»   » ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!

ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!

Posted By:
Subscribe to Filmibeat Kannada

ಚಿತ್ರಮಂದಿರಗಳು ಖಾಲಿ ಇದ್ದರೂ, 'ಫೇಕ್ ಹೌಸ್ ಫುಲ್' ಬೋರ್ಡ್ ಹಾಕಿ, ಆನ್ ಲೈನ್ ನಲ್ಲಿ ಟಿಕೆಟ್ ಗಳು ಸೇಲ್ ಆಗದ ಹಾಗೆ ನೋಡಿಕೊಂಡು, ಕನ್ನಡ ಚಿತ್ರಗಳನ್ನ ತುಳಿಯುವ ಪ್ರಯತ್ನ ಮಾಡುತ್ತಿದ್ದ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಿಗೆ ಈಗ ಕೆ.ಎಫ್.ಸಿ.ಸಿ ಕಡೆಯಿಂದ ಬಿಸಿ ತಾಕಿದೆ.

'ನಾವು ಮಾಡಿದ್ದು ತಪ್ಪು' ಅಂತ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಪಿ.ವಿ.ಆರ್ ಸಮೂಹ ಮತ್ತು ಬುಕ್ ಮೈ ಶೋ ವ್ಯವಸ್ಥಾಪಕರು ತಪ್ಪೊಪ್ಪಿಕೊಂಡಿದ್ದಾರೆ. [ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]


Justice Prevailed; Multiplexes are ready to pay fine

ಸೋಲ್ಡ್ ಔಟ್ ಅಂತ ತೋರಿಸಿದ ಎಲ್ಲಾ ಶೋಗಳ ಸಂಪೂರ್ಣ ಹಣವನ್ನ ನಿರ್ಮಾಪಕರಿಗೆ ನೀಡುವುದಾಗಿ ಪಿ.ವಿ.ಆರ್ ಸಮೂಹದ ವ್ಯವಸ್ಥಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ರವರಿಗೆ ಭರವಸೆ ನೀಡಿದ್ದಾರೆ.


ಜೊತೆಗೆ ಹಾಲಿ ಸಿನಿಮಾಗಳನ್ನು ಪ್ರತಿ ದಿನ ಎರಡು ಶೋಗಳಲ್ಲಿ ಪ್ರದರ್ಶನ ಮಾಡಲು ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ.


ಇಂದು ಸಾ.ರಾ.ಗೋವಿಂದು ಅಧ್ಯಕ್ಷತೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ 'ಆಕ್ಟರ್' ಚಿತ್ರ ನಿರ್ಮಾಪಕ ಕೆ.ಎಂ.ವೀರೇಶ್, ನಿರ್ಮಾಪಕ ಹಾಗೂ ನಿರ್ದೇಶಕ ದಿನಕರ್ ತೂಗುದೀಪ, ನಿರ್ದೇಶಕ ದಯಾಳ್ ಪದ್ಮನಾಭನ್, ಪಿ.ವಿ.ಆರ್ ಸಮೂಹ ಹಾಗೂ 'ಬುಕ್ ಮೈ ಶೋ' ವೆಬ್ ತಾಣದ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.


'ಆಕ್ಟರ್', 'ಮಧುರ ಸ್ವಪ್ನ' ಹಾಗೂ 'ಭಲೇ ಜೋಡಿ' ಚಿತ್ರಗಳಿಗೆ ಕಳೆದ ಎರಡು ದಿನಗಳಿಂದ 'ಬುಕ್ ಮೈ ಶೋ' ವೆಬ್ ತಾಣದಲ್ಲಿ ಟಿಕೆಟ್ಸ್ ಸೋಲ್ಡ್ ಔಟ್ ಅಂತ ತೋರಿಸುತ್ತಿತ್ತು. ಕೂಲಂಕುಶವಾಗಿ ವಿಚಾರಿಸಿದ ಬಳಿಕ ಮಲ್ಟಿಪ್ಲೆಕ್ಸ್ ಗಳಲ್ಲಿ 'ಫೇಕ್ ಹೌಸ್ ಫುಲ್' ಬೋರ್ಡ್ ಬಿದ್ದಿರುವುದು ಖಾತ್ರಿಯಾಯ್ತು. ನಂತರ ನೇರವಾಗಿ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಕೆ.ಎಂ.ವೀರೇಶ್ 'ಕನ್ನಡ ವಿರೋಧಿ ಮಲ್ಟಿಪ್ಲೆಕ್ಸ್'ಗಳಿಗೆ ಮೊದಲ ಪೆಟ್ಟು ಕೊಟ್ಟಿದ್ದಾರೆ.

English summary
In the meeting held in KFCC today, PVR Group has accepted the fault and is ready to pay fine for misleading Kannada Audience and Producers by showing Fake House Full board. Non-Kannada Movies lobby working big time in Karnataka. Kannada Movies are knocked out of Multiplexes. Kannada Movie 'Actor' Producer K.M.Veeresh gives complaint to KFCC.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada