Don't Miss!
- News
ನಾವು ಜಾಗರೂಕರಾಗಿದ್ದೇವೆ: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಉನ್ನತ ಬ್ಯಾಂಕ್ಗಳು ಹೇಳಿದ್ದೇನು?
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಸೂಯೆ ಪಡಬಾರದು, ಎಲ್ಲರನ್ನು ಬೆಳೆಸಬೇಕು: ಜಗ್ಗೇಶ್ ಟ್ವೀಟ್ ಬಗ್ಗೆ ಕೆ ಮಂಜು ಪ್ರತಿಕ್ರಿಯೆ
ನಟಿ ಪ್ರಿಯಾ ವಾರಿಯರ್ ಬಗ್ಗೆ ನಟ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದರು. ಒಕ್ಕಲಿಗರ ವಿದ್ಯಾ ಸಂಸ್ಥೆಯ ಕಾರ್ಯಕ್ರಮದಲ್ಲಿ ತಮ್ಮ ಜೊತೆಗೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
"ಇಂದು ಬಲವಂತಕ್ಕೆ ಗೌರವಿಸಿ ಕಾರ್ಯಕ್ರಮಕ್ಕೆ ಹೋಗಿ ಮೌನಕ್ಕೆ ಶರಣಾಗಿ ಮೂಕವಿಸ್ಮಿತನಾದೆ. ರಾಜ್ಯ ರಾಷ್ಟ್ರಕ್ಕೆ ಯಾವ ಕೊಡುಗೆ ಇಲ್ಲ. ಬರಹಗಾರ್ತಿಯಲ್ಲ. ಸ್ವಾತಂತ್ರ್ಯ ಹೋರಾಟಗಾರ್ತಿಯಂತು ಅಲ್ಲವೆ ಅಲ್ಲ. ಹೋಗಲಿ ನೂರು ಸಿನಿಮಾ ನಟಿಯಂತು ಅಲ್ಲ. ಸಾಹಿತಿ ಅಲ್ಲ. ಅನಾಥ ಮಕ್ಕಳಿಗೆ ಮಹಾ ತಾಯಿ ಅಲ್ಲ. ಆಧುನಿಕ ಮದರ್ ತೆರೆಸಾ ಅಲ್ಲ. ನೂರಾರು ಮರ ನೆಟ್ಟ ಸಾಲು ಮರದ ತಿಮ್ಮಕ್ಕ ಅಲ್ಲ. ಕಾದಂಬರಿ ಬರೆದ ತ್ರಿವೇಣಿ ಅಲ್ಲ. ಜಾನ್ಸಿ ಅಲ್ಲ. ಅಬ್ಬಕ್ಕನಲ್ಲ. ಕಿತ್ತೂರು ಚನ್ನಮ್ಮನಲ್ಲ" ಎಂದು ಬರೆದು ಏನು ಅಲ್ಲದ ಪ್ರಿಯಾ ಇಂದು ಯುವಜನಕ್ಕೆ ದೇವರಂತೆ ಕಾಣುತ್ತಿರುವುದು ದುರಂತ ಎಂದು ಬೇಸರ ಹೊರ ಹಾಕಿದ್ದರು.
ಕಣ್
ಸನ್ನೆ
ಹುಡುಗಿಯ
ವಿರುದ್ಧ
ಕೆಂಡಕಾರಿದ
ನವರಸನಾಯಕ
ಜಗ್ಗೇಶ್
ಈ ಕಾರ್ಯಕ್ರಮಕ್ಕೆ ಪ್ರಿಯಾ ವಾರಿಯರ್ ರನ್ನು ನಿರ್ಮಾಪಕ ಕೆ ಮಂಜು ಕರೆದುಕೊಂಡು ಹೋಗಿದ್ದರು. ಪ್ರಿಯಾ ವಾರಿಯರ್ ಬಗ್ಗೆ ಜಗ್ಗೇಶ್ ಈ ರೀತಿ ಟ್ವೀಟ್ ಮಾಡಿದ್ದು, ಈ ಬಗ್ಗೆ ಕೆ ಮಂಜು ಪ್ರತಿಕ್ರಿಯೆ ನೀಡಿದ್ದಾರೆ.

