಲಾ ವಾಹಿನಿಗಳಿಗೆ ಮೈಸೂರಿನಿಂದಲೇ ಇಂಟರ್ವ್ಯೂ ಕೊಡುತ್ತಿದ್ದಾರೆ. ಅವರಿಗೆ ಬೆಂಗಳೂರಿನ ವಾಸ್ತು ಸರಿ ಬರುತ್ತಿಲ್ಲವಾ, ಗೊತ್ತಿಲ್ಲ!

  ಅದೂ ಕೂಡ ಈ ಬಾರಿ ಮತ್ತೆ ತಮ್ಮ ವೈಯಕ್ತಿಕ ವಿಷಯದಲ್ಲಿ ಮೂಗು ತೂರಿಸಿ ಕೋಪ ಬರಿಸಿದ ಕೆಲವು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೆ 'ಜಗ್ಗೂದಾದಾ' ಚಿತ್ರದ ಒಂದು ತುಣುಕನ್ನೂ ಕೊಡಬೇಡಿ ಅಂತ ಹೇಳಿದ್ದಾರೆ. ಹಾಗಾಗಿ ಆ ವಾಹಿನಿಗಳೂ ಕೂಡ 'ಜಗ್ಗೂದಾದಾ'ನಿಗೆ ಯಾವುದೇ ರೀತಿ ಪ್ರಚಾರವನ್ನೂ ಮಾಡಿಲ್ಲ.

  ಜೂನ್ 10ರಂದು ಶುಕ್ರವಾರ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ. ದರ್ಶನ್ ಸಂತೋಷ್ ಚಿತ್ರಮಂದಿರಕ್ಕೆ ಬರುವುದು ಅನುಮಾನ ಎನ್ನುತ್ತಿದೆ ದರ್ಶನ್ ಆಪ್ತ ಮೂಲ. ಆದರೆ ಅಭಿಮಾನಿಗಳಂತೂ ಗುರುವಾರ ಸಂಜೆಯಿಂದಲೇ ತಮ್ಮ ನೆಚ್ಚಿನ ನಟನನ್ನು ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ಳಲು ಸಿದ್ಧವಾಗಿದ್ದಾರೆ. ['ನಾನೀಗ ಫ್ಲಾಪ್ ಸ್ಟಾರ್' ಅಂತ ದರ್ಶನ್ ಯಾಕಂದ್ರು?]


  ಮಧ್ಯರಾತ್ರಿಯೇ ಶೋಗೆ ಅವಕಾಶ ಕೊಟ್ಟರೆ ಅದನ್ನೂ ನೋಡಲು ರೆಡಿ. ಮಳೆಯ ಹಂಗನ್ನೂ ತೊರೆದು ಜನ ಥಿಯೇಟರುಗಳ ಮುಂದೆ ಬಂದು ನಿಂತಿರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದು ದರ್ಶನ್ ಅವರಿಗೂ ಗೊತ್ತಿಲ್ಲದ ವಿಷಯವೇನಲ್ಲ.

  ಇಲ್ಲಿಯವರೆಗೂ ತಮ್ಮ ಚಿತ್ರದ ಪ್ರಚಾರದ ವಿಷಯಗಳಿಗೆ ರಾಜರಾಜೇಶ್ವರಿ ನಗರದ ತಮ್ಮ ತೂಗುದೀಪ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಸಿಗುತ್ತಿದ್ದ ಚಾಲೆಂಜಿಂಗ್ಸ್ಟಾರ್ ದರ್ಶನ್ ಈ ಬಾರಿ ಚಿತ್ರದ ಪತ್ರಿಕಾಗೋಷ್ಠಿಯನ್ನೂ ಮೈಸೂರಿನಲ್ಲೇ ಮಾಡಿಸಿದ್ದಾರೆ. ['ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?]

  'ಜಗ್ಗೂದಾದಾ'ಗೆ ಈ ಬಾರಿ ಬೆಂಗಳೂರೇ ಬೇಸರ ಅನ್ನಿಸಿರೋದು ಯಾಕೆ? ಅಥವಾ ಮಾಧ್ಯಮದವರು ಸಂದರ್ಶನಕ್ಕೆ ಕರೆಯುವುದರಿಂದ ಬೇಸತ್ತಿದ್ದಾರಾ? ಐರಾವತ ಸೇರಿದಂತೆ ಇತ್ತೀಚಿನ ಕೆಲ ಚಿತ್ರಗಳು ತೋಪಾಗಿದ್ದರಿಂದ ಅವರು ಹೀಗೆ ಮಾಡುತ್ತಿದ್ದಾರಾ? ಅವರೇ ಉತ್ತರ ಹೇಳಬೇಕು. ಮೈಸೂರಿಂದಲೇ ಹೇಳಲಿ ಪರವಾಗಿಲ್ಲ! [ಜಗ್ಗು'ದಾದಾಗಿರಿ' ಹೇಗಿದೆ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ.!]

  English summary
  What has happened to challenging star Darshan? Just before release of Jaggudada on 10th June he has moved to Mysuru, instead of staying in Bengaluru. Is failure affecting him or does he think it is safer to be away from media in Mysuru?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X