ಕೆ ಮಂಜು ಸಿನಿಮಾದಲ್ಲಿ ಪ್ರಿಯಾ ವಾರಿಯರ್
ನಿರ್ಮಾಪಕ ಕೆ ಮಂಜು ಪುತ್ರ ಶೇಯಸ್ ನಟನೆಯ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸಗಳು ಇರುವ ಕಾರಣ ಪ್ರಿಯಾ ಬೆಂಗಳೂರಿನಲ್ಲಿ ಇದ್ದರು. ಈ ಸಮಯದಲ್ಲಿ ಬಿಜಿಎಸ್ ವಿದ್ಯಾ ಸಂಸ್ಥೆಯ ಕಾರ್ಯಕ್ರಮಕ್ಕೆ ಪ್ರಿಯಾರನ್ನು ಕೆ ಮಂಜು ಕರೆದುಕೊಂಡು ಹೋಗಿದ್ದರು. ಆದರೆ, ದಿಗ್ಗಜ ಜೊತೆಗೆ ಆಕೆಯನ್ನು ಕೂರಿಸಿದ್ದು, ಜಗ್ಗೇಶ್ ಗೆ ಬೇಸರ ಉಂಟು ಮಾಡಿತ್ತು.

ಜಗ್ಗೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ
''ಬಿಜಿಎಸ್ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕರು ಭಾಗಿಯಾಗಿದ್ದರು. ನಟ ಜಗ್ಗೇಶ್, ನಿರ್ದೇಶಕ ಓಂ ಸಾಯಿ ಪ್ರಕಾಶ್ ಇದ್ದರು. ನಾನು, ಪ್ರಿಯಾ ವಾರಿಯರ್ ಕೂಡ ಅದಕ್ಕೆ ಹೋಗಿದ್ದೆವು. ಪ್ರಿಯಾ ವಾರಿಯರ್ ಎಂದಾಗ ವಿಧ್ಯಾರ್ಥಿಗಳು ಕೇಕೆ ಹಾಕಿ ಸ್ವಾಗತ ಮಾಡಿದರು. ಅದು ಜಗ್ಗೇಶ್ ಏನನಿಸಿದೆ ತಿಳಿದಿಲ್ಲ. ಯಾರ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.'' ಎಂದು ಕೆ ಮಂಜು ತಿಳಿಸಿದ್ದಾರೆ.
'ನೀನಂದ್ರೆ
ನನಗೆ
ಇಷ್ಟ':
ದೇವರಕೊಂಡ
ಜೊತೆ
ಪ್ರಿಯಾ
ವಾರಿಯರ್.!

ಕನ್ನಡದಲ್ಲಿಯೇ ಪ್ರಿಯಾ ಮಾತು ಶುರು ಮಾಡಿದ್ದರು
''ಆ ಕಾಲೇಜಿನಲ್ಲಿ ಎಲ್ಲ ಭಾಷೆಯ ವಿಧ್ಯಾರ್ಥಿಗಳು ಇದ್ದರು. ಪ್ರಿಯಾ ವಾರಿಯರ್ ಕನ್ನಡದಲ್ಲಿಯೇ ತಮ್ಮ ಮಾತು ಶುರು ಮಾಡಿದರು. ಜಗ್ಗೇಶ್ ಒಬ್ಬ ಹಿರಿಯ ಕಲಾವಿದರು ಯಾವ ರೀತಿ ಈ ಮಾತು ಹೇಳಿದ್ದಾರೆ ತಿಳಿದಿಲ್ಲ. ನಾವು ಯಾರ ಮೇಲೆಯೂ ಅಸೂಯೆ ಪಡಬಾರದು. ಎಲ್ಲರನ್ನು ಬೆಳೆಸಬೇಕು. ಕಾರ್ಯಕ್ರಮಕ್ಕೆ ನಾವು ಹೋಗಿದ್ದೇ ತಪ್ಪಾ.. ಇಲ್ಲ.'' ಎಂದು ಪ್ರಶ್ನೆ ಮಾಡಿದರು.

ನನಗೆ ಅಸಮಾಧಾನ ಆಗಲಿಲ್ಲ
''ಜಗ್ಗೇಶ್ ಟ್ವೀಟ್ ಮಾಡುವುದು ನನಗೆ ಅಸಮಾಧಾನ ಆಗಲಿಲ್ಲ. ಆದರೂ, ನಾನು ಈ ಬಗ್ಗೆ ಬೇಸರ ಮಾಡಿಕೊಳ್ಳುವುದಿಲ್ಲ. ಅವರವರ ಅನಿಸಿಕೆ ಹೇಳಿದ್ದಾರೆ. ಆದರೆ, ನಾವು ಜಗ್ಗೇಶ್ ಅವರನ್ನು ಪ್ರೀತಿಸುತ್ತೇವೆ. ಗೌರವ ನೀಡುತ್ತೇವೆ. ಕಲಾವಿದರು ಎಲ್ಲಿಂದ ಬಂದರೂ ಪ್ರೋತ್ಸಾಹ ನೀಡಬೇಕು. ಕರ್ನಾಟಕದ ಬಗ್ಗೆ ಪ್ರಿಯಾಗೆ ಪ್ರೀತಿ ಇದೆ.'' ಎಂದಿದ್ದಾರೆ.